Friday, January 31, 2014

Dialy Crime Reports 31-01-2014

ದೈನಂದಿನ ಅಪರಾದ ವರದಿ.

ದಿನಾಂಕ 31.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ದಿನಾಂಕ 27-01-2014 ರಂದು ರಾತ್ರಿ 10:00 ಗಂಟೆಗೆ ಮಂಜನಾಡಿ ಕಡೆಯಿಂದ ನೆತ್ತಿಲಪದವು ಕಡೆಗೆ ಕೆಎ-19-ಇಸಿ-9483 ನೇ ಬೈಕು ಸವಾರ ರವಿ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೇಲ್ಕಾಣಿಸಿದ ಸ್ಥಳದಲ್ಲಿ ತಲುಪಿ ಬ್ರೇಕ್ ಹಾಕಿದಾಗ ಬೈಕ್ ಮಗುಚಿ ಬಿದ್ದು, ಸಹಸವಾರ ರಸ್ತೆಗೆ ರಟ್ಟಿ, ಅವರ ಬಲಕಾಲು ಪಾದದ ಮೇಲೆ ಬೈಕ್ ಬಿದ್ದು, ಪಾದಕ್ಕೆ ಕೀಲು ಮುರಿತದ ಗಾಯವಾಗಿರುತ್ತದೆ ಹಾಗೂ ಮಂಗಳೂರು ಯೇನೆಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿಯವರಾದ ಶ್ರೀಮತಿ ಯಶವಂತಿ ರವರ ಗಂಡನಾದ ವಿವೇಕ ಪೂಜಾರಿ ಎಂಬವರು ದಿನಾಂಕ 30-01-2014 ರಂದು 10:00 ಗಂಟೆಗೆ ಮನೆಯಿಂದ ಪೈಟಿಂಗ್ ಕೆಲಸಕ್ಕೆ ಹೋಗಿದ್ದು ನಂತರ ಪಿರ್ಯಾದಿಯವರು ಕೂಲಿ ಕೆಲಸಕ್ಕೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ದಾರಿ ಮಧ್ಯೆ ತನ್ನ ಗಂಡನಿಗೆ ಯಾರೋ ಇಬ್ಬರು ಹೊಡೆದಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಯಾರೋ ಎ.ಜೆ ಆಸ್ಪತ್ರೆಗೆ ದಾಖಲು ಮಾಡಿರುವಂತೆ ತಿಳಿದು ಬಂದಂತೆ ಪಿರ್ಯಾದಿಯು ಎ.ಜೆ ಆಸ್ಪತ್ರೆಗೆ ಹೋಗಿ ನೋಡಿದಲ್ಲಿ ಗಾಯಾಳು ತನ್ನ ಗಂಡ ವಿವೇಕ ಪೂಜಾರಿ ತೀವ್ರ ತರದ ಗಾಯದಿಂದ ಚಿಕಿತ್ಸೆಯಲ್ಲಿದ್ದು, ಈ ಸಮಯ ತನಗೆ ಮಂಜುನಾಥ ಯಾನೆ ಕಳ್ಳ ಮಂಜ ಮತ್ತು ಇನ್ನೊಬ್ಬನು ಸೇರಿ ಚೂರಿಯಿಂದ ತಿವಿದು ತೀವ್ರ ಸ್ವರೂಪದ ಗಾಯ ಉಂಟು ಮಾಡಿರುತ್ತಾರೆ ಎಂದು ತಿಳಿಸಿದ್ದು ನಂತರ ಮಾತನಾಡಲು ಅಸೌಖ್ಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತೀವ್ರ ಘಟಕಕ್ಕೆ ವೈದ್ಯರು ದಾಖಲು ಮಾಡಿರುತ್ತಾರೆ.

 

3. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ರೋಶನ್ ಸಲ್ದಾನಾ ರವರ ಬಾಬ್ತು ಸ್ಟೇಟ್ ಬ್ಯಾಂಕ್ ನಿಂದ ಜಲ್ಲಿಗುಡ್ಡೆ ವರೆಗೆ ಚಲಿಸುವ ಸಿಟಿ ಬಸ್ ಕೆಎ 19 ಡಿ 2829 ರಲ್ಲಿ ದಿನಾಂಕ 30-01-14 ರಂದು ಚಕ್ಕರ್ ಆಗಿ ಹೋಗಿದ್ದು, ಸಂಜೆ 3-30 ಗಂಟೆಗೆ ಬಜಾಲ್ ಕ್ರಾಸ್ ನಿಂದ ಸ್ವಲ್ಪ ಮುಂದೆ ಒಂದು ಟಾಟಾ ಇಂಡಿಕಾ ಕಾರು ಎದುರು ಬಂದುದರಿಂದ ರಸ್ತೆ ಬ್ಲಾಕ್ ಆಯ್ತು. ಇದರಿಂದಾಗಿ ಬಸ್ ಚಾಲಕ ಹಾಗೂ ಕಾರಿನಚಾಲಕರ ಮಧ್ಯೆ ಮಾತಾಗಿದ್ದು, ನಂತರ ಫಿರ್ಯಾದುದಾರರು ಬಸ್ ನಿಂದ ಇಳಿದು ಕಾರು ಹಿಂತೆಗೆಯುವಂತೆ ವಿನಂತಿಸಿದಲ್ಲಿ ಆತ ಅವಾಚ್ಯ ಶಬ್ದಗಳಿಂದ ಬೈದಿದ್ದು, ನಂತರ ಬಸ್ ಚಾಲಕರಲ್ಲಿ ಬಸ್ ಹಿಂತೆಗೆಯುವಂತೆ ಹೇಳಿ ಬಸ್ ಚಲಾಯಿಸಿಕೊಂಡು ಮುಂದಕ್ಕೆ ಬಂದಿರುತ್ತಾರೆ. ನಂತರ ಸಂಜೆ 4-00 ಗಂಟೆಯ ವೇಳೆಗೆ ಕಂಕನಾಡಿ ಶಾಲೆಯ ಮುಂಭಾಗ ಬಸ್ ಸ್ಟಾಪ್ ಬಳಿ ತಲುಪುತ್ತಿದ್ದಂತೆಯೇ ಒಂದು ಇಂಡಿಕಾ ಕಾರು ಹಾಗೂ ಓಮ್ನಿ ಕಾರಿನಲ್ಲಿ ಸುಮಾರು 25-30 ವರ್ಷದ 4 ಜನ ಯುವಕರು ಬಂದು ಬಸ್ ಗೆ ಕಾರನ್ನು ಅಡ್ಡ ಇಟ್ಟು, ಫಿರ್ಯಾದುದಾರರ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾದುದಾರರ ಮುಖಕ್ಕೆ, ಕೆನ್ನೆಗೆ, ತಲೆಗೆ ಹಾಗೂ ಶರೀರಕ್ಕೆ ಹೊಡೆದುದಲ್ಲದೇ, ಫಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸುಮಾರು ಒಟ್ಟು 12.5 ಪವನ್ ತೂಕದ ಚಿನ್ನದ ಚೈನು ಮತ್ತು ಕೈಯಲ್ಲಿದ್ದ ಬ್ರಾಸ್ ಲೈಟ್ ನ್ನು ಎಳೆದುಕೊಂಡು ಹೋಗಿದ್ದು, ಫಿರ್ಯಾದುದಾರರು ಕಾರಿನ ನಂಬ್ರವನ್ನು ನೋಡಿದ್ದು, KA 19 B 9733 ಮತ್ತು  KA 19 C 6567 ಆಗಿದ್ದು, ನಂತರ ಫಿರ್ಯಾದುದಾರರು ಚಿಕಿತ್ಸೆ ಬಗ್ಗೆ ಕೊಲಸೋ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.

