Monday, December 31, 2012

Daily crime incidents for December 31, 2012


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ:

  • ದಿನಾಂಕ: 28-12-2012 ರಂದು ಸಮಯ ರಾತ್ರಿ ಸುಮಾರು 10.15 ಗಂಟೆಗೆ ಅಟೊರಿಕ್ಷಾ ನಂಬ್ರ ಏಂ-19 ಂ- 5527ನ್ನು ಅದರ ಚಾಲಕ ಜೆಪ್ಪು ಮಾಕರ್ೆಟ್ ಕಡೆಯಿಂದ ಮುಳಿಹಿತ್ಲು ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಪಿರ್ಯಾದುದಾರರಾದ ರವಿಕಲ (50) ತಂದೆ- ದಿ.ರವಿಕುಮಾರ್, ಧನ್ಯ ಕೃಪ,  ಮಾರ್ನಮಿಕಟ್ಟೆ  ಮಂಗಳೂರು ರವರ ಮನೆ ಧನ್ಯಕೃಪಾದ ಬಳಿ ತಲುಪುವಾಗ ಪಿರ್ಯಾದುದಾರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಗಣೇಶ್ ಎಂಬವರು ಮಂಗಳಾದೇವಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊ,ಸೈಕಲ್ ನಂಬ್ರ ಏಂ-19 ಖ-3112 ಕ್ಕೆ ಡಿಕ್ಕಿಯುಂಟು ಮಾಡಿದ ಪರಿಣಾಮ ಮೊ,ಸೈಕಲ್ ಸವಾರ ಗಣೇಶ್ ಮತ್ತು ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡತೊಡೆಗೆ ರಕ್ತಗಾಯ ಉಂಟಾಗಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ರವಿಕಲ (50) ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ. 192/2012 279 , 337, ಐ.ಪಿ.ಸಿ,  & 134(ಬಿ)ಮೋ.ವಾ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಜೀವ ಬೆದರಿಕೆ ಪ್ರಕರಣ

ಮಂಗಳೂರು ದಕ್ಷಿಣ ಠಾಣೆ:

  • ದಿನಾಂಕ 29-12-2012 ರಂದು ರಾತ್ರಿ 9-00 ಗಂಟೆಗೆ ಫಿಯರ್ಾದುದಾರರಾದ ಶ್ರೀ ಕೆ.ಎಸ್.ಸೈಯದ್ ಪ್ರಾಯ 65 ವರ್ಷ, ತಂದೆ: ಹಾಜಿ ಕೆ. ಸುಲೈಮಾನ್, ವಾಸ: ಕೋಟೆ ಹೌಸ್, ಹೆಜಮಾಡಿ, ಉಡುಪಿ ಹಾಗೂ ಅವರ ತಮ್ಮ ಇಬ್ರಾಹಿಂ ರವರೊಂದಿಗೆ ಮಂಗಳೂರು ಅತ್ತಾವರದಲ್ಲಿರುವ ಅವರ ಇನ್ನೊಬ್ಬ ತಮ್ಮನಾದ ರಜಾಕ್ ರವರ ಮನೆಗೆ ಹೋಗುತ್ತಿದ್ದಾಗ, ಅತ್ತಾವರ ಬಿಷಪ್ ರಸ್ತೆಯಲ್ಲಿ ಆರೋಪಿಗಳಾದ ಅಜೀಜ್, ಹರ್ಷದ್ ಮತ್ತು ಇತರರು ಸಮಾನ ಉದ್ದೇಶದಿಂದ ಫಿಯರ್ಾದುದಾರರನ್ನು ಹಾಗೂ ಅವರ ತಮ್ಮನಾದ ಇಬ್ರಾಹಿಂರವರನ್ನು ತಡೆದು ನಿಲ್ಲಿಸಿ, ಬೇವಸರ್ಿ ಸೂಳೆ ಮಕ್ಕಳಾ ನಿಮಗೆ ಭಾರಿ ಅಹಂಕಾರ ಇದೆ. ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಅಹಂಕಾರವನ್ನು ಈಗಲೇ ಇಳಿಸಿ ನಿಮ್ಮನ್ನು ಈವತ್ತೆ ಕೊಲ್ಲದೆ ಬೀಡುವುದಿಲ್ಲ ಎಂಬುದಾಗಿ  ಹೇಳಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಅಜೀಜ್ ಮತ್ತು ಹರ್ಷದ್ರವರು ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿವಿಯಲು ಬಂದಾಗ, ನಾವು  ಬೊಬ್ಬೆ ಹಾಕಿದಾಗ, ದಾರಿ ಹೊಕರು ಬರುತ್ತಿರುವುದನ್ನು ಕಂಡು ಪರಾರಿಯಾಗಿರುವುದಾಗಿದೆ. ಈ ಕೃತ್ಯಕ್ಕೆ ದಿನಾಂಕ 29-12-2012 ರಂದು ಬೆಳಿಗ್ಗೆ 11-00 ಗಂಟೆಗೆ ಫಿಯರ್ಾದುದಾರರು ಅವರ ತಮ್ಮ ರಜಾಕ್ ರವರ ಮನೆಯಲ್ಲಿರುವಾಗ, ಆರೋಪಿ ಹರ್ಷದ್ ರವರ ತಂದೆಯಾದ ಬುನಯ್ಯರವರು ಫಿಯರ್ಾದುದಾರರಿಗೆ ಬೈದಾಡುತ್ತಿದ್ದು, ಈ ಬಗ್ಗೆ ವಿಚಾರಿಸಲು ಹೋಗಿರುವುದೇ ಕಾರಣವಾಗಿರುತ್ತದೆ ಎಂಬುದಾಗಿ ಶ್ರೀ ಕೆ.ಎಸ್.ಸೈಯದ್ ಪ್ರಾಯ 65 ವರ್ಷ, ತಂದೆ: ಹಾಜಿ ಕೆ. ಸುಲೈಮಾನ್, ವಾಸ: ಕೋಟೆ ಹೌಸ್, ಹೆಜಮಾಡಿ, ಉಡುಪಿ ಯವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅ.ಕ್ರ. 229/12 ಕಲಂ 341 504 506 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಉಳ್ಳಾಲ ಠಾಣೆ:

  • ಪಿರ್ಯಾದಿದಾರರಾದ ಚಾಲ್ಸರ್್ ವಿಕ್ಟರ್ ಲೋಬೊ, ಕುಂಪಲ, ಕೋಟೆಕಾರ್, ಮಂಗಳೂರು ರವರು 15 ದಿನಗಳ ಹಿಂದೆ ಮನೆಯ ಪಾಯ ತೆಗೆಯಲು ಸಚಿನ್ ಮತ್ತು ರೋಶನ್ ಎಂಬವರಿಗೆ ರೂಪಾಯಿ 14,000 ಕಾಂಟ್ರಾಕ್ಟ್ ಕೊಟ್ಟಿದ್ದು ಹೆಚ್ಚಾಗಿ ರೂ 1500 ಜಾಸ್ತಿ ಕೊಟ್ಟಿದ್ದು ನಂತರ ಆರೋಪಿಗಳು ಪಿರ್ಯಾದಿಯವರಲ್ಲಿ ಮನೆಯ ಪೂತರ್ಿ ಕೆಲಸ ಕೊಡಬೇಕೆಂದು ಕೇಳಿದಾಗ ಪಿರ್ಯಾದಿಯು ಬೇರೆಯವರಿಗೆ ಕಾಂಟ್ರಾಕ್ಟ್ ಕೊಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ಆರೋಪಿಗಳು ಸದ್ರಿ ಸ್ಥಳಕ್ಕೆ ಹೋಗಿ ಪಿರ್ಯಾದಿಯ ಸೈಟ್ ಗೆ ಬಂದು ನೋಡಿ ಪಿರ್ಯಾದಿಯನ್ನು ದಿನಾಂಕ 27.12.2012 ರಂದು 12.30 ಗಂಟೆಗೆ ಉಳ್ಳಾಲ ಗ್ರಾಮದ ಓವರ್ ಬ್ರಿಡ್ಜ್ ಬಳಿ ಕರೆದುಕೊಂಡು ಬಂದು ಮನೆಯ ಕೆಲಸ ಬೇರೆಯವರಿಗೆ ಕೊಟ್ಟಿದ್ದೀಯಾ, ಪಾಯ ತೆಗೆಯಲು ನಮಗೆ ಕೊಟ್ಟಿದ್ದು ಎಂದು ಹೇಳಿ ಪಿರ್ಯಾದಿಗೆ ಹೊಡೆದು ಪಿರ್ಯಾದಿಯ ಕಿಸೆಯಲ್ಲಿದ್ದ ರೂ 30,000ನ್ನು ತೆಗದುಕೊಂಡು ಹೋಗಿದ್ದು ಆ ಸಮಯ ಆರೋಪಿಗಳ ಜೊತೆಯಲ್ಲಿ ಕೇಶವ ಮತ್ತು ಶೈಲು ಎಂಬವರು ಕೂಡಾ ಇದ್ದು, ಈ ಬಗ್ಗೆ ಪಿರ್ಯಾದಿಯ ಜೊತೆಯಲ್ಲಿ ತೆಗೆದುಕೊಂಡು ಹೋದ ಹಣವನ್ನು ವಾಪಸ್ಸು ತೆಗೆದು ಕೊಡುವ ಬಗ್ಗೆ ಕೆಲವರು ಮಾತಾಡಲು ಬಂದಿದ್ದು  ಪಿರ್ಯಾದಿಯು ಈ ದಿನದವರೆಗೆ ಕಾದಿದ್ದು ಹಣವನ್ನು ತೆಗೆದು ಕೊಡದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡಿರುವುದು ಎಂಬುದಾಗಿ ಚಾಲ್ಸರ್್ ವಿಕ್ಟರ್ ಲೋಬೊ, ಕುಂಪಲ, ಕೋಟೆಕಾರ್, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 341/12 392,323,504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಇತರೆ ಪ್ರಕರಣ

ಉಳ್ಳಾಲ ಠಾಣೆ

  • ದಿನಾಂಕ 16.12.2012 ರಂದು ಬೆ. 10.30 ಗಂಟೆಗೆ ರಾಣಿಪುರ ಚಚರ್್ನ ವಿಚಾರಣೀಯ ಗುರುಗಳಾದ ರಿಚಡರ್್ ಸಲ್ದಾನ ಇವರು ಪಿರ್ಯಾದಿದಾರರಾದ ಶ್ರೀಮತಿ ಗೀತಾ ಡಿಸೋಜಾ ರವರ ಮಗನಾದ ರಿತೇಶ್ ಗ್ಲೆನ್ ಡಿಸೋಜಾನ ಕೆನ್ನೆಗೆ ಕಾರಣವಿಲ್ಲದೇ ಹೊಡೆದ ಬಗ್ಗೆ ಅದೇ ದಿನ ಸಂಜೆ 17.30 ಗಂಟೆಗೆ ಗುರುಗಳಾದ ರಿಚಡರ್್ ಸಲ್ದಾನ ರವರಲ್ಲಿ ಯಾವ ಕಾರಣಕ್ಕೆ ಪಿರ್ಯಾದಿಯ ಮಗನಿಗೆ ಹೊಡೆದಿರಿ ಎಂದು ಪಾಲನ ಸಮಿತಿಯ ಉಪಾಧ್ಯಕ್ಷರಾದ ನವೀನ್ ಡಿಸೋಜಾ ಇವರ ಸಮಕ್ಷಮ ವಿಚಾರಿಸುತ್ತಿದ್ದಾಗ ಪಿರ್ಯಾದಿಯ ವಿಚಾರಕ್ಕೆ ಸಂಬಂಧವಿಲ್ಲದ 3ನೇ ವ್ಯಕ್ತಿಯಾದ ಆರೋಪಿಯು ಚಚರ್್ ಆವರಣದಲ್ಲಿ ನೆರೆದಿದ್ದ ಭಕ್ತರ ಎದುರು ಪಿರ್ಯಾದಿಗೆ ಬೇವಾಸರ್ಿ ನೀನು ದೊಡ್ಡ ಜನರ ಹಾಗೇ ವತರ್ಿಸುವ ಅಗತ್ಯವಿಲ್ಲವೆಂದು ಮತ್ತು ಈ ಹಿಂದೆ ಸೇವೆ ಸಲ್ಲಿಸಿದ್ದ ಚಚರ್್ನ ಗುರುಗಳೊಂದಿಗೆ ಪಿರ್ಯಾದಿಗೆ ಅನೈತಿಕ ಸಂಬಂದವಿರುವುದಾಗಿ ಹೇಳಿ ತೊಂದರೆ ಉಂಟು ಮಾಡಿರುವುದು ಎಂಬುದಾಗಿ ಗೀತಾ ಡಿಸೋಜಾ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 340/12 ಕಲಂ 340/2012 ಕಲಂ 504,506,509 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

Sunday, December 30, 2012

Daily Crime Incidents for Dec 30, 2012



ಅಪಘಾತ ಪ್ರಕರಣ

ಸಂಚಾರ ಪೂವರ್ಾ ಠಾಣೆ:


  • ದಿನಾಂಕ: 28-12-2012 ರಂದು ಸಮಯ ಸುಮಾರು 18.30 ಗಂಟೆಗೆ ಪಿರ್ಯಾದುದಾರರಾದ ರುದ್ರಪ್ಪ.ಎಂ. (22) ತಂದೆ- ಸಂಗಪ್ಪ ಕೇರಾಫ್ ಯಮುನಾ ಗ್ರೂಫ್ಸ್, ನಂತೂರು,  ಮಂಗಳೂರು ರವರು ಟಿಪ್ಪರ್ ಲಾರಿ ನಂಬ್ರ ಏಂ-05 ಂಃ- 6161 ನ್ನು ಮರೋಳಿ ಕಡೆಯಿಂದ ಬಿಕರ್ನಕಟ್ಟೆ - ಜಯಶ್ರೀ ಗೇಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸೋಜಾ ಚಿಕನ್ ಸೆಂಟರ್ ಬಳಿ ತಲುಪುವಾಗ ಎದುರಿನಿಂದ ಅಂದರೆ ಬಿಕರ್ನಕಟ್ಟೆ ಕಡೆಯಿಂದ ಮರೋಳಿ ಕಡೆಗೆ ಅಟೊರಿಕ್ಷಾ ನಂಬ್ರ   ಏಂ-19 ಃ- 7175 ನ್ನು ಅದರ ಚಾಲಕ ಅನ್ವರ್ ಕೆ ಬಿ ಎಂಬವರು ಪೆಲ್ಸಿ ಪಿಂಟೊ ಮತ್ತು ರತನ್ ಪಿಂಟೊ ಎಂಬುವರನ್ನು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಟಿಪ್ಪರ್ ಲಾರಿಯ ಮುಂಭಾಗಕ್ಕೆ  ಡಿಕ್ಕಿ ಮಾಡಿದ ಪರಿಣಾಮ ಅಟೊರಿಕ್ಷಾದ ಮುಂಭಾಗ ಸಂಪೂರ್ಣ ಜಖಂಗೊಂಡು, ಅಟೊರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ  ಪೆಲ್ಸಿ ಪಿಂಟೊರವರ ಎಡಕೈಗೆ ಮೂಳೆ ಮುರಿತದ ಗಾಯವಾಗಿ ರತನ್ ಪಿಂಟೊರವರ ಹಣೆಗೆ, ಮೂಗಿಗೆ ಮತ್ತು ತುಟಿಗೆ ರಕ್ತಗಾಯ ಉಂಟಾಗಿರುತ್ತದೆ. ಅಪಘಾತದಿಂದ ಅರೋಪಿತರಿಗೆ ಗಂಭೀರ ಸ್ವರೂಪ ಗಾಯ ಉಂಟಾಗಿ ಗಾಯಾಳುಗಳು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ರುದ್ರಪ್ಪ.ಎಂ. (22) ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ. 191/2012 279 , 337 , 338 ಐ.ಪಿ.ಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಪೊಲೀಸ್ ಠಾಣೆ:


  • ಫಿಯರ್ಾದುದಾರರಾದ ಶ್ರೀಮತಿ ವನಜಾಕ್ಷಿ ಕೆ. ಮ.ಹೆಚ್.ಸಿ.1839 ನೇಯವರು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸಿಬ್ಬಂದಿಯಾಗಿದ್ದು, ಈದಿನ ದಿನಾಂಕ 29-12-2012 ರಂದು ಮದ್ಯಾಹ್ನ 1-30 ಗಂಟೆಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸಮಯ, ಓರ್ವ ಅಟೋರಿಕ್ಷಾ ಚಾಲಕನು ಅತ್ತಾವರ ಕಡೆಯಿಂದ ಅಸೌಖ್ಯದಿಂದ ಬಳಲುತ್ತಿದ್ದ ವಿಜಯ [53] ಎಂಬಾತನನ್ನು  ತನ್ನ ಬಾಬ್ತು ಅಟೋರಿಕ್ಷಾದಲ್ಲಿ ಆಸ್ಪತ್ರೆಗೆ ಚಿಕಿತ್ಸೆಯ  ಬಗ್ಗೆ ದಾಖಲಿಸುವರೇ ಕರೆತಂದಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಸ್ಟ್ರಚರ್ಗೆ ಹಾಕುವ ಮೊದಲೇ ವಿಜಯ ಎಂಬಾತನು ಮೃತಪಟ್ಟಿರುವುದಾಗಿಯೂ, ರಿಕ್ಷಾದಲ್ಲಿ ಕರೆದುಕೊಂಡು ಬಂದ ರಿಕ್ಷಾ ಚಾಲಕನು ಅಲ್ಲಿಂದ ಹೋಗಿರುವುದಾಗಿಯೂ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಪಿರ್ಯಾದಿದಾರರಿಗೆ ತಿಳಿಸಿದ್ದು,  ಮೃತನು ಅಪರಿಚಿತ ವ್ಯಕ್ತಿಯಾಗಿದ್ದು, ಯಾವುದೋ ಖಾಯಿಲೆಯಿಂದ ಅಥವಾ ಸ್ವಾಭಾವಿಕವಾಗಿ  ಮೃತಪಟ್ಟಿರಬಹುದಾಗಿದೆ ಎಂಬುದಾಗಿ ವನಜಾಕ್ಷಿ ಕೆ. ಮ.ಹೆಚ್.ಸಿ.1839 ನೇಯವರು ನೀಡಿದ ದೂರಿನಂತೆ ದಕ್ಷಿಣ ಪೊಲೀಸ್ ಠಾಣೆ ಯು.ಡಿ.ಆರ್. ನಂಬ್ರ 93/2012 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳ್ಳತನ ಪ್ರಕರಣ

ಮಂಗಳೂರು ಗ್ರಾಮಂತರ ಠಾಣೆ:


  • ದಿನಾಂಕ: 23.12.2012 ರಂದು ಬೆಳಿಗ್ಗೆ 6-00 ಗಂಟೆಗೆ ಪಿಯರ್ಾದಿದಾರರಾದ ಲತಾ (46) ರವರು ತಮ್ಮ ಮನೆಗೆ ಬೀಗ ಹಾಕಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ಗೋವಾದಲ್ಲಿರುವ ತನ್ನ ಗಂಡನ ಅಕ್ಕನ ಮನೆಗೆ ತೆರಳಿದ್ದು, ದಿನಾಂಕ 27.12.2012 ರಂದು ರಾತ್ರಿ 8-30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲು ತೆರೆದಿದ್ದು, ಪಿಯರ್ಾದಿಯವರು ಗಾಬರಿಗೊಂಡು ಮನೆಯ ಒಳಗಿನ ಬೆಡ್ರೂಮಿಗೆ ಹೋಗಿ ನೋಡಿದಾಗ ಕಬ್ಬಿಣದ ಕಪಾಟಿನ ಬಾಗಿಲನ್ನು ಬಲವಂತದಿಂದ ಮುರಿದಿರುವುದು ಮತ್ತು ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಲಾಕರನ್ನು ಪರಿಶೀಲಿಸಿದ್ದಲ್ಲಿ ಪಿಯರ್ಾದಿಯವರ ಕಿವಿಯ ಓಲೆ ಮತ್ತು ಲೋಲಕ್, ಗೋಲ್ಡನ್ ಕಲರ್ ವಾಚು ಮತ್ತು ಸದ್ರಿಯವರ ಮಗಳ ಕಿವಿಯ ಓಲೆ ಎರಡು ಜೊತೆ ಮತ್ತು ಕಿವಿಯ ಸಣ್ಣ ಗುಂಡು ಇರುವ ರಿಂಗ್ ಒಂದು ಇತ್ಯಾದಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂತು, ಸದ್ರಿ ಕಳವಾದ ಚಿನ್ನಾಭರಣಗಳ ಅಂದಾಜು ಒಟ್ಟು ಮೌಲ್ಯ ಸುಮಾರು 23700/- ಆಗಬಹುದು ಎಂಬುದಾಗಿ ಲತಾ (46) ಮನೆ ನಂಬ್ರ.2-45/50  ಗುತ್ತುಗುಡ್ಡೆ ಅಳಪೆ ಕರ್ಮಾರ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 342/2012 ಕಲಂ 457 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ

ಉಳ್ಳಾಲ ಪೊಲೀಸ್ ಠಾಣೆ:


  • ಫಿರ್ಯಾದಿದಾರರಾದ ಚೆರಿಯನ್ 65 ವಾಸ. ಜೆಸ್ಸಿ ವಿಲ್ಲಾ, ವಿಷ್ಣುಮೂತರ್ಿ ಟೆಂಪಲ್ ರೋಡ್, ಮುನ್ನೂರು ಅಂಚೆ, ಕುತ್ತಾರುಪದವು, ಮಂಗಳೂರು ತಾಲೂಕು ಮತ್ತು ಆರೋಪಿಗಳಾದ ಕ್ಯಾಥರಿನ್ ಗಂಡ. ಚೆರಿಯನ್ ಸೆಬೆಸ್ಟಿಯನ್ ತಂದೆ. ಚೆರಿಯನ್, ಮತ್ತು ಸನಿಲ್ ವಗರ್ಿಸ್, ತಂದೆ. ಚೆರಿಯನ್ ರವರ ಮದ್ಯೆ ಇದ್ದ ಕೌಟುಂಬಿಕ ಕಲಹವನ್ನು ಇತ್ಯರ್ಥ ಮಾಡಿಕೊಳ್ಳುವ ಸಲುವಾಗಿ ಫಿರ್ಯಾದಿದಾರರ ಸಹೋದರರು ಕುತ್ತಾರುಪದವು ಎಂಬಲ್ಲಿಗೆ ಬಂದ ಸಮಯದಲ್ಲಿ ಆರೋಪಿಗಳು ಫಿರ್ಯಾದಿದಾರರಿಗೆ ಮತ್ತು ಅವರ ಸಹೋದರರಿಗೆ 29-11-2012 ರಂದು ಬೆಳಿಗ್ಗೆ 11-00 ಗಂಟೆಗೆ ಹತ್ಯಾರಿನಿಂದ ಹಲ್ಲೆ ನಡೆಸಿದ ವಿಚಾರದಲ್ಲಿ ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 312/2012 ರಂತೆ ಪ್ರಕರಣ ದಾಖಲಾಗಿರುತ್ತದೆ.ನಂತರದ ದಿನಗಳಲ್ಲಿ ಇವರು ತನ್ನ ನಗದು ಹಣವನ್ನು ಪಡೆಯುವ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಿಸಿಕೊಂಡಾಗ ಆರೋಪಿಗಳು  ಸೇರಿ ಇಂಟರ್ನೆಟ್ ಬ್ಯಾಂಕಿಂಗ್ ಸವರ್ಿಸ್ ಮುಖೇನ ಫಿರ್ಯಾದಿದಾರರ ಪಾಸ್ವಡರ್್ ನಂಬರ್ ಉಪಯೋಗಿಸಿಕೊಂಡು ಫಿರ್ಯಾದಿದಾರರ ಲಕ್ಷಗಟ್ಟಲೆ ಹಣವನ್ನು ಇವರ ಗಮನಕ್ಕೆ ತಾರದೇ ಅಕ್ರಮವಾಗಿ ತೆಗೆದು ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ ಅಲ್ಲದೆ ಫಿರ್ಯಾದಿದಾರರ ನೋಂದಣಿ ಮಾಲಕತ್ವದ ಮೋಟಾರು ಸೈಕಲನ್ನು ಅರೋಪಿಗಳು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದಲ್ಲದೆ ಈ ವಿಚಾರದಲ್ಲಿ ದೂರು ಕೊಡಲು ಹೋದಲ್ಲಿ ಕೊಲ್ಲುವುದಾಗಿ ಫಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಚೆರಿಯನ್ 65 ವಾಸ. ಜೆಸ್ಸಿ ವಿಲ್ಲಾ, ವಿಷ್ಣುಮೂತರ್ಿ ಟೆಂಪಲ್ ರೋಡ್, ಮುನ್ನೂರು ಅಂಚೆ, ಕುತ್ತಾರುಪದವು, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 339/2012 ಕಲಂ 420, 417, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Saturday, December 29, 2012

Daily crime Incidents for Dec 29, 2012


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ; 


  • ದಿನಾಂಕ: 28-12-2012 ರಂದು ಸಮಯ ಬೆಳಿಗ್ಗೆ ಸುಮಾರು 08.30 ಗಂಟೆಗೆ ಪಿರ್ಯಾದುದಾರರು ಸ್ಕೂಟರ್ ನಂಬ್ರ ಏಂ-14 ಐ-1085 ನ್ನು ಬಿಕರ್ನಕಟ್ಟೆ ಕಡೆಯಿಂದ ಸಿಟಿ ಆಸ್ಪತ್ರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ನಂತೂರು ಸರ್ಕಲ್ ದಾಟಿ ಕದ್ರಿ ಶಿವಭಾಗ್ ಕಡೆಗೆ ಹೋಗುವ ರಸ್ತೆ ತಲುಪುವಾಗ ಸ್ಕೂಟರ್ನ ಹಿಂದಿನಿಂದ ಬಸ್ಸು ನಂಬ್ರ ಏಂ-19 ಅ- 8933 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಎರಡೂ ಕಾಲುಗಳಿಗೆ ಮತ್ತು ತಲೆಯ ಹಿಂಭಾಗಕ್ಕೆ ರಕ್ತಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರ ಕಿಶನ್ ಎಂ ಸಾಲಿಯಾನ್(70) ತಂದೆ- ಎಂ. ಮಂಜಪ್ಪ. ಸುಭಿಕ್ಷಾ ಪಟೇಲ್ ರಸ್ತೆ, ಕಾನಡ್ಕ, ಶಕ್ತಿನಗರ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 189/2012 279 , 337 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ; 


  • ದಿನಾಂಕ: 28-12-2012 ರಂದು ಸಮಯ ಬೆಳಿಗ್ಗೆ ಸುಮಾರು 08.45 ಗಂಟೆಗೆ ಮೊ,ಸೈಕಲ್ ನಂಬ್ರ ಏಂ-19 ಇಈ-0132ನ್ನು ಅದರ ಸವಾರ ಸಹಸವಾರೊಬ್ಬರನ್ನು ಕುಳ್ಳಿರಿಸಿಕೊಂಡು ಕುಲಶೇಖರ ಚೌಕಿ ಕಡೆಯಿಂದ ಕಲ್ಪನೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕುಲಶೇಖರದ ಕೊಡರ್ೆಲ್ ಚಚರ್್ಹಾಲ್ನ ಬಸ್ಸು ನಿಲ್ದಾಣದ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜೀವನ್ ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ಜೀವನ್ರವರು ರಸ್ತೆಗೆ ಬಿದ್ದು ಬಲಕಣ್ಣಿನ ಮೇಲ್ಬಾಗ ರಕ್ತಗಾಯವಾಗಿ ಮತ್ತು ಬಲಸೊಂಟಕ್ಕೆ ತೀವೃ ಸ್ವರೂಪದ ಗಾಯ ಉಂಟಾದವರನ್ನು ಪಿರ್ಯಾದುದಾರರು ಅಲ್ಲಿ ಸೇರಿದ ಜನರ ಸಹಾಯದಿಂದ ಉಪಚರಿಸಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬುದಾಗಿ ಕರುಣಾಕರ ಶೆಟ್ಟಿ(39) ತಂದೆ- ನಾರಾಯಣ ಶೆಟ್ಟಿ ಭಕ್ತರ ಕೋಡಿ, ನೀರ್ ಮಾರ್ಗ,  ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 190/2012 279 , 338 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




ಮಹಿಳ ದೌರ್ಜನ್ಯ ಪ್ರಕರಣ:

ಮಹಿಳಾ ಠಾಣೆ;


  • ದಿನಾಂಕ 28-12-2012 ರಂದು ಸಮಯ ಸುಮಾರು 13-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರಿಗೆ ಆರೋಪಿ 1 ನೆರವರೊಂದಿಗೆ ದಿನಾಂಕ   19-08-2006 ರಂದು ಮಿಲಾಗ್ರೀಸ್ ಚಚರ್್ ಹಾಲಿನಲ್ಲಿ ಮದುವೆಯಾಗಿದ್ದು ಮದುವೆಯ ನಂತರ ಗಂಡನ ಜೊತೆ ವಿದೇಶದಲ್ಲಿ ವಾಸವಾಗಿದ್ದು ಸದ್ರಿಯವರಿಗೆ ಒಂದು ಹೆಣ್ಣು ಮಗುವಿರುತ್ತದೆ. ಆಸಮಯದಲ್ಲಿ  ಆರೋಪಿ ದೀಪಕ್ ಜೋಸೆಪ್ ಪಿರೇರಾ ರವರು ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ.  ದಿನಾಂಕ 5-10-2012 ರಂದು ಪಿರ್ಯಾದಿದಾರರು ದುಬೈನಿಂದ ಮಗಳೊಂದಿಗೆ ಮಂಗಳೂರಿಗೆ ಬಂದು ತಂದೆ ತಾಯಿ ಜೊತೆ ವಾಸವಾಗಿರುತ್ತಾರೆ.  ದಿನಾಂಕ 13-11-2012 ರಂದು ತನ್ನ ಮಗಳೊಂದಿಗೆ ಪಿರ್ಯಾದಿದಾರರು ದೀಪಕ್ ಜೋಸೆಪ್ ಪಿರೇರಾ ರವರ  ಮನೆಗೆ ಹೋದಾಗ ನನಗೂ ನಿನಗೂ ಏನೂ ಸಂಬಂಧ ವಿಲ್ಲ ಸೂಳೆ ಮೆಂಟಲ್ ಎಂದು ಬೈದು ಮನೆಯಿಂದ ಹೊರ ಹಾಕಿರುತ್ತಾರೆ ಅಲ್ಲದೇ ದಿನಾಂಕ 25-12-2012 ರಂದು ಆರೋಪಿ ದೀಪಕ್ ಜೋಸೆಪ್ ಪಿರೇರಾ  ಹಾಗೂ ಮೋನಿಕಾ ಪಿರೇರಾ  ರವರು ಪಿರ್ಯಾದಿದಾರರ ಮನೆಗೆ ಹೋಗಿ ಮಗುವನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ. ಹಾಗೂ ನಿನ್ನನ್ನು ರೌಡಿಗಳ ಕೈಯಿಂದ ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಎಂಬುದಾಗಿ ಫಿರ್ಯಾದಿದಾರರಾದ ಶ್ರೀಮತಿ  ಶರೋನ್ ಜಾನ್  ಪೆನರ್ಾಂಡೀಸ್ (29)  ತಂದೆ:  ಡೇವಿಡ್ ಪ್ರಾಂಕ್ ಪೆನರ್ಾಂಡೀಸ್ ವಾಸ:  ಪ್ಲಾಟ್ ನಂಬ್ರ. 504, 5ನೇ ಮಹಡಿ, ಸ್ಕೈ ಲೈನ್  ಎಕ್ಲೇವ್, ಸೋಜಾ ಆಕರ್ೆಡ್, ಬಲ್ಮಠ ರವರು ನೀಡಿದ ದೂರಿನಂತೆ ಮಹಿಳಾ ಠಾಣೆ ಅಪರಾದ ಕ್ರಮಾಂಕ 24/12 ಕಲಂ: 498(ಎ), 504, 506 ಜೊತೆಗೆ 34 ಐ.ಪಿ.ಸಿ.ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಪೂರ್ವಠಾಣೆ;


  • ದಿನಾಂಕ: 27-12-2012 ರಂದು ಪಿರ್ಯಾದಿದಾರರ ಅಣ್ಣ ಕೆವಿನ್ ಮೆನೇಜಸ್ ರವರು ಕೆಲಸ ಮುಗಿಸಿ ತನ್ನ ಮನೆಗೆ ಬಂದು ಬಾತ್ರೂಮ್ಗೆ ಹೋದವರು ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ಸ್ ಆಸ್ಫತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾರಾಗಿ ವೈದ್ಯರು ತಿಳಿಸಿದ್ದು ಮೃತರು ಚಿಕ್ಕಂದಿನಿಂದಲೇ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದು  ಹಾಗೂ ಇತ್ತೀಚೆಗೆ ಕೆಲವು ದಿನಗಖಿಂದ ಎದೆನೋವು ಹಾಗೂ ಆಯಾಸದಿಂದ ಬಳಲುತ್ತಿದ್ದವರು ಬಾತ್ ರೂಂನಲ್ಲಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ಎಂಬುದಾಗಿ ಪಿರ್ಯಾದಿದಾರರಾದ ಮೈಕಲ್ ಮೆನ್ಭೆಜಸ್ (46) ತಂದೆ: ಅಲೆನ್ ಮೇನೆಜಸ್ ವಾಸ: ಸೆರೊನ್ಸ್ಸೋ ಲೋಬೋ ಲೇನ್ ಕದ್ರಿ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವಠಾಣೆ ಯು.ಡಿಆರ್.ನಂ: 40/2012 ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮನುಷ್ಯ ಕಾಣೆ;