 

4. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-01-2014 ರಂದು 13-15 ಗಂಟೆಗೆ ರಾಜೇಶ ಎಂಬವನು ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಹಳೇ ಬಸ್ನಿಲ್ದಾಣದ ಬಳಿಯಿರುವ ರಿಕ್ಷಾ ಪಾರ್ಕ್ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಎಂಬ ಜುಗಾರಿ ಆಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದುದನ್ನು ಅಬಕಾರಿ ಮತ್ತು ಲಾಟರಿ ಜಾರಿ ನಿಷೇಧ ದಳ, ಮಂಗಳೂರು ವಿಶೇಷ ಪೊಲೀಸ್ಠಾಣೆಯ ನಿರೀಕ್ಷಕರಾದ ಶ್ರೀ ಎಫ್.ಎನ್. ಲಿಂಗಾವಲ್ ರವರು ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಠಾಣೆಗೆ ವರದಿ ನೀಡಿರುವುದಾಗಿದೆ.

 

5. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24/01/2014 ರಂದು ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 29/01/2014 ರಂದು 14.00 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಅಲ್ಬುಕರ್ಕ ಛೇಂಬರ್ಸ ನ ಕಟ್ಟಡದಲ್ಲಿರುವ 18 ಕರ್ನಾಟಕ ಬೇಟಾಲಿಯನ್ನ ಎನ್.ಸಿ.ಸಿ ಬಾಬ್ತು ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ರಕ್ಷಣಾ ಇಲಾಖೆಯ ಕರ್ತವ್ಯಕ್ಕೆ ಸಂಬಂದಪಟ್ಟ 05 D 162139 L ನೇ ನಂಬ್ರದ Swaraj Mazda ವಾಹನದ ಡಿಸ್ಕ್ ಸಹಿತ ಟಾಯರ್ ನ್ನು ಕಳುವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತಿನ ಅಂದಾಜು ಮೌಲ್ಯ 21,000 ರೂಪಾಯಿ ಆಗಬಹುದು.

 

6. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2014 ರಂದು ಪಿರ್ಯಾದಿದಾರರಾದ ಶ್ರೀ ಗಣಪತಿ ಕೆ. ನಾಯ್ಕ್ ರವರು ಸವಾರರಾಗಿ ಹಾಗೂ ಮನೋಹರ್ ರವರು ಸಹಸವಾರರಾಗಿ ಕೆಲಸದ ನಿಮಿತ್ತ ಕಂಪನಿಯ ಬಾಬ್ತು ಕೆ ಎ 19-ಇಎಪ್- 0820 ನೇ ಸ್ಕೂಟರ್ ನಲ್ಲಿ ಮುಲ್ಕಿಗೆ ತೆರಳಿ ವಾಪಾಸು ಬೈಕಂಪಾಡಿ ಕಡೆಗೆ ರಾ ಹೆ 66 ರಲ್ಲಿ ತೆರಳುತ್ತಿದ್ದು ಮಂಗಳೂರು ತಾಲೂಕು ಕುಳಾಯಿ ಗ್ರಾಮದ ಹೊನ್ನಕಟ್ಟೆ ಜಂಕ್ಷನ್ ಬಳಿ ರಾತ್ರಿ 8-15 ಗಂಟೆಗೆ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಕುಳಾಯಿಗುಡ್ಡೆ ಕಡೆಗೆ ಕೆ ಎ-19- ಇಜೆ- 4762 ನೇ ಸ್ಕೂಟರನ್ನು ಅದರ ಸವಾರ ದೇವಪ್ಪ ನಾಯ್ಕನು ಅಜಾಗರೂಕತೆಯಿಂದ ಒಮ್ಮೆಲೆ ರಸ್ತೆಯ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಉಂಟಾಗಿ ಪಿರ್ಯಾದಿದಾರರು ಹಾಗೂ ಸಹಸವಾರ ಮನೋಹರರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಹಾಗೂ ಅಪಘಾತ ಪಡಿಸಿದ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅಪಘಾತದಿಂದಾಗಿ ಮನೋಹರ ರವರ ತಲೆಗೆ ಗುದ್ದಿದ ಗಾಯ ಹಾಗೂ ಕಾಲಿಗೆ ತರಚಿದ ಗಾಯವಾಗಿದ್ದು, ಮನೋಹರರವರಿಗೆ ಹೆಚ್ಚಿನ ಗಾಯವಾಗದ ಕಾರಣ ಪಿರ್ಯಾದಿದಾರರು ಮನೋಹರರವರ ಜೊತೆ ರೂಮಿಗೆ ತೆರಳಿದ್ದು ಈ ದಿನ ದಿನಾಂಕ 30-01-14 ರಂದು ಬೆಳಿಗ್ಗೆ ಮನೋಹರ್ ರವರಿಗೆ ತಲೆಗೆ ಆದ ಗಾಯದಿಂದ ನೋವುಂಟಾಗಿದ್ದರಿಂದ ಚಿಕಿತ್ಸೆ ಬಗ್ಗೆ ಮಂಗಳೂರಿನ ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

7. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28/01/2014 ರಂದು 17.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರವರು ತನ್ನ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ KA 19 MD 8034 ನೇದರಲ್ಲಿ ಗುರುಕಂಬ್ಳದಿಂದ ಕೈಕಂಬದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಗುರುಕಂಬ್ಳ ತಿರುವು ರಸ್ತೆ ಎಂಬಲ್ಲಿ ತಲುಪುತಿದ್ದಂತೆ, ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಲಾರಿ ನಂಬ್ರ KA 19 C 7932 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ಹಣೆಗೆ ತರಚಿದ ಗಾಯ, ಎಡಕೈಯ 4 ಬೆರಳುಗಳಿಗೆ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

8. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-01-14 ರಂದು ಮಧ್ಯಾಹ್ನ ಪಿರ್ಯಾದಿದಾರರಾದ ಶ್ರೀ ಮೋಹನ್ ಕುಮಾರ್ ರವರು ಅವರ ದೊಡ್ಡಪ್ಪನವರಾದ ಮೋನಪ್ಪ ದೇವಾಡಿಗ ಎಂಬವರ ಜೊತೆಯಲ್ಲಿ ಹೊಸಬೆಟ್ಟು ದೀಪಾ ಫಾರ್ಮ್ಸ್ ಬಳಿ ಇರುವ ಪಿರ್ಯಾದಿದಾರರ ತಂದೆಯ ಬಾಬ್ತು ಚಾ, ತಿಂಡಿಯ ಕ್ಯಾಂಟೀನ್ ಗೆ ಹೋಗುವರೇ ರಾ.ಹೆ. 66 ರ ಪಶ್ಚಿಮ ಬದಿಗೆ ಬಂದು ಬಲಗಡೆ ನೋಡುತ್ತಾ ರಸ್ತೆ ದಾಟುತ್ತಿದ್ದ ಸಮಯ ಮಧ್ಯಾಹ್ನ ಸಮಯ ಸುಮಾರು 3-30 ಗಂಟೆಗೆ ಸುರತ್ಕಲ್ ಕಡೆಯಿಂದ ಬೈಕಂಪಾಡಿ ಕಡೆಗೆ ಒಂದು ಬಸ್ಸು ಬರುತ್ತಿದ್ದು ಅದರ ಹಿಂದಿನಿಂದ ಒಂದು ಪಿಕ್ ಅಪ್ ವಾಹನ ಕೆಎ-19-ಬಿ-9027 ನೇದನ್ನು ಅದರ ಚಾಲಕ ಅತೀ ವೇಗವಾಗಿ ಚಲಾಯಿಸಿಕೊಂಡು ಬರುತ್ತಾ ಬಸ್ಸಿನ  ಎಡ ಬದಿಯಿಂದ ಓವರ್ ಟೇಕ್ ಮಾಡಿ ರಸ್ತೆಯ ತೀರಾ ಎಡ ಬದಿಗೆ ಬಂದು ಪಿರ್ಯಾದಿದಾರರ ದೊಡ್ಡಪ್ಪನವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ರಕ್ತ ಗಾಯವಾಗಿದ್ದು ಬಲ ಕೈಗೆ ಮೂಳೆ ಮುರಿತದ ಗಾಯ ಹಾಗೂ ಬೆನ್ನು ಭಾಗದ ಒಳಗಡೆ ಗಂಭೀರ ಗಾಯವಾಗಿದ್ದು ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

9. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-01-14 ರಂದು ಬೆಳಿಗ್ಗೆ 10-30 ಗಂಟೆಗೆ ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಕೈಕಂಬ ಎಂಬಲ್ಲಿ ಪಿರ್ಯಾದಿದಾರರಾದ ಮೊಹಮ್ಮದ್ ನೌಷಾದ್ @ ಹಸನಬ್ಬಾ ರವರು ಮತ್ತು ದಾಮೋದರ್ ರವರು ಹೊಟೇಲಿಗೆ ಹೋಗುತ್ತಿದ್ದಾಗ ಸೈಂಟ್ ಆ್ಯಂಟನಿ ಬಸ್ಸಿನ ಚಾಲಕ ರಾಜ ಹಾಗೂ ಆತನ ಸ್ನೇಹಿತ ಗಂಗಾಧರ ಎಂಬವರು ಮೋಟಾರ್ ಸೈಕಲ್ ನಲ್ಲಿ ಬಂದು ನಿನ್ನೆ  ದಿನಾಂಕ; 30-01-14 ರಂದು ಬಸ್ಸಿನ ವೇಳಾ ಪಟ್ಟಿ ವಿಷಯದಲ್ಲಿ ನಡೆದ ಮಾತಿನ ಜಗಳದ ವಿಚಾರವಾಗಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ರಾಜ ಎಂಬಾತನು ಅವಾಚ್ಯ ಶಬ್ದಗಳಿಂದ ಬೈದು ಹೊಟೇಲ್ ನ ಹೊರಗಡೆ ಇದ್ದ ಸೋಡಾ ಬಾಟಲಿಯನ್ನು ತುಂಡು ಮಾಡಿ ಪಿರ್ಯಾದಿದಾರರಿಗೆ ಎಡ ಕೈಯಿಂದ ಹೊಡೆದು ಬಲಕೈಯಲ್ಲಿದ್ದ ಸೋಡಾ ಬಾಟಲಿ ತುಂಡಿನಿಂದ ಪಿರ್ಯಾದಿದಾರರ ಮುಖಕ್ಕೆ ಗೀರಿ ರಕ್ತ ಗಾಯಗೊಳಿಸಿದ್ದಲ್ಲದೇ ಅಲ್ಲಿದ್ದ ಗಂಗಾಧರ ಎಂಬಾತನು ಜೋರಾಗಿ ಮಾತನಾಡಿ ಬೆದರಿಕೆ ಹಾಕಿದ್ದು ಅಲ್ಲದೇ ಚಾಲಕ ದಾಮೋದರರವರಿಗೆ ಕೂಡಾ ಬೆದರಿಕೆ ಹಾಕಿದ್ದು ಈ ಗಲಾಟೆಗೆ ಬಸ್ಸಿನ ಮಾಲಿಕರಾದ ರೋಶನ್ ರವರು ಕಾರಣರಾಗಿರುತ್ತಾರೆ.

 

10. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  30.01.2014 ರಂದು  ರಾತ್ರಿ ಸುಮಾರು 7:45 ಗಂಟೆ ಸಮಯಕ್ಕೆ ಡೋನಾಲ್ಡ್ಡಿಸೋಜ ಎಂಬವರು  ಅವರ ಬಾಬ್ತು ಮಹೀಂದ್ರ XYLO ಕಾರು  ನಂಬ್ರ KA 19 MA 3202 ನ್ನು  ಸಾರ್ವಜನಿಕ NH 75ನೇ ರಸ್ತೆಯಾದ BC ರೋಡ್‌  ಕಡೆಯಿಂದ ಪಡೀಲ್ಕಡೆಗೆ ಮಾನವ ಜೀವಕ್ಕೆ ಅಪಾಯವಾಗುವಂತೆ ಅತೀ ವೇಗ  ಯಾ ದುಡುಕುತನದಿಂದ ಚಲಾಯಿಸಿ ಕೊಡೆಕ್ಕಲ್ ಎಂಬಲ್ಲಿರುವ KBS ಜನರಲ್‌  ಸ್ಟೋರ್ಅಂಗಡಿಯ ಮುಂಭಾಗ ರಸ್ತೆ ಅಡ್ಡ ದಾಟುತ್ತಿದ್ದ ಪುರುಷೋತ್ತಮ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪುರುಷೋತ್ತಮರವರು ಡಾಮರು ರಸ್ತೆಗೆ ಬಿದ್ದು  ತಲೆಗೆ, ಕೈ, ಕಾಲುಗಳಿಗೆ, ಮತ್ತು ಎದೆಯ ಭಾಗಕ್ಕೆ ರಕ್ತ ಬರುವ ಹಾಗೂ ಗುದ್ದಿದ ನೋವುಂಟಾದವರನ್ನು ಚಿಕಿತ್ಸೆಯ ಸಲುವಾಗಿ ಕಂಕನಾಡಿ ಫಾದರ್ಮುಲ್ಲರ್ಸಾಗಿಸುತ್ತಿದ್ದಂತೆ ಮೃತಪಟ್ಟಿರುವುದು.

Thursday, January 30, 2014

One Associate of Vicky Shetty Nabbed By Mangalore City Police

ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ರಾದಾ ಯಾನೆ ರಾದಾಕೃಷ್ಣ ಶೆಟ್ಟಿಯನ್ನು ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನ.
ನಿನ್ನೆ ದಿನ ತಾರೀಕು 29-01-2014 ರಂದು ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ನಗರದ ಕುಡ್ಪಾಡಿ ರೈಲ್ವೆ ಕ್ರಾಸ್ ಬಳಿಯಲ್ಲಿ ಭೂಗತ ಪಾತಕಿ ವಿಕ್ಕಿಯ ಶೆಟ್ಟಿಯ ಸಹಚರರಾದ ಆಕಾಶಭವನ ಶರಣ್ ಮತ್ತು ಕಾಸರಗೋಡಿನ ರಾದಾ ಯಾನೆ ರಾದಾಕೃಷ್ಣ ಶೆಟ್ಟಿ ಇವರು ಯಾವುದೋ ತಕ್ಷೀರು ಮಾಡುವ ಉದ್ದೇಶವನ್ನು ಮಾಡುವ ಇರಾದೆಯಿಂದ ಇದ್ದಾರೆ ಎಂಬುದಾಗಿ ಮಾಹಿತಿ ಇದ್ದು, ಅದರಂತೆ ಸಿಸಿಬಿ ಪೊಲೀಸರು ಅಲ್ಲಿ ಹೋದಾಗ ಶರಣ್ ಎಂಬಾತನು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದು, ರಾದಾಕೃಷ್ಣ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ರಾದಾಕೃಷ್ಣ ಶೆಟ್ಟಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ, ಇವರಿಬ್ಬರು ಬಿಜೈ ರಾಜಾ ಕೊಲೆ ಪ್ರಕರಣದ ಆರೋಪಿಗಳಾದ ಮಹೇಶ್ ಕೋಡಿಕಲ್ ಮತ್ತು ಚಂದು ಯಾನೆ ಚಂದ್ರಹಾಸ ಶೆಟ್ಟಿಯನ್ನು ಕೊಲೆ ಮಾಡುವ ಉದ್ದೇಶದಿಂದ ತಾವು ಒಟ್ಟು ಸೇರಿ ಮಾತುಕತೆ ನಡೆಸುತ್ತಿದ್ದುದು ಅಲ್ಲದೇ ಈ ಕೃತ್ಯಕ್ಕೆ ತನ್ನ ಬಳಿ ಪಿಸ್ತೂಲಿನ 4 ಮದ್ದುಗುಂಡುಗಳು ಮತ್ತು ಮ್ಯಾಗಜೀನ್ ಇದ್ದುದಾಗಿಯೂ ತಿಳಿಸಿದ್ದು, ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ. ನಂತರ ಆತನು ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದಂತೆ ಆತನ ಮನೆಯಲ್ಲಿ ಇದ್ದಂತಹ ಪಿಸ್ತೂಲು ಹಾಗೂ ಮದ್ದುಗುಂಡುಗಳನ್ನು ಕೂಡ ಸ್ವಾಧೀನಪಡಿಸಲಾಗಿದೆ.
ಬಂಧಿತನಾಗಿರುವ ರಾದಾಕೃಷ್ಣ ಶೆಟ್ಟಿಯು ಕಳೆದ ವರ್ಷದಲ್ಲಿ ವಲೇನ್ಸಿಯಾದಲ್ಲಿ ನಡೆದ ಪಚ್ಚು ಯಾನೆ ಪ್ರಶಾಂತ್ ಶೆಟ್ಟಿಯ ಕೊಲೆ ಪ್ರಕರಣದ ಆರೋಪಿಯಾಗಿ ತಲೆಮರೆಸಿಕೊಂಡಿದ್ದನು. ಓಡಿ ಹೋದ ಆರೋಪಿ ಆಕಾಶಭವನ ಶರಣ್ ಎಂಬಾತನ ಮೇಲೆ ಹಲವಾರು ಕೊಲೆ ಪ್ರಕರಣಗಳು ಇದ್ದು, ಆಕಾಶಭವನ ಶರಣ್ನಿಗೆ ರಾದಾಕೃಷ್ಣ ಶೆಟ್ಟಿಯು ತನ್ನ ಮನೆಯಲ್ಲಿ ಆಶ್ರಯವನ್ನು ಕೂಡ ನೀಡಿರುತ್ತಾನೆ. ಪ್ರಕರಣವು ತನಿಖಾ ಹಂತದಲ್ಲಿರುತ್ತದೆ.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ.ಆರ್.ಹಿತೇಂದ್ರ, ಐ.ಪಿ.ಎಸ್ ರವರ ನಿದರ್ೇಶನದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮಾನ್ಯ ಪೊಲೀಸ್ ಉಪ-ಆಯುಕ್ತರಾದ ಶ್ರೀ.ಡಾ.ಕೆ.ವಿ.ಜಗದೀಶ್ರವರ ಮಾಗದರ್ಶನದಂತೆ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ರವರಾದ ಶ್ರೀ.ಪವನ್. ನಜ್ಜೂರುರವರು ಹಾಗೂ ಮಂಗಳೂರು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ರವರಾದ ಶ್ರೀ.ವೆಲೆಂಟೈನ್ ಡಿಸೋಜ ಮತ್ತು ಪಿಎಸ್ಐ ಶ್ಯಾಮ್ಸುಂದರ್ ಹಾಗೂ ಸಿಬ್ಬಂದಿಯವರಾದ ಶಶಿಧರ ಶೆಟ್ಟಿ, ಗಣೇಶ್.ಎಂ.ಪಿ, ಗಣೇಶ್ ಕಲ್ಲಡ್ಕ, ವೇಣುಗೋಪಾಲ, ಚಂದ್ರಶೇಖರ, ದಿನೇಶ್ ಬೇಕಲ್ ಹಾಗೂ ಚಾಲಕ ತೇಜಕುಮಾರ್ ರವರು ಕಾಯರ್ಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

Wednesday, January 29, 2014

Daily Crime Reports 29-01-2014

ದೈನಂದಿನ ಅಪರಾದ ವರದಿ.

ದಿನಾಂಕ 29.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

3

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  21-01-2014 ರಂದು ರಾತ್ರಿ 10-00 ಗಂಟೆ  ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಅಬ್ದುಲ್ ಸತ್ತಾರ್ ರವರು ತನ್ನ ಕೆ.19-ಇಬಿ-7785 ನಂಬ್ರದ Active Honda ವನ್ನು ಎಂದಿನಂತೆ ಮಂಗಳೂರು ನಗರದ ಕುದ್ರೋಳಿಯ ಜಾಮೀಯಾ ಮಸೀದಿಯ ಬದಿಯಲ್ಲಿ   ಪಾರ್ಕ್ಮಾಡಿ ಹೋಗಿದ್ದು, ನಂತರ ವಾಪಾಸ್ಸು, ದಿನಾಂಕ 22-01-2014ರ ಬೆಳಿಗ್ಗೆ 05-30 ಗಂಟೆ ಮಧ್ಯೆ ಬಂದು ನೋಡಿದಾಗ ತಾನು ಪಾರ್ಕ್ಮಾಡಿದ Active Honda ವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ Active Honda ದ ಸೀಟಿನಡಿಯಲ್ಲಿ ಪಿರ್ಯಾದುದಾರರ ಚಾಲನಾ ಪರವಾನಿಗೆ, ಹಾಗೂ ಇನ್ನಿತ್ತರ  ದಾಖಲಾತಿ ಪತ್ರಗಳು ಕೂಡಾ ಇದ್ದವುಕಳವಾದ Active Honda ದ ಮೌಲ್ಯ ರೂ. 35000/- ಆಗಿರುವುದಾಗಿದೆ.