  • ದಿನಾಂಕ: 24-12-2012 ರಂದು ಪಿರ್ಯಾದಿದಾರರ ತಮ್ಮ ಉಮೇಶ್ ಗೌಡ ತಂದೆ: ಶಿವಪ್ಪ ಗೌಡ ವಾಸ: ಮಂಡಮೆ ಮನೆ ಕುಕ್ಕಿಪಾಡಿ ಗ್ರಾಮ ಮಾವಿನಕಟ್ಟೆ ಅಂಚೆ ಬಂಟ್ವಾಳ ತಾಲೂಕು ರವರು ಉಳಕೊಳ್ಳುತ್ತಿದ್ದ ಜಯಶ್ರೀಗೇಟಿನ ರೂಮಿಗೆ ಬಂದು ವಿಚಾರಿಸಲಾಗಿ ಸದ್ರಿಯವರು ಸುಮಾರು ದಿನಗಳಿಂದ ಕಾಣುತ್ತಿಲ್ಲವೆಂದು ರೂಮಿನವರು ತಿಳಿಸಿದಂತೆ ಸದ್ರಿಯವರಿಗಾಗಿ ಸುತ್ತಮುತ್ತಲೂ ಎಲ್ಲಾಕಡೆಗಳಲ್ಲಿ ಹುಡುಕಾಡಿ, ಸಂಬಂಧಿಕರ ಮನೆಗೂ ಹಾಗೂ ಆತನ ಗೆಳೆಯರಿಗೂ ಕರೆ ಮಾಡಿ ವಿಚಾರಿಸಲಾಗಿ  ನನ್ನ ತಮ್ಮನ ಪತ್ತೆಯಾಗಿರುವುದಿಲ್ಲ. ಸುಮಾರು ದಿನಗಳಿಂದ ತನಗೆ ಹಣಕಾಸಿನ ತೊಂದರೆ ಇರುವುದಾಗಿ ಆಗಾಗ ನನ್ನಲ್ಲಿ ಹೇಳುತ್ತಿದ್ದವನು. ನಂತರ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ನನ್ನ ತಮ್ಮ ಉಮೇಶ್ ಗೌಡನನ್ನು  ತಾವು ಪತ್ತೆಮಾಡಿಕೊಡಬೇಕಾಗಿ ಕೋರಿಕೆ ಎಂಬುದಾಗಿ ಪುರಂದರ (42) ತಂದೆ: ಶಿವಪ್ಪ ಗೌಡ ವಾಸ: ಮಂಡಮೆ ಮನೆ ಕುಕ್ಕಿಪಾಡಿ ಗ್ರಾಮ ಮಾವಿನಕಟ್ಟೆ ಅಂಚೆ ಬಂಟ್ವಾಳ ತಾಲೂಕು ರವರು  ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ, ಅಪರಾದ ಕ್ರಮಾಂಕ  186/2012 ಕಲಂ  ಮನುಷ್ಯ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜೀವ ಬೆದರಿಕೆ ಪ್ರಕರಣ

ಮೂಡಬಿದ್ರೆ ಠಾಣೆ :


  • ದಿನಾಂಕ : 28-12-2012 ರಂದು ಸಂಜೆ ಸುಮಾರು 4-10 ಗಂಟೆಗೆ ಪಿರ್ಯಾದಿಯವರಾದ  ಪ್ರಪುಲ್ಲ ಸೋನಿಯಾ ಸೆರಾವೋ, ಗಂಡ :ಕ್ಲೆರೆನ್ಸ್‌ ಜೋಯಲ್‌ ಡಿಕ್ರೂಜ್‌, ವಾಸ : ಸೆರಾವೋ ಮೆನ್ಸನ್‌  ಮಾಸ್ತಿಕಟ್ಟೆ ರೋಡ್‌, ಪೊನ್ನೆಚೇರಿ ಪ್ರಾಂತ್ಯ ಗ್ರಾಮ, ಮಂಗಳೂರು ತಾಲೂಕು ರವರು ತನ್ನ ತಾಯಿಯ ಜೊತೆಯಲ್ಲಿ ಮೂಡಬಿದ್ರೆಯ ನಿಶ್ಮಿತಾ ಸರ್ಕಲ್‌ ಬಳಿ ನಿಂತು ಕೊಂಡಿರುವಾಗ ಪಿರ್ಯಾದಿಯ ಗಂಡ ಕ್ಲೆರೆನ್ಸ್‌ ಜೋಯಲ್‌ ಡಿಕ್ರೂಜ್‌ ರವರು ಪಿರ್ಯಾದಿಯ ಬಳಿ ಬಂದು ಪಿರ್ಯಾದಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನೀನು ನಾನು ಹಾಕಿದ ಡೈವರ್ಸ್‌ ಕೇಸಿನಲ್ಲಿ ಯಾವುದೇ ತಕರಾರು ಹಾಕದೇ ಆ ಕೇಸಿನಲ್ಲಿ ಡೈವರ್ಸ್‌ ಕೊಡಬೇಕು ಎಂದು ಹೇಳಿದಾಗ ಪಿರ್ಯಾದಿದಾರರು ಅದಕ್ಕೆ ಒಪ್ಪದೇ ಇದ್ದಾಗ ಆರೋಪಿ 1 ನೇಯವರು (ಕ್ಲೆರೆನ್ಸ್‌ ಜೋಯಲ್‌ ಡಿಕ್ರೂಜ್‌) ಅವಾಚ್ಯ ಶಬ್ದದಿಂದ ಬೈದು, ಕೈಯಿಂದ ಕೆನ್ನೆಗೆ ಹೊಡೆದು ಆ ಸಮಯ ಆರೋಪಿ 2(ಜಾರ್ಜ್‌ ಡಿಕ್ರೂಜ್‌), 3(ಸೆಲಿನ್‌ ಡಿಕ್ರೂಜ್‌,), 4 (ಕ್ಲೈವ್‌ ನೇವಿಲ್‌ ಡಿಕ್ರೂಜ್‌) ನೇಯವರು ಪಿರ್ಯಾದಿಯ ಬಳಿಗೆ ಬಂದು ಈ ಕೇಸಿನಲ್ಲಿ ಡೈವರ್ಸ್‌ ಕೊಡದೇ ಇದ್ದಲ್ಲಿ  ಎಷ್ಟು ಖರ್ಚಾದರೂ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ  ಎಂಬುದಾಗಿ ಪ್ರಪುಲ್ಲ ಸೋನಿಯಾ ಸೆರಾವೋ, ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ. 251/2012, ಕಲಂ : 341, 323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Friday, December 28, 2012

Daily Crime Incidents for Dec 28, 2012


ದರೋಡೆ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 27-12-12 ರಂದು ಫಿರ್ಯಾದುದಾರರು ಮಂಗಳೂರು ನಗರದ ವಲೆನ್ಸಿಯಾದಲ್ಲಿ ಬಸ್ ಇಳಿದು ಗೋರಿಗುಡ್ಡ 4 ನೇ ಅಡ್ಡ ರಸ್ತೆಯಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಕಪ್ಪು ಬಣ್ಣದ ಮೋಟಾರು ಸೈಕಲ್ನಲ್ಲಿ ಕುಳಿತ್ತಿದ್ದ ಹಿಂಬದಿ ಸವಾರನು ಪ್ರಾಯ ಸುಮಾರು 30 ರಿಂದ 32 ವರ್ಷದ ಒಳಗಿನ ಯುವಕನು ಫಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ  ಸುಮಾರು 4 ಪವನ್ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 3 ಪವನ್ ತೂಕದ ಚಿನ್ನದ ಹವಳದ ಸರ ಅಂದಾಜು ಬೆಲೆ 1,20,000/- ಮೌಲ್ಯದ ಚಿನ್ನಾಭರಣಗಳನ್ನು ಕಿತ್ತುಕೊಂಡು ಬೈಕ್ ಸವಾರನೊಂದಿಗೆ ಪರಾರಿಯಾಗಿರುವುದು ಎಂಬುದಾಗಿ ಶ್ರೀಮತಿ ಭಾರತಿ [27] ಗಂಡ: ಪ್ರದೀಪ್ ಜೆ.ಎಸ್.ಶೇಖರ್ ಕಂಪೌಂಡ್, ಗೋರಿಗುಡ್ಡ, 4ನೇ ಕ್ರಾಸ್, ವೆಲೆನ್ಸಿಯಾ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ಮೊ.ನಂ.227/12 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆೆ ಕೈಗೋಳ್ಳಲಾಗಿದೆ.



ಅವ್ಯಾಚ ಶಬ್ದದಿಂದಬ್ಯೆದು, ಹಲ್ಲೆ ನಡೆಸಿದ ಪ್ರಕರಣ:

ಉಳ್ಳಾಲ ಠಾಣೆ;


  •  ದಿನಾಂಕ. 26-12-2012 ರಂದು ಮದ್ಯಾಹ್ನ 12-00 ಗಂಟೆಯಿಂದ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಕೋಟೆಪುರ ಎಂ.ಎಫ್.ಒ ಮೀನಿನ ಕಂಪೆನಿಯಲ್ಲಿ ಫಿರ್ಯಾದಿದಾರರು ಮತ್ತು ಅವರ ತಮ್ಮ ಇಫರ್ಾನ್, ನೆರೆಮನೆಯ ಅಪೀಸ್, ಅರಾಪತ್ ರವರೊಂದಿಗೆ ಮೀನಿನ ಅನ್ಲೋಡಿಂಗ್ ಕೆಲಸ ಮಾಡಿಕೊಂಡಿದ್ದು, ರಾತ್ರಿ ಸುಮಾರು 12-30 ಗಂಟೆಯ ಸಮಯಕ್ಕೆ ಅಲ್ಲಿಗೆ ಕೆಎಲ್-13-ವಿ-3826 ನೇ ಈಚರ್ ಲಾರಿ ಹಾಗೂ ಇತರ ಎರಡು ಲಾರಿಗಳು ಮೀನು ಅನ್ಲೋಡ್ ಮಾಡುವ ಬಗ್ಗೆ ಬಂದಿದ್ದು, ಅದರಂತೆ ಫಿರ್ಯಾದಿದಾರರು ಮತ್ತು ಇತರರು ಮೀನಿನ ಅನ್ಲೋಡ್ ಕೆಲಸವನ್ನು ಪೂರೈಸಿಕೊಂಡು ಅದರ ಬಾಬ್ತು ಕೂಲಿ ಹಣವನ್ನು ಕೊಡುವ ವಿಚಾರದಲ್ಲಿ ಈಚರ್ ಲಾರಿ ಚಾಲಕ ಹಾರಿಸ್ ಮತ್ತು ಅವರ ಅಣ್ಣ-ತಮ್ಮಂದಿರು ತಕರಾರು ಮಾಡಿದಾಗ ಫಿರ್ಯಾದಿದಾರರು ಅವರಲ್ಲಿ ಸಣ್ಣ ವಾಹನಕ್ಕೆ ರೂ. 300/ ಮತ್ತು ದೊಡ್ಡ ಲಾರಿಗೆ ರೂ. 450/ ರಂತೆ ಕೂಲಿ ಹಣ ಕೊಡಬೇಕು ಎಂದು ಹೇಳಿದಾಗ ಆರೋಪಿಗಳು ಅಷ್ಟೊಂದು ಹಣ ಕೊಡುವುದಿಲ್ಲ ಎಂದು ಗಲಾಟೆ ಮಾಡಿ ಮಲಿಯಾಳಿ ಭಾಷೆಯಲ್ಲಿ ಅವಾಚ್ಯಶಬ್ದಗಳಿಂದ ಬೈದು ದೂಡಾಟವಾಗಿ ಹಾರಿಸ್ ರವರು ಕಬ್ಬಿಣದ ಹ್ಯಾಂಗ್ಲರ್ ಪ್ಲೇಟ್ನಿಂದ ಫಿರ್ಯಾದಿದಾರರ ಹಣೆಗೆ ಮತ್ತು ಎಡ ಕಣ್ಣಿನ ಬಳಿಗೆ ಹೊಡೆದು ರಕ್ತಗಾಯ ಉಂಟು ಮಾಡಿದಲ್ಲದೆ, ಉಳಿದವರು ಕೈಯಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಫಿರ್ಯಾದಿದಾರರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದು ಎಂಬುದಾಗಿ ಅಬ್ದುಲ್ ಜಮಾಲ್ (27) ಮಹಮ್ಮುದ್ ಮೋನು, ಬರಕಾ ಕಂಪೌಂಡು ಕೋಟೆಪುರ ಉಳ್ಳಾಲ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ  ಅಪರಾದ ಕ್ರಮಾಂಕ 336/2012 ಕಲಂ 504 324, ಖ/ಘ 34 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆೆ ಕೈಗೋಳ್ಳಲಾಗಿದೆ.


ಹುಡುಗ ಕಾಣೆ;

ದಕ್ಷಿಣ ಠಾಣೆ


  • ದಿನಾಂಕ 24-09-12 ರಂದು ಪಿರ್ಯಾದಿದಾರರು ತನ್ನ ಮಗನಾದ ಮಂಜುನಾಥ (10) ನೊಂದಿಗೆ ಮಂಗಳೂರು ಕೋಟೆಕಾರ್ನ  ಮಾಡೂರಿನಿಂದ ಕೆಲಸಕ್ಕಾಗಿ ಬೆಳಿಗ್ಗೆ 7-00 ಗಂಟೆಗೆ ಮನೆಯಿಂದ ಹೊರಟು ಹಸನಬ್ಬ ಎಂಬವರು  ಮಂಗಳೂರು ಬಂದರ್ ಕಸಾಯಿಗಲ್ಲಿಯಲ್ಲಿ ಕಟ್ಟಡದ ಕೆಲಸವನ್ನು ಮಾಡಿಸುತ್ತಿದ್ದು, ಅಲ್ಲಿಗೆ ಕೂಲಿ ಕೆಲಸಕ್ಕಾಗಿ ಬಸ್ಸಿನಲ್ಲಿ ಮಾಡೂರುನಿಂದ ಸ್ಟೇಟ್ ಬ್ಯಾಂಕ್ಗೆ ಬಂದು ಸ್ಟೇಟ್ಬ್ಯಾಂಕ್ನಲ್ಲಿ ಬಸ್ಸಿನಿಂದ ತನ್ನ ಮಗ ಮಂಜುನಾಥನೊಂದಿಗೆ ಇಳಿದಾಗ ಅಲ್ಲಿ ಪಿರ್ಯಾದಿದಾರರ ತನ್ನ ಪರಿಚಯದ ಗದಗದ ವಾಸಿ ಶ್ರೀಮತಿ ಲಕ್ಷ್ಮಿರವರು ಸಿಕ್ಕಿದ್ದು, ಅವರ ಜೊತೆ ಮಾತನಾಡುತ್ತಿರುವಾಗ ಮಂಜುನಾಥನು ಎಲ್ಲಿಯೋ ತಪ್ಪಿಸಿಕೊಂಡು ಕಾಣೆಯಾಗಿದ್ದು, ಈತನನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈತನಿಗೆ ಮಾತನಾಡಲು ಬರುವುದಿಲ್ಲ. ಈತನನ್ನು ಪತ್ತೆ ಮಾಡಿಕೊಡುವಂತೆ ಫಿರ್ಯಾದಿದಾರರಾದ ಶ್ರೀಮತಿ ಹುಲಿಗಮ್ಮ [27] ಗಂಡ: ದುರ್ಗಪ್ಪ, ವಾಸ: ಮಾಡೂರು, ಕೋಟೆಕಾರು, ಮಂಗಳೂರು ನೀಡಿದ ದೂರಿನಂತೆ ಅಪರಾದ ಕ್ರಮಾಂಕ 228/12 ಕಲಂ ಹುಡುಗ ಕಾಣೆ ಪ್ರಕರಣ ದಾಖಲಿಸಿ ತನಿಖೆೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ:

ಉಳ್ಳಾಲ ಠಾಣೆ;


  • ದಿನಾಂಕ. 10-1-2012 ರಂದು ಫಿರ್ಯಾದಿದಾರರ ಗಂಡ ಉದಯಕುಮಾರ್ ರವರು ಅಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದವರು ತಲಪಾಡಿ ಗ್ರಾಮದ ಟೆಂಪಲ್ ರೋಡ್ನಿಂದ ಕಾಣೆಯಾಗಿದ್ದು, ಅವರ ಪತ್ತೆಗೆ ಇದುವರೆಗೆ ಪ್ರಯತ್ನಿಸಿದರೂ ಕಾಣೆಯಾದ ವ್ಯಕ್ತಿ ಪತ್ತೆಯಾಗದೇ ಇದ್ದುದರಿಂದ ಈತನನ್ನು ಪತ್ತೆ ಮಾಡಿಕೊಡುವಂತೆ ಫಿರ್ಯಾದಿದಾರಾದ ಶೋಭಾ ತಲಪಾಡಿ ಗಂಡ: ಉದಯಕುಮಾರ್ ಕೋಟೆಕಾರ್ ಗ್ರಾಮ ಮಂಗಳೂರು ತಾಲೂಕು  ರವರು ನೀಡಿದ ದೂರಿನಂತೆ ಅಪರಾದ ಕ್ರಮಾಂಕ  337/2012 ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆೆ ಕೈಗೊಳ್ಳಲಾಗಿದೆ.