 

2. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2014 ರಂದು ಫಿರ್ಯಾದಿದಾರರಾದ ಶ್ರೀ ವಾಲ್ಟರ್ ಡಿ'ಸೋಜಾ ರವರು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಸಂಜೆ ಸುಮಾರು 7:30 ಗಂಟೆಗೆ ಕಾರ್ಕಳದ ಅತ್ತೂರು ಚರ್ಚಿನ ವಾರ್ಷಿಕ ಜಾತ್ರೆಗೆ ಹೋದವರು ದಿನಾಂಕ 29-01-2014 ರಂದು ಬೆಳಿಗ್ಗೆ 5:15 ಗಂಟೆ ಮನೆಗೆ ವಾಪಾಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದು ಮನೆಯ ಒಳಪವ್ರವೇಶಿಸಿ ಮನೆಯ ಹಾಲ್ನಲ್ಲಿದ್ದ ಅಲ್ಮೇರವನ್ನು ತೆರೆದು ಅದರ ಒಳಗಿದ್ದ ಬಟ್ಟೆ-ಬರೆಗಳನ್ನು ಚೆಲ್ಲಾಪಿಲಿ ಮಾಡಿ ನಂತರ  ಬೆಡ್ರೂಂನ ಒಳಗಡೆ ಇದ್ದ ಕಬ್ಬಿಣದ ಅಲ್ಮೇರವವನ್ನು ಮಲಗುವ ಮಂಚದ ಮೇಲೆ ಹಾಕಿ, ಅಲ್ಮೇರವನ್ನು ಬಲಾತ್ಕರವಾಗಿ ಯಾವುದೋ ಆಯುಧದಿಂದ ಮೀಟಿ ತೆರದು ಅದರ ಒಳಗಡೆ ಇಟ್ಟಿದ್ದ ಪಿರ್ಯಾದಿದಾರರ ಹೆಂಡತಿಯ ಮತ್ತು ಮಗಳ 1) ಸುಮಾರು 34 ಗ್ರಾಂ ತೂಕದ ಕರಿಮಣಿ ಸರ-1,  2) ಸುಮಾರು 16 ಗ್ರಾಂ ತೂಕದ ಪ್ಲಸ್ ಗುರುತಿನ ಪೆಡೆಂಟ್ ಇದ್ದ ಚೈನ್-1, 3) ಸುಮಾರು 8 ಗ್ರಾಂ ತೂಕದ ನಕ್ಲೆಸ್-1 4) ಸುಮೂರು 24 ಗ್ರಾಂ ತೂಕದ ಪ್ಲೆನ್ ಬಳೆ-2, 5) ಸುಮಾರು 8 ಗ್ರಾಂ ತೂಕದ ಪ್ಲಸ್ ಗುರುತಿನ ಪೆಡೆಂಟ್ ಇದ್ದ ಚೈನ್-1, 6)ಸುಮಾರು 4 ಗ್ರಾಂ ತೂಕದ ಕೈ ಬೆರಳಿನ ಉಂಗುರ-2, 7) ಸುಮಾರು 2 ಗ್ರಾಂ ತೂಕದ ಮಗುವಿನ ಕಿವಿಯ ಓಲೆ-ಒಂದು ಜೊತೆ, ಮತ್ತು ನಗದು ಹಣ 8,000/- ರೂಪಾಯಿಯನ್ನು ಕಳುವು ಮಾಡಿಕೊಂಡು ಹೋಗಿದ್ದು, ಕಳುವಾದ ಚಿನ್ನಾಭರಣಗಳ ಮತ್ತು ನಗದಿನ ಅಂದಾಜು ಬೆಲೆ 2,38,400/-  ಆಗಬಹುದು.

 

3. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28/01/2014  ರಂದು 21:15 ಗಂಟೆಗೆ ಬಪ್ಪನಾಡು ಗ್ರಾಮದ, ಮುಲ್ಕಿ ಬಸ್ಸು ನಿಲ್ದಾಣದ ಬಳಿ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪಿ ಕುಟ್ಟಿ ಸಾಲ್ಯಾನ್ ನನ್ನು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಬಂದರು, ಮಂಗಳೂರು ವಿಶೇಷ ಪೊಲೀಸ್ ಠಾಣೆಯ ಪೊಲೀಸ್‌‌ ನಿರೀಕ್ಷಕರಾದ ಎಫ್. ಎನ್ ಲಿಂಗದಾಳ್ ಇವರು ಪೊಲೀಸ್ ಉಪಾಧೀಕ್ಷಕರ ದಳದ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿ ಕುಟ್ಟಿ ಸಾಲ್ಯಾನ್ ನನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 985/- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಚೀಟಿ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ನೀಲಿಬಣ್ಣದಬಾಲ್ ಪೆನ್ನು-1, ಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿ ಕುಟ್ಟಿ ಸಾಲ್ಯಾನ್  ಹಾಗೂ ಸೊತ್ತು ಸಮೇತ ಮುಲ್ಕಿ ಠಾಣೆಗೆ ಹಾಜರುಪಡಿಸಿರುವುದಾಗಿದೆ.