Thursday, December 27, 2012

Monthly SC/ST Meeting;

ªÀÄAUÀ¼ÀÆgÀÄ £ÀUÀgÀ ¥Éưøï DAiÀÄÄPÀÛgÀ PÀbÉÃj ¸À¨sÁAUÀtzÀ°è ¥Àj²µÀÖ eÁw ªÀÄvÀÄÛ ¥Àj²µÀÖ ¥ÀAUÀqÀzÀ ªÀiÁ¹PÀ ¸À¨sÉAiÀÄ£ÀÄß ¢£ÁAPÀ 30-12-2012gÀ ¨sÁ£ÀĪÁgÀzÀAzÀÄ 1030 UÀAmÉUÉ £ÀÀqɸÀ¯ÁUÀĪÀÅzÀÄ.

Daily Crime Incidents for December 27, 2012.



ಅಪಹರಣ ಪ್ರಕರಣ:

ಸುರತ್ಕಲ್ ಪೊಲೀಸ್ ಠಾಣೆ:

ದಿನಾಂಕ 26-12-12 ರಂದು ಪಿರ್ಯಾದಿದಾರರ ಗಂಡ ದೀನನಾಥರವರನ್ನು ಮೂಲ್ಕಿ ರಿಜಿಸ್ರ್ಟೇಷನ್ ಆಪೀಸಿಗೆ ಬರುವಂತೆ ನಿತೇಶ ಹಾಗೂ ಇತರರು ನಿನ್ನೆ ರಾತ್ರಿ ಪೋನ್ನಲ್ಲಿ ತಿಳಿಸಿದ್ದು ಅದರಂತೆ ಪಿರ್ಯಾದಿಯ ಗಂಡ ದೀನನಾಥರವರು ಈ ದಿನ ಬೆಳಿಗ್ಗೆ 8-30  ಗಂಟೆಗೆ ಅವರ ಬಾಬ್ತು ಕೆಎ-19-ಎಂಎ-6099 ನೇ ಮಾರುತಿ ಓಮ್ನಿ ಕಾರಿನಲ್ಲಿ ಅವರ ಅಕ್ಕನ ಮಗ ನಿತಿನ್ ಜತೆಯಲ್ಲಿ ಮನೆಯಿಂದ ಹೊರಟು ಹೋಗಿದ್ದು ಅಪರಾಹ್ನ 2-00 ಗಂಟೆಗೆ ನಿತಿನ್ನು ಪುನಃ ಮನೆಗೆ ಬಂದು ಕಾಪರ್ೊರೇಷನ್ ಬ್ಯಾಂಕ್ನ ಪಾಸ್ಬುಕ್ ಕೆನರಾ ಬ್ಯಾಂಕ್ ಹಳೆಯಂಗಡಿಯ ಪಾಸ್ಬುಕ್ ಮತ್ತು ಚಕ್ ಬುಕ್ ಹಾಗೂ ಸುರತ್ಕಲ್ನ ಮಹಾಲಕ್ಷೀ ಬ್ಯಾಂಕ್ನ ಪಾಸ್ಬುಕ್  ಮತ್ತು ಚಕ್ಬುಕ್ನ್ನು ಕೊಡುವಂತೆ ದೀನನಾಥರವರು  ತಿಳಿಸಿರುತ್ತಾರಾಗಿ ಹೇಳಿ ಅವುಗಳನ್ನು ಪಡೆದುಕೊಂಡು ಹೋಗಿದ್ದು ನಂತರ ಪಿರ್ಯಾದಿದಾರರು ಅವರ ಗಂಡನಿಗೆ ಮತ್ತು ಅಕ್ಕನ ಮಗನಿಗೆ ಪೋನ್  ಮಾಡಿಚಲ್ಲಿ ಪೋನ್ ಎತ್ತದೇ ಇದ್ದು ಬಳಿಕ ಪಿರ್ಯಾದಿದಾರರ ಗಂಡ ಪಿರ್ಯಾದಿಯ ಮೆಬೈಲಿಗೆ ಕರೆ ಮಾಡಿ ಇವರು ಜಾಗಕ್ಕೆ ಸಂಬಂದಪಟ್ಟವರಲ್ಲ ನಿತೇಶನ ಕಡೆಯವರಾಗಿರಬೇಕು ಆತನು ಕೂಡಾ ನಮ್ಮ ಜೊತೊಗೆ ಇದ್ದಾನೆ. ಜಾಸ್ತಿ ಮಾತನಾಡಲು ಆಗುವುದಿಲ್ಲ ಈಗ ಮಂಗಳೂರಿನಲ್ಲಿ ಇದ್ದೆನೆ ಎಂದು ಹೇಳಿದ್ದು  ಪಿರ್ಯಾದಿದಾರರ ಗಂಡ ಹಾಗೂ ಅಕ್ಕ ಮಗನನ್ನು ನಿತೇಶ್ ಹಾಗೂ ಕಡೆಯವರು ಯಾವುದೋ ಉದ್ದೇಶದಿಂದ ಅಪಹರಿಸಿ ಎಲ್ಲಿಗೋ  ಕರೆದುಕೊಂಡು ಹೋಗಿರುಗಿ್ತಾರೆ. ಅವರನ್ನು ಪತ್ತೆಮಾಡಿ ಕೊಡಬೇಕು ಎಂಬುದಾಗಿ ಜಯಶ್ರೀ ಡಿ ಕಾಂಚನ್ (46) ವಾಸಃ ಡೋರ್ ನಂಬ್ರ 2/11ಎ ಶ್ರೀ ಮಾತ ಪಾಂಚಜನ್ಯ ಹಾಲ್ ಬಳಿ ಸಸಿಹಿತ್ಲು ಮಂಗಳೂರು ರವರು ನೀಡಿದ ದೂರನಂತೆ ಸುರತ್ಕಲ್ ಠಾಣಾ ಅ.ಕ್ರ. 259/2012 ಕಲಂ: 365   ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ:

ಮಂಗಳೂರು ಉತ್ತರ ಪೊಲೀಸ್ ಠಾಣಾ 

ಫಿಯರ್ಾದಿದಾರರು ಮಂಗಳೂರಿನ ಅಳಕೆಯಲ್ಲಿ ಶ್ರೀ ಬಾಲಾಜಿ ಜನರಲ್ ಸ್ಟೋರ್ ಎಂಬ ಹೆಸರಿನ ದಿನಸಿನ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು, ಕೆಎ-19-ಎಂ-5236 ನಂಬ್ರದ ಮಾರುತಿ ಓಮ್ನಿ ಕಾರು ಹೊಂದಿದ್ದು, ಸ್ವಂತ ಉಪಯೋಗಕ್ಕೆ ಉಪಯೋಗಿಸಿಕೊಳ್ಳುತ್ತಿದ್ದು, ದಿನಾಂಕ 22-12-2012 ರಂದು ಪ್ರತಿ ನಿತ್ಯದಂತೆ ಅಂಗಡಿಯಿಂದ ಮನೆಗೆ ಬಂದು ತನ್ನ ಸ್ವಂತ ವಿಳಾಸವಾದ ಕೊಡಿಯಾಲ ಬೈಲಿನಲ್ಲಿರುವ ಟಿ.ವಿ.ರಮಣ ಪೈ ಅಪಾಟರ್್ ಮೆಂಟ್ ಕಂಪೌಂಡಿನ  ರಸ್ತೆಯ ಬದಿಯಲ್ಲ್ಲಿ ಕಾರು ಪಾಕರ್್ ಮಾಡಿ ಮನೆಗೆ ಹೋಗಿದ್ದು, ದಿನಾಂಕ 23-12-2012 ರಂದು ಬೆಳಿಗ್ಗೆ 6:00 ಗಂಟೆಗೆ ಸೆಂಟ್ರಲ್ ಮಾಕರ್ೆಟಿಗೆ ಸಾಮಾನು ಖರೀದಿಸುವರೇ ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡಲಾಗಿ ಕಾರು ಕಾಣೆಯಾಗಿದ್ದು, ಕಾರಿನಲ್ಲಿ ಕಾರಿಗೆ ಸಂಬಂಧಪಟ್ಟ ಆರ್.ಸಿ., ಇನ್ಸೂರೆನ್ಸ್, ಮತ್ತು ಡ್ರೈವಿಂಗ್ ಲೈಸೆನ್ಸ್ನ ಮೂಲ ದಾಖಲಾತಿಗಳು ಕೂಡಾ ಕಾರಿನೊಂದಿಗೆ ಕಳವಾಗಿದ್ದು, ಕಾರನ್ನು ಇದುವರೆಗೂ ಮಂಗಳೂರು ನಗರದಲ್ಲಿ ಮತ್ತು ಸುತ್ತುಮುತ್ತಲಿನ ಸ್ಥಳಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದು, ಈ ಕಾರನ್ನು ಯಾರೋ ಕಳ್ಳರು ಕಳವು ಮಾಡಿದ್ದು,. ಕಳವಾದ ಕಾರಿನ ಬೆಲೆ ರೂ 35,000 /- ಇರಬಹುದು, ಈ ಬಗ್ಗೆ ಫಿರ್ಯಾದುದಾರರಾದ  ಸ್. ವಾಮನ ಪೈ ವಾಸ ಟಿ ವಿ ರಮಣ ಪೈ ಹಾಲ್ ರಸ್ತೆ ಕೊಡಿಯಾಲ ಬೈಲ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊನಂ. 204/2012 ಕಲಂ 379 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಕಾವೂರು ಠಾಣೆ;

ದಿನಾಂಕ 25-12-2012 ರಂದು ಕೂಳೂರಿನಲ್ಲಿ ಕೆಲಸ ಮುಗಿಸಿ ಕಾವೂರು ಕಡೆಗೆ ನಡೆದುಕೊಂಡು ಬರುತ್ತಾ ರಾತ್ರಿ ಸುಮಾರು 9-00 ಗಂಟೆಗೆ ಕೂಳೂರು ಅರವಿಂದ ಮೋಟಾರ್ಸ್ ಪ್ರೈ.ಲಿ.ಕಟ್ಟಡದ ಎದುರು ರಸ್ತೆ ದಾಟುತ್ತಿದ್ದಾಗ ಕೊಟ್ಟಾರ ಚೌಕಿ ಕಡೆಯಿಂದ ಮೋಟಾರು ಸೈಕಲ್ ಏಂ 19-ಇಇ-7540 ನೇಯದನ್ನು ಸವಾರರಾದ ಭಾರ್ಗವರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿಯರ್ಾದಿದಾರರಿಗೆ ಢಿಕ್ಕಿ ಮಾಡಿದ ಪರಿಣಾಮ ಫಿಯರ್ಾದಿದಾರರು ರಸ್ತೆಗೆ ಬಿದ್ದು ತಲೆಗೆ ರಕ್ತ ಬರುವ ಗಾಯ ಮತ್ತು ಬಲಕಾಲಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಮತ್ತು ಮೋಟಾರು ಸೈಕಲ್ ಸವಾರ ಭಾರ್ಗವರವರು ಸಹ ಗಾಯಗೊಂಡು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಫಿಯರ್ಾದಿದಾರರಾದ ಶಂಕರ (28) ತಂದೆ: ರುದ್ರಪ್ಪ, ವಾಸ: ಮೂಕಬಸುರಿಗಟ್ಟಿ ಗ್ರಾಮ, ಹಳೆ ಬಂಕಾಪುರ ಪೋಸ್ಟ್, ಶಿಗ್ಗಾವಿ ತಾಲೂಕು.  ಹಾವೇರಿ. ಜಿಲ್ಲೆ ಎಂಬವರು ನೀಡಿದ ದೂರಿನಂತೆ ಕಾವೂರು ಪೊಲೀಸು ಠಾಣಾ ಅ.ಕ್ರ. 195/2012 ಕಲಂ: 279, 337 ಐ.ಪಿ.ಸಿ.  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜುಗಾರಿ ಆಡುತ್ತಿದ್ದವರ ಬಂಧನ:

ಪಣಂಬೂರು ಠಾಣೆ;

ದಿನಾಂಕಃ 26-12-12 ರಂದು ಪಣಂಬೂರು ಪೊಲೀಸ್ ನಿರೀಕ್ಷಕರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಇಲಾಖಾ ಜೀಪು ಕೆಎ-19ಜಿ-484 ರಲ್ಲಿ ಜೋಕಟ್ಟೆ ಕ್ರಾಸ್ ಬಳಿ ಲಾರಿ ನಿಲ್ಲಿಸುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ನೆಲಕ್ಕೆ ಬಟ್ಟೆಯ ಬೈರಾಸ್ ಹಾಸಿ ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟು ಒಳಗೆ ಹೊರಗೆ ಎಂಬ ಜುಗಾರಾಟವನ್ನು ಆಡುತ್ತಿದ್ದವರನ್ನು 10-30 ಗಂಟೆಗೆ ಸುತ್ತುವರಿದು ಆರೋಪಿಗಳನ್ನು ವಶಕ್ಕೆ ಪಡೆದು ಆಟಕ್ಕೆ ಉಪಯೋಗಿಸಿದ 7125/- ರೂಪಾಯಿ ಹಣ, 52 ಇಸ್ಪೀಟ್ ಎಲೆಗಳು ಹಾಗೂ ನೆಲಕ್ಕೆ ಹಾಸಿದ ಬಟ್ಟೆಯ ಬೈರಾಸನ್ನು ಮಹಜರು ಮುಖಾಂತರ ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಣಂಬೂರು ಪೊಲೀಸ್ ಠಾಣಾ ಅ.ಕ್ರ ಃ 227/12 ಕಲಂ: 87 ಕೆ. ಪಿ. ಆಕ್ಟ್ ರಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ :

:ದಿನಾಂಕ: 25.12.2012 ರಂದು ರಾತ್ರಿ 9-50  ಗಂಟೆ ವೇಳೆಗೆ ಫಿರ್ಯಾದಿದಾರರು, ತನ್ನ ದೊಡ್ಡಪ್ಪನ ಮಗ ಸಚಿನ್ ಎಂಬವನೊಂದಿಗೆ ಸಂಬಂಧಿಕರ ಮನೆ ಗೃಹಪ್ರವೇಶದ ಬಗ್ಗೆ ಹೋಗುತ್ತಾ ಶಕ್ತಿನಗರದ ನವೀನ್ ಎಂಬವರ ಮನೆ ಮುಂದೆ ತಲಪಿದಾಗ  ನವೀನನು, ಫಿರ್ಯಾದಿದಾರರನ್ನು ಉದ್ದೇಶಿಸಿ  ಕುರುಡ ಎಂದು ತಮಾಷೆ ಮಾಡಿದ್ದಕ್ಕೆ  ಫಿರ್ಯಾದಿದಾರರು  ಪ್ರಶ್ನಿಸಿದ ದ್ವೇಷದಿಂದ ಆರೋಪಿಗಳು ಪಿಯರ್ಾದಿದರರ ಎಡಕಾಲಿನ ಮೊಣಗಂಟಿಗೆ ಮರದ ಸೋಮಟೆಯಿಂದ ಹೊಡೆದು ಗಾಯಗೊಲೀಸಿದಲ್ಲದೆ ಬೇವಸರ್ಿ ರಂಡೆಮಗ ಎಂಬಿತ್ಯಾದಿ ಅವಾಚ್ಯಶಬ್ದಗಳಿಂದ ಬೈದದರುವುದಾಗಿದೆ ಎಂಬುದಾಗಿ ಫಿಯರ್ಾದಿದಾರರಾದ ಜಗಜೀವನ್ ವಾಸ ಶಕ್ತಿನಗರ ಪದವು ಮಂಗಳೂರು ಎಂಬವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಕ್ರ 339/2012 324,504 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಉಲ್ಲಾಳ ಠಾಣೆ:

ದಿನಾಂಕ. 16-12-2012 ರಂದು ಉಳ್ಳಾಲ ಸುಭಾಸ್ನಗರ ಎಂಬಲ್ಲಿರುವ ತಾಜ್ಮಹಲ್ ಹಾಲ್ನಲ್ಲಿ ಜರಗಿದ್ದ ಫಿರ್ಯಾದಿದಾರರ ಸಂಬಂಧಿ ಯು.ಎಸ್.ಅಬೂಬಕ್ಕರ್ ರವರ ಮಗ ಇಫರ್ಾನ್ ರವರ ಮದುವೆ ಕಾರ್ಯಕ್ರಮಕ್ಕೆ ಫಿರ್ಯಾದಿ ಮತ್ತು ಅವರ ಗಂಡ ನೌಶದ್ ರವರು ಮದ್ಯಾಹ್ನದ ಸಮಯದಲ್ಲಿ ಹೋಗಿದ್ದು, ಅಲ್ಲಿ ಫಿರ್ಯಾದಿದಾರರ ಗಂಡ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದು, ಮದುವೆ ಕಾರ್ಯಕ್ರಮ ಮುಗಿದ ಬಳಿಕ ಮದ್ಯಾಹ್ನ 2-00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರು ತನ್ನ ಗಂಡನಿಗೆ ಪೋನ್ ಮಾಡುತ್ತಿರುವ ಸಮಯದಲ್ಲಿ ಆರೋಪಿ ಇಮ್ತಿಯಾಜ್ನು ಫಿರ್ಯಾದಿದಾರರ ಸಮೀಪಕ್ಕೆ ಬಂದು ಅವರ ಮೊಬೈಲ್ ನಂಬ್ರವನ್ನು ಕೇಳಿದಾಗ, ಮೊಬೈಲ್ ನಂಬ್ರ ಕೊಡಲು ಫಿರ್ಯಾದಿದಾರರು ನಿರಾಕರಿಸಿದಾಗ ಆರೋಪಿಯು ಫಿರ್ಯಾದಿದಾರರ ಕೈಯನ್ನು ಹಿಡಿದು ಎಳೆದು ಮಾನಭಂಗ ಮಾಡಿ ನಂತರ ಫಿರ್ಯಾದಿದಾರರ ಕೈಯಲ್ಲಿದ್ದ ಮೊಬೈಲ್ ಪೋನನ್ನು ಎಳೆದು ತೆಗೆದು ಅದರಿಂದ ಆತನ ಮೊಬೈಲ್ ಪೋನ್ಗೆ ಮಿಸ್ಕಾಲ್ ಕೊಟ್ಟು, ಮೊಬೈಲ್ ಪೋನ್ನ್ನು ವಾಪಾಸು ಕೊಟ್ಟು, ಮುಂದೆ ತನಗೆ ಆಗಾಗ ಫೋನ್ ಮಾಡಬೇಕು ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಫಿರ್ಯಾದಿಗೆ ಜೀವ ಬೆದರಿಕೆ ಹಾಕಿದ್ದು, ಆ ವೇಳೆ ಫಿರ್ಯಾದಿದಾರರು ತನ್ನ ಗಂಡನಿಗೆ ಫೋನ್ ಮಾಡಿ ಸ್ಥಳಕ್ಕೆ ಬರಮಾಡಿಸಿಕೊಂಡಾಗ ಆರೋಪಿ ಇಮ್ತಿಯಾಜ್ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯಶಬ್ದಗಳಿಂದ ಬೈದು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು, ನಂತರ ಈ ವಿಚಾರವನ್ನು ತಿಳಿದುಕೊಂಡ ಫಿರ್ಯಾದಿದಾರರ ಅಕ್ಕನ ಮಗ ಇಮ್ತಿಯಾಜ್ನಲ್ಲಿ ಮರುದಿನ ವಿಚಾರಿಸಿದಾಗ ಅವರೊಳಗೆ ಮಾತಿನ ಜಗಳ ನಡೆದಾಗ ಇಮ್ತಿಯಾಜ್ನ ಅಣ್ಣ ನಾಸಿರ್ ರವರು ಬಂದು ಈ ವಿಚಾರವನ್ನು ರಾಜಿ ಮಾತುಕತೆಯಲ್ಲಿ ಮುಗಿಸುವ ಎಂದು ತಿಳಿಸಿದ್ದು, ಆದರೆ ಆರೋಪಿ ಇಮ್ತಿಯಾಜ್ನು ತನ್ನ ಅಣ್ಣ ನಾಸಿರ್ನ ಸಹಕಾರದಿಂದ ಫಿರ್ಯಾದಿದಾರರಿಗೆ ಮುಂದೆ ಕೂಡಾ ತೊಂದರೆ ಕೊಡುವ ಸಾಧ್ಯತೆ ಇರುವುದಲ್ಲದೆ ಆರೋಪಿಯು ಇದೇ ರೀತಿ ಬೇರೆ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟಿದ್ದು, ಆತನು ಇದೇ ಚಾಳಿಯನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ಫಿರ್ಯಾದಿದಾರುರಾದ ಖತೀಜಾ (27) ವಾಸ. ಚೆನ್ನಯರಗುಡ್ಡೆ, ಅನಿಲ್ಕಂಪೌಂಡು ಒಂಭತ್ತುಕೆರೆ ಉಲ್ಲಾಳ ಎಂಬವರು ನೀಡಿದ ದೂರಿನ ಮೇರೆಗೆ  ಉಳ್ಳಾಲ ಠಾಣಾ ಮೊ.ನಂ. 335/2012 ಕಲಂ 354, 504, 506 ಜತೆಗೆ 34 ಐಪಿಸಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹುಡುಗಿ ಕಾಣೆ:

ಪಣಂಬೂರು ಠಾಣೆ;

ಪಿಯರ್ಾದಿದಾರರ ಮಗಳು ಮೈತ್ರಾಳು ಎನ್ ಎಂ ಪಿಟಿ ಕನ್ನ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾಥರ್ಿನಿಯಾಗಿದ್ದು, ದಿನಾಂಕಃ 24-12-12 ರಂದು ಬೆಃ 10-30 ಗಂಟೆಗೆ ಹಲ್ಲು ನೋವಿನ ಕುರಿತು ಔಷಧಿ ತರಲೆಂದು ಪಣಂಬೂರು ಎನ್ಎಂಪಿಟಿ ಮಾಕರ್ೆಟ್ ಬಳಿ ಇರುವ ಮೆಡಿಕಲ್ಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟು ಹೋದವಳು ಇದುವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ.  ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದೂ ಪತ್ತೆ ಮಾಡಿಕೊಡಬೇಕಾಗಿ ಫಿರ್ಯಾದುದಾರರಾದ ಹನುಮಂತ ಸಿದ್ಧನ್ನಾವರ್, ಹುಲಸಗೇರಿ, ಜಮುನಕಟ್ಟೆ ಅಂಚೆ, ಬಾದಾಮಿ ತಾಲಳುಕ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣಾ ಅ.ಕ್ರ ಃ 228/12 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿಕೊಢು ತನಿಖೆ ಕೈಗೊಳ್ಳಲಾಗಿದೆ. 

Wednesday, December 26, 2012

Daily Crime Incidents for December 26, 2012


ಅಪಘಾತ ಪ್ರಕರಣ:

ಮಂಗಳೂರು ಸಂಚಾರ ಪೂರ್ವ ಠಾಣೆ;


  • ದಿನಾಂಕ 24-12-2012 ರಂದು ಸಮಯ ಸಂಜೆ ಸುಮಾರು 6.30 ಗಂಟೆಗೆ ಮೋಟಾರು ಸೈಕಲ್ ನಂಬ್ರ ಏಂ-21 ಐ-8837ರಲ್ಲಿ ಅದರ ಸವಾರ ಸಹಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ನಂತೂರು ಜಂಕ್ಷನ್ ಕಡೆಯಿಂದ ಕುಲಶೇಖರದ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಹೋಗಿ ಕುಲಶೇಖರ ಕಲ್ಪನೆ ಪೋಸ್ಟ್ ಆಫೀಸ್ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ಬಲಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವುಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಫಿರ್ಯಾದಿದಾರರಾದ ವೆಂಕಟ ಸ್ವಾಮಿ (48) ತಂದೆ- ಪೆದ್ದ ಕ್ರಿಪಯೆ. ಪೆದ್ದಮಾಂಡಲಿ ಗ್ರಾಮ, ವನಭಾರತಿ ತಾಲೂಕು, ಮೆಹಬೂಬ್ ನಗರ, ಆಂಧ್ರ ಪ್ರದೇಶ ರವರು ನೀಡಿದ ದೂರಿನಂತೆ  ಮಂಗಳೂರು ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 188/2012 279 , 338 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಪೂರ್ವ ಪೊಲೀಸ್ ಠಾಣೆ;


  • ದಿನಾಂಕ: 25.12.2012 ರಂದು ಮದ್ಯಾಹ್ನ 12.40 ಗಂಟೆಗೆ ತರಕಾರಿ ಸೇಲ್ಸ್ ಬಗ್ಗೆ ನಂತೂರು ಕಡೆಯಿಂದಕೆ.ಪಿ.ಟಿ. ಕಡೆಗೆ ತನ್ನ ಬಾಬ್ತು ಕಾರಿನಲ್ಲಿ ಹೋಗುತ್ತಿರುವಾಗ ಕದ್ರಿ ಪಾಕರ್್ ಬದಿಯಲ್ಲಿ ಅಳವಡಿಸಿದ ಕಬ್ಬಿಣದ ತಡೆ ಬೇಲಿ ಬಳಿಯಲ್ಲಿ ಯರೋ ಅಪರಿಚಿತ ಗಂಡಸು ಪ್ರಾಐ 25-30 ವರ್ಷದ ನೀಲಿ ಬಣ್ಣದ ಟೀ-ಶಟರ್್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿದ ವ್ಯಕ್ತಿಯು ಮಲಗಿದ್ದ ಸ್ಧಿತಿಯಲ್ಲಿ ಎಡ ಕಿವಿಯಲ್ಲಿ, ಬಾಯಿ. ಮೂಗಿನಲ್ಲಿ ರಕ್ತ ಸುರಿಯುತ್ತಿದ್ದ ಸ್ದಿತಿಯಲ್ಲಿ ಕಂಡು ಬಂದಿದ್ದು ಈತನು ಯಾವುದೋ ವಾಹನ ಅಥವಾ ರಸ್ತೆ ಬದಿಯಲ್ಲಿ ಬಿದ್ದೋ, ಅಥವಾ ಇನ್ಯಾವೋದೋ  ಕಾರಣದದಿಂದ ಸಂಶಯಾಸ್ಪದ ರೀತಿಯಲ್ಲಿ ಗಂಬೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಎಂಬುದಾಗಿ ಸಂತೋಷ  ಕುಮಾರ್ (35) ತಂದೆ: ಸುಬ್ಬು ಬೆಳ್ಚಡ ವಾಸ: ಶಭರಿ ನಿಲಯ ಪಾವೂರು ಅಂಚೆ ಮಂಜೇಶ್ವರ ಕಾಸರಗೋಡು ಜಿಲ್ಲೆ ಹಾಲಿ: ಸುರೇಶ್ ಟೈಲರ್ ಪೂಜಾ ಕಾಂಪ್ಲೆಕ್ಸ್ ಕಾಫಿಕಾಡ್ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್ ನಂ: 39/2012 ಕಲಂ: 174 (ಸಿ) ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ;


  • ದಿನಾಂಕ 22/12/2012 ರಂದು ಆರೋಪಿ ಡೇವಿಡ್ ಮೈಕಲ್ ಫೆನರ್ಾಂಡಿಸ್ ತನ್ನ ಕೆಎ 19 ವಿ 1910 ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ ತನ್ನ ತಂದೆ ( ಪಿಯರ್ಾದಿದಾರರು) ಫೆಲಿಕ್ಸ್ ಫೆನಾಂಡಿಸ್ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಬೆ 10.45 ಗಂಟೆ ಸಮಯಕ್ಕೆ  ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿ  ರಸ್ತೆ ದಾಟುತ್ತಿದ್ದ 65 ವರ್ಷ ಪ್ರಾಯದ ಗಂಗೂ ಬಾಯಿ ಎಂಬವರಿಗೆ   ಡಿಕ್ಕಿ ಹೊಡೆದುದರ ಪರಿಣಾಮ, ಗಂಗೂ ಬಾಯಿ  ರಸ್ತೆಗೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡು ಅಭೋದಾವಸ್ಥೆಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ  ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತಂದು ದಾಖಲು ಮಾಡಿರುವುದಾಗಿದೆ ಎಂಬುದಾಗಿ ಫೆಲಿಕ್ಸ್ ಫೆನಾಂಡಿಸ್, ಪ್ರಾಯ 63 ವರ್ಷ, ತಂದೆ: ದಿ. ಗ್ರೆಗರಿ ಫೆನಾಂಡಿಸ್, ವಾಸ: ಆಶಿವರ್ಾದ್ ವಿಲ್ಲಾ, ಗಂಜಿಮಠ ಅಂಚೆ, ಬಡಗುಳಿಪಾಡಿ ಗ್ರಾಮ,   ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 251/2012 ಕಲಂ: 279, 338 ಐ.ಪಿ.ಸಿ. ರಂತೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹೆಂಗಸು ಕಾಣೆ:

ಕಾವೂರು ಠಾಣೆ;


  • ಕಾವೂರು ಗ್ರಾಮದ ಬೊಂದೇಲ್ನ ಕೆ,ಎಚ್.ಬಿ ಕಾಲೋನಿ ಮನೆನಂಬ್ರ ಇ.ಡಬ್ಲ್ಯೂ.ಎಸ್-137 ರಲ್ಲಿ ಒಬ್ಬಂಟಿಯಾಗಿ ವಾಸವಾಗಿರುವ ಫಿರ್ಯಾಧುದಾರರ ಚಿಕ್ಕಮ್ಮ ಅಂದರೆ ತಾಯಿ ಶ್ರೀಮತಿ ರೇಖಾ  ಶೆಣೈರವರ ತಂಗಿ ಕಿಶೋರಿ ಪ್ರಭು ಎಂಬವರು ಮೂಕಿ ಮತ್ತು ಕಿವುಡಿಯಾಗಿದ್ದು, ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದವರು 2012 ನೇ ಇಸವಿ ಮೇ ತಿಂಗಳಿನಿಂದ ಕಾಣೆಯಾಗಿದ್ದು, ಈತನಕ ಹುಡುಕಾಡಿದ್ದು ಪತ್ತೆಯಾಗಿಲ್ಲ. ಪತ್ತೆ ಮಾಡಿಕೊಡಬೇಕಾಗಿ ಶ್ರೀಮತಿ ಅಕ್ಷತಾ (26) ಗಂಡ: ಪ್ರದೀಪ್ ಶೆಟ್ಟಿ, ವಾಸ: ಶ್ರೀ ದೇವಿ ಕೃಪಾ, ಗುರು ಮಂದಿರದ ಬಳಿ, ಮುಕ್ರಂಪಾಡಿ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 193/2012 ಕಲಂ: ಹೆಂಗಸು ಕಾಣೆ  ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಗಂಡಸು ಕಾಣೆ: 

ಪಣಂಬೂರು ಠಾಣೆ;


  • ದಿನಾಂಕ 12/11/2012 ರಂದು 08:00 ಗಂಟೆಗೆ ಪಿರ್ಯಾದಿದಾರರ ತಂದೆಯಾದ ಕೆ. ಮೋಹನ್ ಸುಮಾರು 8 ತಿಂಗಳಿನಿಂದ  ಮಂಗಳೂರು ತಾಲೂಕು ತಣ್ಣೀರು ಬಾವಿ ಆರ್.ಪಿ.ಪಿ. ಸಿಲ್ವರ್ ಗೇಟ್ ಎಂಬಲ್ಲಿ ವೆಲ್ಡಂಗ್ ಕಾಂಟ್ರಾಕ್ಟರ್ ಆಗಿ ಕೆಸಲ ಮಾಡುತ್ತಿದ್ದು, ಸುಮಾರು 1 ತಿಂಗಳಿನಿಂದ   ಪಿರ್ಯಾದಿಯಾಗಲಿ, ಅವರ ಮನೆಯವರಾಗಲಿ ಪೋನ್ ಮಾಡಿದಾಗ, ಅವರ ಪೋನ್ ಸಂಪರ್ಕಕ್ಕೆ ದೊರೆಯದೇ ಇದ್ದು, ಅವರು ಕೆಲಸ ಮಾಡುತ್ತಿದ್ದಲ್ಲಿ ವಿಚಾರಿಸಿದ್ದಲ್ಲಿ, ಸಂಬಂದಿಕರಲ್ಲಿಯೂ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆಯದೇ ಇದ್ದು, ಈ ತನಕ ಪತ್ತೆಮಾಡಬೇಕಾಗಿ ಎಮ್. ವೆಂಕಟೇಶ (22) ತಂದೆ: ಕೆ ಮೋಹನ್, ವಾಸ: 2, ಭಾರತೀಯ ಸ್ಟ್ರಿಯೂ , ಕಾಮರಾಜ ಪುರಂ, ಪಟ್ಟಾಭಿರಾಮ್, ಚೆನೈ, ತಮಿಳುನಾಡ್, ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ  ಅಪರಾದ ಕ್ರಮಾಂಕ 225/2012 ಕಲಂ: ಗಂಡಸು ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tuesday, December 25, 2012

Daily Crime Incidents for Dec 25, 2012


ಕಳ್ಳತನ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 22-12-2012 ರಂದು 18-00 ಗಂಟೆಯಿಂದ ದಿನಾಂಕ 23-12-2012 ರಂದು 23-30 ಗಂಟೆಯ ಮಧ್ಯೆ ಮಂಗಳೂರು ತಾಲೂಕು ಹೊಸಬೆಟ್ಟು ಗ್ರಾಮದ ಕಡಂಬೋಡಿ ಎಂಬಲ್ಲಿಯ ಈ ಪ್ರಕರಣದ ಪಿರ್ಯಾದಿದಾರರ  ಮನೆಯಿಂದ  ಮುಂದಿನ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಒಳಗಿನ ಬೆಡ್ರೂಮ್ನ ಬಾಗಿಲನ್ನು ಕೂಡಾ ಮುರಿದು ಒಳಗೆ ಹೋಗಿ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟನ್ನು ಮುರಿದು ಅದರ ಸೇಫ್ ಲಾಕರನ್ನು ಜಖಂಗೊಳಿಸಿ ಅದರೊಳಗಿದ್ದ ಸುಮಾರು 173 ಗ್ರಾಂ ತೂಕದ ಚಿನ್ನಾಭರಣಗಳನ್ನು  ಕಳ್ಳತನ  ಮಾಡಿರುವುದಾಗಿ ಮತ್ತು ಮನೆಯ ಇನ್ನೊಂದು ಬೆಡ್ರೂಮ್ನ ಕೋಣೆಯಲ್ಲಿದ್ದ ಎರಡು ಕಬ್ಬಿಣದ ಕಪಾಟುಗಳನ್ನು ತೆರದು ಬಟ್ಟೆ-ಬರೆಗಳನ್ನು ಚೆಲ್ಲಾ-ಪಿಲ್ಲಿ ಮಾಡಿರುತ್ತಾರೆ. ಹಾಗೂ ಅಡುಗೆ ಕೋಣೆಯ ಕೆಳಗಡೆ ಮತ್ತು ಮೇಲ್ಗಡೆ ಇರುವ ಸೆಲ್ಪ್ಗಳನ್ನು ತೆರೆದು ವಸ್ತುಗಳನ್ನು ಹುಡುಕಾಡಿರುವುದಾಗಿ ಹಾಗೂ ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ಸುಮಾರು 4 ಲಕ್ಷ ರೂಪಾಯಿ ಆಗಬಹುದುದಾಗಿ ಎಂಬುದಾಗಿ ಫಿರ್ಯಾದಿದಾರರಾದ  ಎಮ್.ವೀರಪ್ಪ ನಾಯ್ಕ್,ಪ್ರಾಯ 49 ವರ್ಷ ತಂದೆ ಸೋಮ ನಾಯ್ಕ್, ಮನೆ ನಂಬ್ರ 1-13/1, 'ಮಂಜುಶ್ರೀ', ಕಡಂಬೋಡಿ, ಗೋವಿಂದದಾಸ್ ಕಾಲೇಜಿನ ಹಿಂಬದಿ, ಸುರತ್ಕಲ್, ಮಂಗಳೂರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 256/2012 ಕಲಂ: 457,454,380 ಐ.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:



ಪಣಂಬೂರು ಠಾಣೆ;


  • ದಿನಾಂಕ 24-12-12 ರಂದು 15-30 ಗಂಟೆಗೆ ಮಾರುತಿ ಆಲ್ಟೋ ಕಾರು ನಂಬ್ರ ಕೆಎ-44/3191 ನೇಯದನ್ನು ಬೈಕಂಪಾಡಿ ಲೆಮಿನಾ ಕಂಪೆನಿಯಿಂದ ಜನರಲ್ ಮ್ಯಾನೇಜರ್ರವರನ್ನು  ಬೈಕಂಪಾಡಿಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ರಾ ಹೆ 66 ರ ಜೋಕಟ್ಟೆ ಕ್ರಾಸ್ ಜಂಕ್ಷನ್ನಲ್ಲಿ ವಾಹನ ದಟ್ಟನೆ ಇದ್ದ ಕಾರಣ ಪಿರ್ಯಾದಿದಾರರು ಕಾರನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಮಂಗಳೂರು ಕಡೆಗೆ ಹೋಗುತ್ತಿರುವ ಸಮಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ  ರೆಡಿಮಿಕ್ಸ್ ಮಿಲ್ಲರ್ ಲಾರಿ ಕೆಎ-35/ಎಮ್-2021ನೇಯದರ ಚಾಲಕ ಉಸ್ಮಾನ್ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿನ ಬಲಬದಿಗೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಬಲಬದಿಯ ಎರಡು ಬಾಗಿಲು ಮತ್ತು ಸೈಡ್ ಮಿರರ್ ಜಖಂಗೊಂಡಿರುವುದಾಗಿದೆ ಎಂಬುದಾಗಿ ಧರ್ಣಪ್ಪ ಪೂಜಾರಿ ಪ್ರಾಯ 38 ವರ್ಷ ತಂದೆ: ಅಣ್ಣಿ ಪೂಜಾರಿ ವಾಸ: ಸಬರಬೆಪಣಕಜೆಬೆಳ್ತಂಗಡಿ ತಾಲೂಕು ಹಾಲಿ ವಾಸ: ಅಚ್ಚುಕೋಡಿ ಬೊಂದೇಲ್ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ  ಅಪರಾದ ಕ್ರಮಾಂಕ 224/12 ಕಲಂ 279 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಾವೂರು ಠಾಣೆ;


  • ದಿನಾಂಕ  22-12-2012 ರಂದು ರಾತ್ರಿ 00-35 ಗಂಟಗೆೆ ಊಟವಾದ ಬಳಿಕ ಎ.ಜೆ. ಆಸ್ಪತ್ರೆ ಕಡೆಯಿಂದ ಪಣಂಬೂರು ಕಡೆಗೆ ದಿನೇಶ್ನ ಕಾರು ಏಂ 36-ಒ-3977 ನೇಯದರಲ್ಲಿ ಪಣಂಬೂರು ಕಡೆಗೆ ಹೋಗುತ್ತಿದ್ದು, ದಿನೇಶನು ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಕೂಳೂರು ಅರವಿಂದ ಮೋಟಾರ್ಸ್ ಪ್ರೈ.ಲಿ. ಕಟ್ಟಡದ ಎದುರು ತಲುಪಿದಾಗ ನಿರ್ಲಕ್ಷ್ಯತನದಿಂದ ಒಮ್ಮಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಸೂಚನಾ ಫಲಕದ ಕಂಬಕ್ಕೆ ಢಿಕ್ಕಿಯಾಗಿ ಮಗುಚಿ ಬಿದ್ದು ಕಾರಿನಲ್ಲಿದ್ದ ಫಿಯರ್ಾದಿದಾರರ ಎಡಭುಜಕ್ಕೆ ಮೂಳೆ ಮುರಿತದ ಗಾಯ ಮತ್ತು ಎಡಕಾಲಿಗೆ ಗಾಯವಾಗಿರುತ್ತದೆ, ದಿನೇಶನ ಬಲಕಾಲಿಗೆ ಗಾಯವಾಗಿರುತ್ತದೆ, ಅಜರ್ುನ್ರಾಜ್ನ ಬಲಕೈಗೆ ರಕ್ತಗಾಯವಾಗಿರುತ್ತದೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಅಜರ್ುನ್ ಕೆ ವಾಸುದೇವ (19) ತಂದೆ: ಕೆ.ಕೆ. ವಾಸುದೇವ, ವಾಸ: ಕೋಜಪರಂಬಿಲ್ ಹೌಸ್,ೆ ಎಲ್ತೂರು ವಲಾರಿ, ತ್ರಿಶ್ಶೂರ್, ಕೇರಳ. ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 190/2012 ಕಲಂ: 279, 337, 338 ಐ.ಪಿ.ಸಿ.  ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.



  •  ದಿನಾಂಕ 23-12-2012 ರಂದು ಫಿಯರ್ಾದಿದಾರರು  ತನ್ನ ಬಾಬ್ತು ಸ್ಕೂಟರ್ ನಂಬ್ರ ಏಂ-19-ಇಂ-5425 ನೇಯದರಲ್ಲಿ ಸ್ನೇಹಿತ ಕೊಪ್ಪಲಕಾಡಿನ ಪ್ರವೀಣ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕೆ.ಪಿ.ಟಿ.ಯಿಂದಾಗಿ ಮೇರಿಹಿಲ್ ಕಡೆಗೆ ಬರುತ್ತಾ ಅಪರಾಹ್ನ 3-10 ಗಂಟೆಗೆ ಕೊಂಚಾಡಿಯ ಶ್ರೀ ರಾಮಾಶ್ರಮ ಶಾಲೆಯ ಬಳಿ ತಲುಪಿದಾಗ ಅವರ ಹಿಂದುಗಡೆಯಿಂದ ಅಂದರೆ ಹರಿಪದವು ಜಂಕ್ಷನ್ನಿಂದ ಮೇರಿಹಿಲ್ ಕಡೆಗೆ ಏಂ-19-ಇಂ-2150 ನೇ ಮೋಟಾರು ಸೈಕಲ್ ಸವಾರನು ತನ್ನ ಬಾಬ್ತು ಮೋಟಾರು ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರ ಸ್ಕೂಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾಧುದಾರರು ಮತ್ತು ಪ್ರವೀಣ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪ್ರವೀಣ್ ರವರ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಖುಲಾಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಗಿರೀಶ್ ಆಚಾರ್ಯ (36) ತಂದೆ: ಬಾಬು ಆಚಾರ್ಯ, ವಾಸ: ಕುಂಟಲ್ಪಾಡಿ ಹೌಸ್, ಶಕ್ತಿನಗರ,  ಮಂಗಳೂರು. ರವರು ನೀಡಿದ ದೂರಿನಂತೆ  ಕಾವೂರು ಠಾಣೆ ಅಪರಾದ ಕ್ರಮಾಂಕ  192/2012 ಕಲಂ: 279, 338 ಐ.ಪಿ.ಸಿ. ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಬಜಪೆ ಠಾಣೆ;

  • ದಿನಾಂಕ 23-12-2012 ರಂದು ರಾತ್ರಿ ಮಂಗಳೂರು ತಾಲೂಕು ಕೊಂಡೆಮೂಲೆ ಗ್ರಾಮದ ಕಟೀಲು ಬಸ್ ನಿಲ್ದಾಣದ ಬಳಿ ಅಂಗಡಿಯ ಎದುರುಗಡೆ ಜಗುಲಿಯಲ್ಲಿ ಮಲಗಿದ್ದ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶ್ರೀ ವಿಶ್ವೇಶ್ ರಾವ್, ಪ್ರಾಯ 65 ವರ್ಷ, ತಂದೆ: ಕೃಷ್ಣ ರಾವ್, ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ವಸತಿ ಗೃಹ, ಕಟೀಲು, ಕೊಂಡೆಮೂಲೆ ಗ್ರಾಮ ರವರು ನೀಡಿದ ದೂರಿನಂತೆ ಬಜಪೆ ಠಾಣೆ  ಯುಡಿಆರ್ ನಂಬ್ರ  54/2012 ಕಲಂ 174 ಸಿ ಆರ್ ಪಿ ಸಿ  ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.


ಮಂಗಳೂರು ಪೊರ್ವ ಠಾಣೆ;


  • ದಿನಾಂಕ: 19-12-2012 ರಂದು 07.30 ಗಂಟೆಗೆ ಪಿರ್ಯಾದಿದಾರರ ತಂದೆಯಾ ಈಶ್ವರರವರು ರಕ್ತದೊತ್ತಡ ಹಾಗೂ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ಉಡುಪಿ ಜಿಲ್ಲಾ ಪಂಚಾಯತ್ನಲ್ಲಿ ಕೆಲಸ ಮಾಡಿಕೊಡಿಕೊಂಡಿದ್ದು ಮನೆಯಿಂದ ಕೆಲಸದ ಬಗ್ಗೆ ಹೊರಟು ಹೋಗಿದ್ದು ಉಡುಪಿಗೆ ಹೋಗುವರೇ ಮಂಗಳೂರು ನಗರದ ಬಂಟ್ಸ್ ಹಾಸ್ಟೇಲ್ ಬಳಿ ಬಸ್ಗಾಗಿ ಕಾಯುತ್ತಿರುವ ಸಮಯ ಖಾಯಿಲೆಯು ಉಲ್ಬಣಗೊಂಡು ಕಸಿದು ಬಿದ್ದವರನ್ನು ಪೊಲೀಸರು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಫತ್ರೆಗೆ ದಾಖಲಿಸಿದ್ದು, ಪೊಲೀಸರು ಪೋನು ಕರೆ ಮಾಡಿ ತಿಳಿಸಿದಂತೆ  ನಂತರ ಅಲ್ಲಿಂದ ಅವರನ್ನು ಫಾದರ್ ಮುಲ್ಲರ್ಸ್ ಆಸ್ಫತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 24-12-2012 ರಂದು 09-000 ಗಂಟೆಗೆ ಮೃತಪಟ್ಟಿರುವುದಾಗಿದೆ. ಎಂಬುದಾಗಿ ಲತೇಶ್ (18) ತಂದೆ; ಈಶ್ವರ ವಾಸ: ಆಸೈ ಮನೆ ಆಸೈಗೋಳಿ ಮಂಜನಾಡಿ ಗಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ  ಮಂ.ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್ ನಂ: 38/2012 ಕಲಂ: 174 ಸಿ.ಆರ್.ಪಿ.ಸಿ ರಂತೆ ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.

Monday, December 24, 2012

Daily Crime Incidents for December 24, 2012




ಅಪಹರಣ ಪ್ರಕರಣ:

ಸುರತ್ಕಲ್ ಠಾಣೆ;

  •      ದಿ: 22-12-12 ರಂದು ಸಂಜೆ 04.30 ಘಂಟೆಗೆ ಫಿರ್ಯಾಧಿದಾರರು ಅವರ ಮನೆಯ ಕೋಣೆಯಲ್ಲಿ ಅವರ ಹೆಂಡತಿ ಶ್ರೀಮತಿ ಸುಮಂಗಳ ಮತ್ತು ಮಗುವಿನೊಂದಿಗೆ ಮಲಗಿದ್ದು, ಪಕ್ಕದ ಚಾವಡಿಯಲ್ಲಿ ಪ್ರಾಯ ಸುಮಾರು 50 ವರ್ಷದ ಅವರ ತಾಯಿ ಶ್ರೀಮತಿ ಸಂಪಾ ಮಲಗಿದ್ದು, ಈ ದಿನ ದಿ: 23-12-=12 ರಂದು ಬೆಳಿಗ್ಗೆ ಸುಮಾರು 07:00 ಗಂಟೆಗೆ ಫಿರ್ಯಾಧಿದಾರರು ಎದ್ದು ನೋಡುವಾಗ ಶ್ರೀಮತಿ ಸಂಪಾರವರು ಇಲ್ಲದೇ ಇದ್ದು, ಶ್ರೀಮತಿ ಸುಮಂಗಳಲ್ಲಿ ವಿಚಾರಿಸಿದಾಗ ಸಂಪಾ ಹಾಗೂ ಕಳವಾರು ಗ್ರಾಮ ಪಂಚಾಯತ್ ಸದಸ್ಯ ಬಿ ಆದಂರವರು ಮನೆಯ ಅಂಗಳದಲ್ಲಿ ಮಾತನಾಡಿಕೊಂಡಿದ್ದು, ತನ್ನೊಂದಿಗೆ ಬರುವಂತೆ ಹೇಳಿದ ಬಿ ಆದಂರವರು ಶ್ರೀಮತಿಸಂಪಾರವರನ್ನು ಕರೆದುಕೊಂಡು ಹೋಗಿದ್ದು, ಬಳಿಕ ಫಿರ್ಯಾಧಿದಾರರು ಈ ದಿನ ಮಧ್ಯಾಹ್ನ 1:00 ಗಂಟೆಗೆ ಕಳವಾರಿನ ಖುರ್ಸುಗುಡ್ಡೆಗೆ ಹೋಗಿ ಸದ್ರಿ ಮನೆಯಲ್ಲಿದ್ದ ಆದಂರವರನ್ನು ವಿಚಾರಿಸಿದಾಗ ಮನೆಯ ಒಳಗಡೆ ಬರಬೇಡ, ಏನು ನೋಡುತ್ತಿ ಎಂದು ಆದಂರವರು ತಿಳಿಸಿರುತ್ತಾರೆ. ನಾಳೆ ದಿನ ದಿ: 24-12-12 ರಂದು ಬಾಳ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಉಪಾಧ್ಯಾಕ್ಷರ ಚುನಾವಣೆ ಇದ್ದು, ಅದರಲ್ಲಿ ಬಿ,ಆದಂರವರು ಚುನಾವಣೆಯಲ್ಲಿ ಸ್ವರ್ಧಿಸುವ ಸಾಧ್ಯತೆ ಇದ್ದು, ಫಿರ್ಯಾಧಿದಾರರ ತಾಯಿಯ ಮತ ಸೆಳೆಯುವ ಉದ್ದೇಶದಿಂದ  ಆದಂರವರು ಸಂಪಾರವರನ್ನು ಅಪಹರಿಸಿಕೊಂಡು ಹೋಗಿದ್ದು, ಸಂಪಾರವರನ್ನು ಪತ್ತೆ ಮಾಡಿ ನ್ಯಾಯಾ ಒದಗಿಸಿ ಕೊಡಬೇಕಾಗಿ ಎಂಬುದಾಗಿ  ಶಂಕರ (28_ ) ತಂದೆ: ದಿ ಸುಂದರ, ವಾಸ: ಕಾಪಿಕಾಡುಗುಡ್ಡೆಮನೆ, ಕಳವಾರು ಗ್ರಾಮ ಜೋಕಟ್ಟೆ ಅಂಚೆ, ಮಂಗಳೂರು. ರವರು ನೀಡಿದ ದೂರಿನಂತೆ  ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 255/12 PÀ®A: 365 IPC ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

 ಮೂಡಬಿದ್ರೆ ಠಾಣೆ;