 

4. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.01.2014 ರಂದು ಬಳಿಗ್ಗೆ ಸುಮಾರು 08.00 ಗಂಟೆಗೆ ಕಾರು ನಂಬ್ರ KA19-MD-4978 ನ್ನು ಅದರ ಚಾಲಕ ನಂತೂರು ಜಂಕ್ಷನ್ ಕಡೆಯಿಂದ ಶಿವಬಾಗ್ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಂತೂರು ಬಳಿಯ ಶ್ರೀರಾಮ್ ಪೈನಾನ್ಸ್ ಇರುವ ಕಟ್ಟಡದ ಬಳಿ ತಲುಪುವಾಗ ಒಮ್ಮೆಲೇ ಬಲಕ್ಕೆ ಚಲಾಯಿಸಿದ್ದರಿಂದ  ಹಿಂದಿನಿಂದ ಬರುತ್ತಿದ್ದ ಪಿರ್ಯಾದುದಾರರಾದ ಕು. ಚೈತ್ರಾ ರವರ ಸ್ಕೂಟರ್ ನಂಬ್ರ KA19-EH-8091 ಕ್ಕೆ ಡಿಕ್ಕಿ ಮಾಡಿದ ಪರಿಣಾಮ, ಪಿರ್ಯಾದುದಾರರು ಸ್ಕೂಟರ್  ಸಮೇತ ರಸ್ತೆಗೆ ಬಿದ್ದು,ಎಡಕಣ್ಣಿನ ಮೇಲ್ಭಾಗಕ್ಕೆ ರಕ್ತಗಾಯ, ಬಾಯಿಗೆ, ತುಟಿಗೆ, ಎಡಕೈಗೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿ ಸಿಟಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಿರುವುದಾಗಿದೆ.

 

5. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.01.2014 ರಂದು ಸಮಯ ಸುಮಾರು 15.10 ಗಂಟೆಗೆ ಪಿರ್ಯಾದುದಾರರಾದ ಲದ್ರು ಡಿ'ಸೋಜಾ ರವರು ಮಾರ್ನಾಮಿಕಟ್ಟೆ ದ್ವಾರದ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಕಾಶಿಯಾ ಜಂಕ್ಷನ್ ಕಡೆಯಿಂದ ಕೋಟಿ ಚೆನ್ನಯ್ಯ ಸರ್ಕಲ್ ಕಡೆಗೆ ಬಸ್ಸು ನಂಬ್ರ KA19-B-4778 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಭಾಗದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂಭಾಗದ ಚಕ್ರ ಎಡಕಾಲಿನ ಪಾದದ ಮೇಲೆ ಹರಿದು ಹೋಗಿ ಗಂಭೀರ ಸ್ವರೊಪದ ಗಾಯ ಉಂಟಾಗಿ ಪಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

6. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2014 ರಂದು 19-00 ಗಂಟೆಯಿಂದ ದಿನಾಂಕ 25-01-2014 ರಂದು 09-30 ಗಂಟೆಯ ಮಧ್ಯೆ  ಮಂಗಳೂರು ನಗರದ ಫಳ್ನೀರು ರಸ್ತೆಯಲ್ಲಿರುವ ಮಿಲ್ಲೇನಿಯಂ ಕಟ್ಟಡದ 1ನೇ ಮಹಡಿಯಲ್ಲಿರುವ  ಪಿರ್ಯಾದಿದಾರರಾದ ನವೀಶಾ ಲತೀಫ್ ರವರ ಬಾಬ್ತು ಇ.ಎನ್.ಟಿ. ಕ್ಲೀನಿಕ್ ನ ಶಟರ್ ಡೋರಿಗೆ ಅಳವಡಿಸಿದ ಬೀಗವನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಒಳ ಪ್ರವೇಶಿಸಿ ಕ್ಲೀನಿಕ್ ನ ಒಳಗೆ ಪಿರ್ಯಾದಿದಾರರ ಕ್ಯಾಬೀನ್ ನ ಟೇಬಲ್ ಮೇಲೆ ಇದ್ದ ಸುಮಾರು 15,000/- ರೂ ಬೆಲೆ ಬಾಳುವ ಡೆಲ್ ಕಂನಿಯ ಲ್ಯಾಪ್ ಟಾಪ್-1, ಉಪಕರಣಗಳ ಶೆಲ್ಫ್ ಮೇಲೆ ಇಟ್ಟಿದ್ದ ಅಂದಾಜು ರೂ. 5,000/- ಬೆಲೆ ಬಾಳುವ ಒನಿಡಾ ಕಂಪನಿಯ ಟಿ.ವಿ-1 ಮತ್ತು ವಿ-ಗಾರ್ಡ್ ಕಂಪನಿಯ ಅಂದಾಜು ರೂ. 2,000/- ಬೆಲೆ ಬಾಳುವ ಸ್ಟೆಬಿಲೈಸರ್-1 ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ.22,000/- ಆಗಬಹುದು.

 

7. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2014 ರಂದು ಸಂಜೆ ಸುಮಾರು 17-00 ಗಂಟೆಯಿಂದ ದಿನಾಂಕ 29-01-2014 ರಂದು ಬೆಳಿಗ್ಗೆ 08-30 ಗಂಟೆಯ ಮಧ್ಯೆ ಪಿರ್ಯಾದಿದಾರರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿಕೊಂಡಿರುವ ಕಂಕನಾಡಿಯಲ್ಲಿರುವ ಸಂತ.ಜೋಸೆಫ್ಸ್ ಪ್ರೌಢ ಶಾಲೆಯ ಬಾಗಿಲಿನ ಚಿಲಕದ ಬೀಗವನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆಗೆದು ಒಳಪ್ರವೇಶಿಸಿದ ಯಾರೋ ಕಳ್ಳರು, ಸದ್ರಿಯವರ ಕಛೇರಿಯೊಳಗಿದ್ದ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸದ್ರಿಯವರ ಕಛೇರಿಯಲ್ಲಿದ್ದ ಒಟ್ಟು 19,500/- ರೂ ಬೆಲೆ ಬಾಳುವ ಎಸರ್ ಕಂಪನಿಯ ಮೊನಿಟರ್-1, ಸಿ.ಪಿ.ಯು-1, ಮೌಸ್, ಕೀ-ಬೋರ್ಡ್  ಹಾಗೂ ರೂ.500/- ಬೆಲೆ ಬಾಳುವ ಜೀನಿಯಸ್ ಕಂಪನಿಯ ಸ್ಪೀಕರ್-1, ಹೀಗೆ ಒಟ್ಟು ರೂ.20,000/- ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

8. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ನಾರಾಯಣ ಪೂಜಾರಿ ಎಂಬವರ ಅಕ್ಕನ ಮಗನಾದ ಲತೀಶ್ ಪ್ರಾಯ 29 ವರ್ಷ ಎಂಬವನು ದಿನಾಂಕ 27-01-2014 ರಂದು ರಾತ್ರಿ ಸಮಯ ಯಾವುದೋ ವಿಷಪದಾರ್ಥವನ್ನು ತೆಗೆದುಕೊಂಡಿದ್ದು, ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೊಯ ಆಸ್ಪತ್ರೆಗೆ ಬೆಳಿಗ್ಗೆ 4 ಗಂಟೆಗೆ ದಾಖಲಿಸಿದ್ದು, ದಿನಾಂಕ 28-01-2014 ರ ಮದ್ಯಾಹ್ನದವರೆಗೆ ಲತೀಶ್ ನ ಸ್ಥಿತಿಯು ಉತ್ತಮವಾಗಿದ್ದು, ತದನಂತರ ಲತಿಶ್ ಗೆ ಯಾವುದೋ ಚುಚ್ಚು ಮದ್ದು ಕೊಟ್ಟನಂತರ ಒಂದು ರೀತಿಯಲ್ಲಿ ಮಾನಸಿಕ ಅಸ್ವಸ್ಥನಾಗಿ ವರ್ತಿಸುತ್ತಿದ್ದರಿಂದ ವೈದ್ಯರು ತಮಗೆ ಯಾವುದೇ ಮಾಹಿತಿ ನೀಡಿದೇ ಇದ್ದು, ದಿನಾಂಕ 28-01-2014 ರಂದು ರಾತ್ರಿ 9:30 ಗಂಟೆಗೆ ಲತೀಶ್ ನು ಐಸಿಯು ನಲ್ಲಿದ್ದ ಸಮಯ ಕಿಟಕಿಯ ಗಾಜುಗಳನ್ನು ಒಡೆದಿದ್ದು, ರಾತ್ರಿ ಸುಮಾರು 12 ಗಂಟೆಗೆ ಲತೀಶ್ ನು ಐಸಿಯು ನ ಕಿಟಕಿಯ ಗಾಜನ್ನು ಒಡೆದು 4 ನೇ ಮಹಡಿಯ ಮೇಲಿಂದ ಹಾರಿದ್ದು, ರಾತ್ರಿ 1:30 ಗಂಟೆ ಸಮಯಕ್ಕೆ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದು, ನೋಡಲಾಗಿ ಲತೀಶ್ ನು ಮೃತಪಟ್ಟಿರುವುದಾಗಿ ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿದಾಗ ಸದ್ರಿ ಲತೀಶ್ ನು ಮಾನಸಿಕ ಅಸ್ವಸ್ಥನಾಗಿ ಮಹಡಿಯಿಂದ ಹಾರಿ ಮೃತಪಟ್ಟಿರುವುದಾಗಿ, ಅವನು ವಿಷಪದಾರ್ಥ ಸೇವಿಸಿದ ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಯೆನಪೊಯ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಯ ಆಸ್ಪತ್ರೆಯ ವೈಧ್ಯಾಧಿಕಾರಿಯವರು ಹಾಗೂ ಸಿಬ್ಬಂಧಿಗಳು ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಳ್ಳದೇ ಇರುವುದರಿಂದ ಲತೀಶ್ ನು ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿ ಮೃತಪಡಲು ಅವಕಾಶವಾಗಿರುತ್ತದೆ. ಲತೀಶ್ ನು ಆತ್ಮಹತ್ಯೆ ಮಾಡಿ ಮೃತಪಡಲು ಯೆನಪೊಯ ಆಸ್ಪತ್ರೆಯ ಕರ್ತವ್ಯನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯವರೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂಬುದಾಗಿದೆ. 

 

9. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಮಲ್ಲವ್ವ, ಶಿರಹಟ್ಟಿ, ಗದಗ ಜಿಲ್ಲೆ  ಎಂಬವರು ನೀಡಿದ ಫಿರ್ಯಾದಿಯ ಸಾರಾಂಶವೇನೆಂಧರೆ, ಜ್ಯೋತಿ ಎಂಬ ಹೆಂಗಸು ಫಿರ್ಯದಿದಾರರ ಮಗಳಾದ ಕುಮುದಾಳನ್ನು ನಕಲಿ ಜನನ  ಪ್ರಮಾಣ ಪತ್ರ ವನ್ನು  ಜನನ ಮತ್ತು ಮರಣ ನೊಂದಣಾಧಿಕಾರಿ, ಪಟ್ಟಣ  ಪಂಚಾಯತು, ಯಲ್ಲಾಪುರ, ಉತ್ತರ ಕನ್ನಡ  ಇಲ್ಲಿ ದಿನಾಂಕ: 28-10-2013 ರಂದು ಸೃಷ್ಟಿಸಿ  ನಕಲಿ ಜನನದ ದೃಢಪತ್ರವನ್ನು ವಿದ್ಯಾ ಎಂಬ ಹೆಸರಿನಲ್ಲಿ ಪಡೆದು, ಫಿರ್ಯಾದಿದಾರರ ಮಗುವಿನ ದಾಖಲಾತಿಯನ್ನು ಫೋರ್ಜರಿ ಮಾಡಿ, ಫಿರ್ಯಾದಿದಾರರಲ್ಲಿ ಹಣ ನೀಡುವಂತೆ ಒತ್ತಾಯಿಸುತ್ತಿರುವುದಾಗಿದೆ.