  • ದಿನಾಂಕ : 22-12-2012 ರಂದು ಸಂಜೆ ಸುಮಾರು 16-30 ಗಂಟೆಗೆ ಪಿರ್ಯಾದಿದಾರರು ತನ್ನ ತಂದೆ ವಿಕ್ರಮ್ ಪರುಷೋತ್ತಮ ಗಲಗಲಿ ರವರೊಂದಿಗೆ ಪ್ರಾಂತ್ಯ ಗ್ರಾಮದ ಕೀರ್ತಿ ನಗರ ಎಂಬಲ್ಲಿಂದ ಮೂಡಬಿದ್ರೆ ಬಸ್‌ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿರುವ ಸಮಯ ಮೋಟಾರು ಸೈಕಲ್‌ ನಂಬ್ರ ಕೆಎ 19 ಡಬ್ಲೂ 6361 ನೇದರ ಸವಾರ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ  ಹಿಂಬದಿಯಿಂದ ಬಂದು  ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿಯ ತಂದೆಗೆ ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಧನಂಜಯ ಗಲಗಲಿ (16), ತಂದೆ : ವಿಕ್ರಮ್‌ ಪುರುಷೋತ್ತಮ ಗಲಗಲಿ, ವಾಸ : ಮಧುರ ಚೆನ್ನನಗರ, ಹಲಸಂಗಿ ಗ್ರಾಮ, ಮಮಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ  ಅಪರಾದ ಕ್ರಮಾಂಕ 250/2012, ಕಲಂ  279, 338 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ನಡೆಸಿ, ಜೀವ ಬೆದರಿಕೆ ಪ್ರಕರಣ:

ಬಜಪೆ ಠಾಣೆ;

  • ದಿನಾಂಕ  19.12.2012 ರಂದು ರಾತ್ರಿ 20.30 ಗಂಟೆಗೆ  ಮಂಗಳೂರು ತಾಲೂಕು  ಕೋಳವೂರು  ಗ್ರಾಮದ  ಬಾಳಿಕೆಮನೆ  ಎಂಬಲ್ಲಿ ಇರುವಾಗ  ಪಿರ್ಯಾದಿದಾರರ ಗಂಡನ ಅಣ್ಣನಾದ ಜೆರಾಲ್ಡ್ ಡಿಸೋಜಾ  ಆಶಾ ಡಿಸೋಜಾ ರವರು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರ ಮತ್ತು ಅವರ ಗಂಡನನ್ನು ಮನೆಯನ್ನು  ಬಿಟ್ಟು ಹೋಗಲು  ಹೇಳಿದ್ದು  ಅದಕ್ಕೆ  ಫಿರ್ಯಾದಿದಾರರು  ಒಪ್ಪದೇ  ಇದ್ದಾಗ  ಪಿರ್ಯಾದುದಾರರಿಗೆ  ಅವಾಚ್ಯ ಶಬ್ದಗಳಿಂದ  ರಂಡೇ  ಬೇವರ್ಸಿ  ಎಂದು ಬೈದು  ಕೈಗಳಿಂದ  ಕೆನ್ನೆಗೆ  ಹೊಡೆದು  ಕುತ್ತಿಗೆಯನ್ನು ಹಿಚುಕಿ  ತಲೆಯನ್ನು  ಗೋಡೆಗೆ  ಅಪ್ಪಳಿಸಿ  ಹಲ್ಲೆ ಮಾಡಿ ಜೀವ ಬೆದರಿಕೆ  ಹಾಕಿರುತ್ತಾರೆ ಎಂಬುದಾಗಿ ವೈಲೆಟ್ ಲೀನಾ  ಪಿಂಟೋ ಪ್ರಾಯ:26 ವರ್ಷ ಗಂಡ:ರಾಜೇಶ್  ಪಿಂಟೋ ವಾಸ:ಬಾಳಿಕೆ ಹೌಸ್, ಕೊಳವೂರು ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ  ಬಜಪೆ ಠಾಣೆ ಅಪರಾದ ಕ್ರಮಾಂಕ 250/2012 ಕಲಂ: 447,323,504,506 ಜೊತೆಗೆ  34 ಐಪಿಸಿ ರಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ .


ಅಸ್ವಾಭಾವಿಕ ಮರಣ ಪ್ರಕರಣ:

ಮುಲ್ಕಿಠಾಣೆ;

  • ದಿನಾಂಕ 23.12.2012 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಾವ  ಗಣೇಶ್ ಕುಂದರ್ ಪ್ರಾಯ:45 ವರ್ಷ ಎಂಬವರು  ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಕೊಪ್ಪಲ ಎಂಬಲ್ಲಿರುವ  ರಮೇಶ್ ಬೆಳ್ಚಡ ಎಂಬವರ ಮನೆಗೆ ವಿಪರೀತ ಅಮಲು ಪದಾರ್ಥ ಸೇವನೆ  ಮಾಡಿಕೊಂಡು ಬಂದು ಮನೆಯಲ್ಲಿ ಮಲಗಿದ್ದವರನ್ನು ಊಟ ಮಾಡಲು ಎಬ್ಬಿಸಿದಾಗ ಏಳದೇ ಇದ್ದು ಸಂಜೆ ಸುಮಾರು 7.00 ಗಂಟೆಗೆ  ಎಬ್ಬಿಸಲು ನೋಡಿದಾಗ ಏಳದೇ ಇದ್ದು, ಅವರ  ಮೈ ತಣ್ಣಗಾಗಿ ಇರುವುದನ್ನು ಕಂಡುಬಂದಂತೆ ಫಿರ್ಯಾದಿದಾರರಿಗೆ ಅವರ ಅತ್ತೆ ಶ್ರೀಮತಿ ಗೀತಾರವರು  ಫೋನ್  ಮಾಡಿ ತಿಳಿಸಿದ್ದು, ಫಿರ್ಯಾದುದಾರರು ಮತ್ತು ಅವರ  ಗೆಳೆಯರು ಗಣೇಶ್ ಕುಂದರ್ ರವರನ್ನು ಚಿಕಿತ್ಸೆಯ ಬಗ್ಗೆ  ಅವರ ಕಾರಿನಲ್ಲಿ ಪದ್ಮಾವತಿ ಆಸ್ಪತ್ರೆಗೆ  ಕೊಂಡುಹೋದಲ್ಲಿ ವೈದ್ಯರು ಪರೀಕ್ಷಿಸಿ ಗಣೇಶ್ ಕುಂದರ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಗಣೇಶ್ ಕುಂದರ್ ರವರು ವಿಪರೀತ ಅಮಲು  ಪದಾರ್ಥ ಸೇವನೆ  ಮಾಡಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕಿರಣ್  ಸಾಲ್ಯಾನ್ ಪ್ರಾಯ 31  ವರ್ಷ  ತಂದೆ:ದಿ.ರಾಮಪ್ಪ ಸುವರ್ಣ ವಾಸ:ಶ್ರೀ ಭಗವತಿ ಸ್ಟೋರ್ ಕೊಯಿಕುಡೆ ಅಂಚೆ ಮತ್ತು ವಿಳಾಸ  ಹಳೆಯಂಗಡಿ ವಯ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿಠಾಣೆ ಅಪರಾದ ಕ್ರಮಾಂಕ 32/2012 ಕಲಂ: 174 .ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ;

  • ದಿನಾಂಕ : 23-12-2012 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿಯ ತಮ್ಮ ನೋಣಯ್ಯ (34) ಎಂಬವರು ಕಲ್ಲಬೆಟ್ಟು ಗ್ರಾಮದ ತೆಂಕಬೆಟ್ಟು ಗುತ್ತು ಮನೆ  ಎಂಬಲ್ಲಿಯ ವಿಜಯ ಶೆಟ್ಟಿ ಎಂಬವರ ಅಡಿಕೆ ತೋಟದಿಂದ ಅಡಿಕೆ ಕೀಳುವ ಕೆಲಸಕ್ಕೆ ಹೋಗಿದ್ದವರು ಆಕಸ್ಮಿಕವಾಗಿ ಎದೆಯಲ್ಲಿ ನೋವು ಕಾಣೆಸಿಕೊಂಡಿದ್ದು ಚಿಕಿತ್ಸೆ ಕೊಡಿಸುವ ಸಲುವಾಗಿ ಆಸ್ಪತ್ರೆಗೆ ಹೊರಡುತ್ತಿದ್ದಂತೆ ಅಡಿಕೆ ತೋಟದಿಂದ ವಿಜಯ ಶೆಟ್ಟಿಯವರ ಅಂಗಳಕ್ಕೆ ನಡೆದುಕೊಂಡು ಬರುತ್ತಿದ್ದ ವೇಳೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟಿರುವುದಾಗಿದೆ ಎಂಬುದಾಗಿ ರವಿ ಪ್ರಾಯ 39 ವರ್ಷ, ತಂದೆ : ಕೇಪು ಹರಿಜನ, ವಾಸ : ನೆಲ್ಲಿಗುಡ್ಡೆ ಮನೆ, ಗಂಟಾಲ್‌ಕಟ್ಟೆ, ಕರಿಂಜೆ  ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ 55/2012 ಕಲಂ : 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

Sunday, December 23, 2012

Daily crime incidents For Dec 23, 2012


ಅಪಘಾತ ಪ್ರಕರಣ:

ಉಳ್ಳಾಲ ಠಾಣೆ;

ದಿನಾಂಕ 21.12.2012 ರಂದು ಫಿರ್ಯಾದಿದಾರರು ತೊಕ್ಕೊಟ್ಟುನಿಂದ ಧರ್ಮನಗರದಲ್ಲಿನ ತನ್ನ ಮಗಳು ಜಯಲಕ್ಷ್ಮಿ ಎಂಬವಳ ಮನಗೆ ನಡೆದುಕೊಂಡು ಹೋಗುತ್ತಿದ್ದು ಸುಮಾರು ಸಂಜೆ 7.00 ಗಂಟೆ ಸಮಯಕ್ಕೆ  ತೊಕ್ಕೊಟ್ಟು ಮಾಯಾ ಬಾರ್ & ರೆಸ್ಟೋರೆಂಟ್ ಹೊಟೇಲು  ಎದರು ತಲುಪಿದಾಗ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಮಿನಿ ಲಾರಿ ನಂಬ್ರ ಕೆಎ 20 ಎ 4431 ನೇಯದನ್ನು ಅದರ ಚಾಲಕ  ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪಿರ್ಯಾದಿಯ ಎಡಕಾಲಿನ ಮೇಲೆ ಲಾರಿ ಚಲಿಸಿದ ಪರಿಣಾಮ ಎಡಕಾಲು ಜಖಂಗೊಂಡಿದ್ದು, ಅಲ್ಲಿ ಸೇರಿದವರು ನೇತಾಜಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ಆದುದರಿಂದ ಸದ್ರಿ ಮಿನಿಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿದಾರರಾದ ಗಂಗಾದರ (65) ತಂದೆ - ದೂಮ ಬೆಳ್ಚಡ, ಸೂಟರ್ ಪೇಟೆ, ವೆಲೆನ್ಸಿಯಾ, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 334/2012 ಕಲಂ 279,337  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕೊಲೆ ಪ್ರಕರಣ:

ಬಜಪೆ ಠಾಣೆ;

ದಿನಾಂಕ:22-12-2012ರಂದು 17.30 ಗಂಟೆಯ ಮೊದಲುಯಾರೋ ದುಷ್ಕಮರ್ಿಗಳು ಯಾವುದೋ ಕಾರಣದಿಂದ ಯಾವುದೋ ಸ್ಥಳದಲ್ಲಿ ಒಬ್ಬಅಪರಿಚಿತ ವ್ಯಕ್ತಿಯ ಮುಖಕ್ಕೆ, ಕುತ್ತಿಗೆಗೆ, ಹೊಟ್ಟೆಯ ಭಾಗಕ್ಕೆ ಹಾಗೂ ದೇಹದ ಇತರ ಭಾಗಗಳಿಗೆ ಹರಿತವಾದ ಆಯುಧಗಳಿಂದ ಇರಿದು ಕೊಲೆ ಮಾಡಿ ಮೃತದೇಹವನ್ನು ಮತ್ತುಕೊಲೆಯ ಸಾಕ್ಷಾಧಾರವನ್ನು ಮರೆಮಾಚುವಉದ್ದೇಶದಿಂದ  ಮಂಗಳೂರು ತಾಲೂಕು ಪೆಮರ್ುದೆಗ್ರಾಮದ ಬೊಳ್ಳುಳ್ಳಿ ಮಾರ್ ಮಾರ್ಗದ ಮೂರುಕೋಡಿ ಎಂಬಲ್ಲಿರುವ ಓ ಎಂ ಪಿ ಏಲ್ರವರ ಬಾಬ್ತು ಸ್ಥಳದಲ್ಲಿ ಬೆಳೆದ ಮರಗಿಡಗಳ ಪೊದೆಯಲ್ಲಿ ಬಿಸಾಡಿ ಹೋಗಿರುವುದಾಗಿರುತ್ತಾರೆ ಎಂಬುದಾಗಿ ಶ್ರೀ ಸಮಿವುಲ್ಲಾ, ಪ್ರಾಯ 32 ವರ್ಷ, ತಂದೆ: ಮೆಹಬುಬ್ಖಾನ್, ವಾಸ: ಪಟ್ಟಾಡಿ ಹೌಸ್, ಕೆ ಪಿ ನಗರ, ಬಜಪೆ ಅಂಚೆ ಮತ್ತುಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 249/2012 ಕಲಂ: 302,201 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


ಹಲ್ಲೆ ನಡೆಸಿ, ಜೀವ ಬೆದರಿಕೆ ಪ್ರಕರಣ:


ದಕ್ಷಿಣ ಠಾಣೆ;

ದಿನಾಂಕ 14-12-2012 ರಂದು ರಾತ್ರಿ 8-15 ಗಂಟೆ ಸಮಯಕ್ಕೆ ಪಿಯರ್ಾದಿದಾರರು ಹಾಗೂ ಅವರ ಹೆಂಡತಿಯವರು ಮಂಗಳೂರು ಸವರ್ಿಸ್ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ತೆರಳುತ್ತಿದ್ದಾಗ, ಆರೋಪಿತರುಗಳಾದ ಗಣೇಶ ಮತ್ತು ಪ್ರಕಾಶ್ @ ಪಕ್ಕು ಎಂಬ ಬಸ್ ಏಜೆಂಟ್ರುಗಳು ಸಮಾನ ಉದ್ದೇಶದಿಂದ ಅಕ್ರಮವಾಗಿ ತಡೆದು ನಿಲ್ಲಿಸಿ ಬೇವಾಸರ್ಿ ಸೂಳೆ ಮಗನೇ, ನೀನು ಭಾರಿ ಹೆಣ್ಣು ಮಕ್ಕಳಿಗೆ ಕೆಲಸ ತೆಗೆಸಿಕೊಡುತ್ತೀಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮುಖಕ್ಕೆ ಹಾಗೂ ತಲೆಗೆ ಹೊಡೆದು ಕಾಲಿನಿಂದ ತುಳಿದು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂಬುದಾಗಿ ಜೀವಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆರೋಪಿಗಳು ಹಲ್ಲೆ ನಡೆಸಿದ ಸಮಯ ಪಿರ್ಯಾದಿದಾರರ ಕಿಸೆಯಲ್ಲಿದ್ದ ರೂಪಾಯಿ  15,400/- ಹಾಗೂ ಚಿನ್ನದ ಚೈನು ಎಲ್ಲಿಯೋ ಬಿದ್ದು ಕಾಣೆಯಾಗಿರುತ್ತದೆ. ಇದರ ನಷ್ಟವನ್ನು ಆರೋಪಿಗಳು ಭರಿಸುವುದಾಗಿ ಹೇಳಿ ಈತನಕ ನಷ್ಟವನ್ನು ಪಾವತಿಸುರಿವುದಲ್ಲ ಎಂಬುದಾಗಿ  ಪಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ (30), ತಂದೆ: ನೀಲಯ್ಯ, ವಾಸ: ಮೂಡಲ್ ಬೆಟ್ಟು ಮನೆ, ಅಳಿಯೂರು ಅಂಚೆ, ವಲಪಾಡಿ ಗ್ರಾಮ, ಮೂಡಬಿದ್ರೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 223/12 ಕಲಂ 341 323 504 506  ಡಿ/ತಿ 34 ಕಅ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ ಪ್ರಕರಣ:

ದಕ್ಷಿಣ ಠಾಣೆ;

ದಿನಾಂಕ 21-12-2012 ರಂದು ಬೆಳಿಗ್ಗೆ 09-00 ಗಂಟೆಗೆ ಫಿಯರ್ಾದುದಾರರನ್ನು ಅವರ ತಾಯಿ ಮನೆ ಇರುವ ಹೊಯ್ಗೆ ಬಜಾರ್ನ ಮನೆಗೆ ಬಿಟ್ಟು ಗಿರೀಶ್ ಪುತ್ರನ್ರವರು ತಾತ್ಕಲಿಕವಾಗಿ ತಂಗುತ್ತಿದ್ದ ಮಂಗಳೂರು ನಗರದ ಹಂಪನ್ಕಟ್ಟೆಯಲ್ಲಿರುವ ಮೇಘಾ ಲಾಡ್ಜ್ ಹೋದವರು ಈವರೆಗೆ ವಾಪಾಸು ಮನೆಗೆ ಬಂದಿರುವುದಿಲ್ಲ. ಇವರನ್ನು ಪತ್ತೆ ಮಾಡಿಕೊಡುವಂತೆ ಪಿರ್ಯಾದಿದಾರರಾದ ಶ್ರೀಮತಿ ಪ್ರಪುಲ್ಲ (47), ಗಂಡ: ಗಿರೀಶ್ ಪುತ್ರನ್, ವಾಸ: ಹೇಮ ಸನದ, ಸುಭಸ್ ನಗರ, ಹೊಯ್ಗೆ ಬಜಾರ್, ಮಂಗಳೂರು ನೀಡಿದ ದೂರಿಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 224/12 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ನಿರ್ಲಕ್ಷತನದಿಂದ ಮರಣ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;

:ದಿನಾಂಕ: 22.12.2012 ರಂದು ಬೆಳಿಗ್ಗೆಯಿಂದ ಮಂಗಳೂರು ನಗರದ ಕಪಿತಾನಿಯೋ ಸೈಮನ್ ಲೇನ್ ಎಂಬಲ್ಲಿ ಕುಡ್ಸೆಂಪ್ ಯೋಜನೆಯಡಿ ಶ್ರೀರಾಮ್ ಇ.ಪಿ.ಸಿ  ಲಿಮಿಟೆಡ್ ಕಂಪೆನಿಯ ಕೆಲಸದವರಾದ ಪಿರ್ಯಾದಿ ವೆಮಕಟೇಶ, ಭಾಸ್ಕರ, ರಾಜು, ಮತ್ತು ಪಿ. ರಮೇಶ ರವರು ಒಳ ಚರಮಡಿಯ ಪೈಪ್ ಜೋಡನೆ ಕೆಲಸವನ್ನು ಮಾಡಿಕೊಂಡಿದ್ದು ಕಂಪೆನಿಯ ಸಯಟ್ ಇಂಜಿನಿಯರ್ ರಘುನಾಥ್ ಶೆಟ್ಟಿ , ಮೆನೇಜರ್ ಬಾಲಸುಬ್ರಹ್ಮಣ್ಯಂ ಮತ್ತು ಜೆ.ಸಿ.ಬಿ ಚಾಲಕ ಸಮೀಮ್ ರವರು ಪಿರ್ಯಾದಿ ಹಾಗೂ ಇತರ ಕೆಲಸದವರಿಗೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಈ ದಿನ ಮಧ್ಯಾಹ್ನ 3.00 ಗಮಟೆಗೆ  ದುಡುಕು ಹಾಗೂ ನಿಲಕ್ಷ್ಯತನದಿಂದ  ಕೆಲಸ ಮಾಡಿಸಿದರ ಪರಿಣಾಮಾಲ್ಲದೆ, ಜೆ.ಸಿ.ಬಿ ಯಿಂದ  ಟ್ರಂಚ್ ಅಗೆಯುವ ಸಂದರ್ಬದಲ್ಲಿ ನೀರಿನ ಪೈಪ್ಗೆ ಜೆಸಿಬಿ ತಾಗಿ  ಕುಡಿಯುವ ನೀರಿನ ಪೈಪ್ ಒಡೆದು  ರಬಸದಲ್ಲಿ ಚಿಮ್ಮಿದ ನೀರಿನೊಳಗೆ ರಾಜು ಎಂಬವರು ನೀರು ಹಾಗೂ ಕೆಸರು ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿರುತ್ತಾರೆ ಎಂಬುದಾಗಿ ಬಿ. ವೆಂಕಟೇಶ್ ತಂದೆ: ಧವ್ರ್ಮರಾಜ್ ವಾಸ:  ಶ್ರೀರಾಮ್ ಇಪಿಸಿ ಲಿಮಿಟೆಡ್ ಲ್ಯಾನ್ಮಾಕ್ಸ್  2-75/1 ಹ್ರೆಟೇಲ್ ದೇವೇಂದ್ರ ಬಳಿ ಅಡುಮರೋಳಿ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 337/12 ಕಲಂ: 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, December 22, 2012

Daily Crime Incidents for Dec 22, 2012

ಅಪಘಾತ ಪ್ರಕರಣ

ಮಂಗಳೂರು ಸಂಚಾರ ಪೂರ್ವ ಠಾಣೆ :


  • ದಿನಾಂಕ 19-12-2012 ರಂದು ಸಮಯ ಸುಮಾರು 13.15 ಗಂಟೆಗೆ ಪಿರ್ಯಾದಿ ಜೋನ್ ಡಿ ಸೋಜ  (48 ವರ್ಷ) ತಂದೆ- ದಿ.ಅಲ್ಬಟರ್್ ಡಿ ಸೋಜ, ವಾಸ: # 802, ಗ್ರೀನ್ ಹೈಟ್ಸ್ , ಎಸ್.ಎಲ್. ಮಥಾಯಸ್ ರಸ್ತೆ, ಮಂಗಳೂರು ರವರು ಮೊ,ಸೈಕಲ್ ನಂಬ್ರ ಏಂ-04 ಇಂ-37 ನ್ನು ಅಥೇನಾ ಆಸ್ಪತ್ರೆ ಜಂಕ್ಷನ್ ಕಡೆಯಿಂದ ಯುನಿಟಿ ಆಸ್ಪತ್ರೆ ಜಂಕ್ಷನ್ ಕಡೆಗೆ ಫಳ್ನೀರ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಪ್ಲಾಟಿನಂ ಥಿಯೇಟರ್ ಬಳಿ ತಲುಪುವಾಗ ಪಿರ್ಯಾದುದಾರರ ಮೊ,ಸೈಕಲ್ನ ಹಿಂದಿನಿಂದ ಕಾರು ನಂಬ್ರ ಏಂ-19 ಒ-6209 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೊ,ಸೈಕಲ್ನ ಹಿಂಭಾಗಕ್ಕೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕೈ ಮೊಣಗಂಟಿಗೆ ಗಂಭಿರ ಸ್ವರೂಪ ಗಾಯಗೊಂಡು ಯುನಿಟಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಜೋನ್ ಡಿ ಸೋಜ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ.185/2012 279 , 338 ಐ.ಪಿ.ಸಿ,& 134 (ಬಿ) ಮೋ.ವಾ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ :


  • ಪ್ರಬಾಕರನ್ ಪ್ರಾಯ ಃ48 ವರ್ಷ ತಂದೆಃಕೃಷ್ಣನ್ ವಾಸಃ ನಡಿಯಪರಂಬಿಲ್  ತಯವ ಪೋಸ್ಟ್  ಕರುನಾಗಪಳ್ಳಿ  ತಾಲೂಕು   ಕೊಲ್ಲಂ ಜಿಲ್ಲೆ ಕೇರಳ ರಾಜ್ಯ ಹಾಲಿಃ ಕ್ಯಾರಾಪ್ ಅಬ್ರಹಾಂ  ಮ್ಯಾಥ್ಯು ರವರ ಬಾಡಿಗೆ ಮನೆ ಹೊಸಬೆಟ್ಟು ಕುಳಾಯಿ ಮಂಗಳೂರು ತಾಲೂಕು ರವರು ದಿನಾಂಕ 20-12-12 ರಂದು ಒಎಂಪಿಎಲ್ನಲ್ಲಿ ಕಂಟ್ರಾಕ್ಟ್ ಬಾಬ್ತು ಕೆಲಸ ಮುಗಿಸಿ ಸಬ್ಕಂಟ್ರಾಕ್ಟ್ರ್ ಬಿನೋಯ್ರವರ ಜತೆಗೆ ಅವರ ಬಾಬ್ತು ಕೆಎಲ್-29-8135 ನೇ ಮೋಟಾರ್ ಸೈಕಲ್ಲಿನಲ್ಲಿ ಹೊನ್ನಕಟ್ಟೆ ಕಡೆಗೆಹೊರಟು ಕೈಕಂಬ - ಸುರತ್ಕಲ್ ರಸ್ತೆಯಲ್ಲಿ ಬರುತ್ತಾ ಮಂಗಳೂರು ತಾಲೂಕು ಇಡ್ಯಾ ಗ್ರಾಮದ ಕಾನ ಎಂಬಲಿ ್ಲ ಲ್ಯಾನ್ಸ್ವೇ ಬಾರ್ನ ಎದುರು ಬರುತ್ತಿರುವಾಗ ರಾತ್ರಿ 20-30 ಗಂಟೆಗೆ ಸುರತ್ಕಲ್- ಕಡೆಯಿಂದ ಕೈಕಂಬ ಕಡೆಗೆ ಕೆಎ-19-ಇಎಪ್-6561 ನೇ ಮೋಟಾರ್ ಸೈಕಲನ್ನು ಅದರ ಸವಾರ  ವಿಜಯ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಮೋಟಾರ್ ಸೈಕಲನ್ನು ತೋಕೂರು ರಸ್ತೆಗೆ ಒಮ್ಮೆಲೇ ತಿರುಗಿಸುತ್ತಾ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ಗೆ ರಬಸವಾಗಿ ಡಿಕ್ಕಿಯಾದ ಪರಿಣಾಮ ಪಿರ್ಯಾದಿ ಹಾಗೂ ಸವಾರರು ರಸ್ತೆಗೆ ಬಿದ್ದು ಅಲ್ಲದೇ ಡಿಕ್ಕಿಪಡಿಸಿದ ಮೋಟಾರ್ಸೈಕಲ್ ಕೂಡಾ ಸವಾರರ ಸಮೇತ ರಸ್ತೆಗೆ ಬಿತ್ತು. ಅದರ ಪರಿಣಾಮ ಪಿರ್ಯಾದಿಗೆ ಎಡಕಣ್ಣಿಗೆ ಹಾಗೂ ಹಣೆಗೆ ಮತ್ತು ಬಿನೋಯ್ರವರಿಗೆ ತಲೆಗೆ ಮತ್ತು ಬಲಕಣ್ಣಿನ ಬಳಿ ಗಾಯವಾಗಿದ್ದು ಅಲ್ಲಿ ಸೇರಿದವರು ಕೂಡಲೇ ಗಾಯಾಳುಗಳನ್ನು ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ಆಸ್ಪತ್ರೆಗೆ ನಿನ್ನೆ ದಾಖಲಿಸಿರುವುದಾಗಿದೆ ಎಂಬುದಾಗಿ ಪ್ರಬಾಕರನ್ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ.254/2012 ಕಲಂ: 279, 337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ :


  • ಪಿರ್ಯಾದಿ ಉಮೇಶ ಜಿ ಪುತ್ರನ್ ಪ್ರಾಯ 60 ವರ್ಷ ತಂದೆ: ಗೋವಿಂದ ,  ಕಕರ್ೇರ ನಿವಾಸ ಡೋರ್ ನಂ: 4-40, ಕುಳಾಯಿ ಹೊಸಬೆಟ್ಟು ಸುರತ್ಕಲ್ ಮಂಗಳೂರು ರವರು ಮತ್ತು ಅವರ ಹೆಂಡತಿ ಶ್ರೀಮತಿ ಪದ್ಮಾವತಿ ರವರುಗಳು ಅವರ ಸಂಬಂಧಿಕರ ಮದುವೆಗೆ ಮಂಗಳೂರಿನ ಟಿ ಎಂ ಎ ಪೈ ಕನ್ವರ್ಷನ್ ಹಾಲ್ಗೆ ಹೋಗಲು ಅವರ ಮನೆಯಿಂದ  ಬೆಳಿಗ್ಗೆ ಅವರ ಪರಿಚಯದ ಸಲೀಂ  ಎಂಬವರ ಕೆಎ-19/ಡಿ-3266 ಆಟೋರಿಕ್ಷಾದಲ್ಲಿ  ಪ್ರಯಾಣಿಸುತ್ತಾ ಪಣಂಬೂರು ಎಂ ಸಿ ಎಫ್ ಫ್ಯಾಕ್ಟರಿಯ ಮುಂಭಾಗ  ರಾ ಹೆ-66 ರಲ್ಲಿ  ಬೆಳಿಗ್ಗೆ 11-45 ಗಂಟೆಗೆ  ತಲುಪಿದಾಗ ಹಿಂದಿನಿಂದ  ಆರೋಪಿ ಕೆಎ-19/ಎಂಪಿ-4999 ನೇ ಸ್ಕಾಫರ್ಿಯೋ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾವನ್ನು ಹಿಂದಿಕ್ಕಲು ನುಗ್ಗಿಸಿ ರಿಕ್ಷಾಕ್ಕೆ ಬಲಬದಿಯಿಂದ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಸಾಧಾರಣ ಸ್ವರೂಪದ ಹಾಗೂ ಪಿರ್ಯಾದಿದಾರರ ಹೆಂಡತಿಯ ಬಲಕೈಗೆ ತೋಳಿನ ಮೇಲೆ ಮೂಳೆ ಮುರಿತದ ಗಂಭೀರ ಗಾಯ ಹಾಗೂ ರಿಕ್ಷಾ ಚಾಲಕ ಸಲೀಂರವರಿಗೆ ಸೊಂಟಕ್ಕೆ ಮತ್ತು ಬಲಕೈಗೆ  ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗಳಾಗಿ ಚಿಕಿತ್ಸೆಗೆ ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಉಮೇಶ್ ಜಿ ಪುತ್ರನ್ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ. 223/12 ಕಲಂ 279-337-338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Friday, December 21, 2012

Daly Crime Incidents for Dec 21, 2012


ಅಪಘಾತ ಪ್ರಕರಣ

ಮಂಗಳೂರು ಸಂಚಾರ ಪಶ್ಚಿಮ ಠಾಣೆ


  • ದಿನಾಂಕ 20.12.2012 ರಂದು ಸಂಜೆ 17.30 ಗಂಟೆಗೆ ಮಂಗಳೂರು ನಗರದ ಸಾರ್ವಜನಿಕ ಡಾಮಾರು ರಸ್ತೆಯಾದ ಕೊಟ್ಟಾರ ಚೌಕಿ - ಕೋಡಿಕಲ್  ಸವರ್ಿಸ್ ರಸ್ತೆಯಲ್ಲಿ ಒಂದು ನಂಬ್ರ ತಿಳಿಯದ ಟಾ.ಟಾ ಮೊಬೈಲ್ ರೀತಿಯ ವಾಹನವನ್ನು ಕೊಟ್ಟಾರ ಚೌಕಿ ಕಡೆಯಿಂದ - ಕೋಡಿಕಲ್ ಸವರ್ಿಸ್ ರಸ್ತೆಯಲ್ಲಿ  ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿ ಅಂದರೆ ಧನುಷ್ ಹೊಟೇಲ್ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದ ಒಬ್ಬ ಅಪರಿಚಿತ ವ್ಯಕಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿ ಗಂಭೀರ ತರಹದ ಗಾಯಗೊಂಡವರನ್ನು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಯಾರೋ ಸಾರ್ವಜನಿಕರು ತಂದಲ್ಲಿ ಸದ್ರಿ ವ್ಯಕ್ತಿ ಸಂಜೆ 18.00 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಅಲ್ಲದೆ ಡಿಕ್ಕಿ ಹೊಡೆದ ವಾಹನ ಚಾಲಕ ಅಪಘಾತ ಘಟಿಸಿದ ಬಳಿಕ ತನ್ನ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿರುವುದಾಗಿದೆ ಈ ಘಟನೆಯ ಬಗ್ಗೆ ದೂರು ನೀಡಲು ಯಾರು ಮುಂದೆ ಬಾರದ ಕಾರಣ ನಾನು ಸ್ವ ಇಚ್ಚೆಯಿಂದ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬುದಾಗಿ ಶಂಕರ ಶೆಟ್ಟಿ, ಹೆಚ್.ಸಿ. 524, ಸಂಚಾರ ಪಶ್ಚಿಮ ಪೊಲೀಸ್ ಠಾಣೆ, ಬಂದರು, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಸಂಚಾರ ಪಶ್ಚಿಮ ಠಾಣಾ ಅ.ಕ್ರ.146/2012 ಕಲಂ: 279,304(ಎ) ಭಾದಂಸಂ  ಮತ್ತು 134(ಎ)(ಬಿ) ಭಾ. ಮೋ.ವ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ

  • ದಿನಾಂಕ 20-12-2012 ರಂದು ಬೆಳಿಗ್ಗೆ 8-30 ಗಂಟೆಗೆ ಆರೋಪಿ ಚಾಲಕ ಗಿರೀಶ್ ಎಂಬಾತನು ಮಾರುತಿ ಓಮ್ನಿ ಕ್ಫರು ನಂಬ್ರ ಕೆಎ 19 ಪಿ 285 ನ್ಮ್ನ ಬೋಂದೇಲ್ ಕಡೆಯಿಂದ ಯೆಯ್ಯಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಬೋಂದೇಲ್ ಚಚರ್್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿಯರ್ಾದಿ ಧನಂಜಯ ಕುಮಾರ್ ಎಂಬವರಿಗೆ ಡಿಕ್ಕಿ ಹೊಡೆದಿದ್ದು , ಈ ಪರಿಣಾಮ ಪಿಯರ್ಾದಿಯ ಬಲಕಾಲಿನ ತೊಡೆಗೆ ಎಲುಬು ಮುರಿದ ತೀವ್ರ ಗಾಯವಾಗಿ ಹಣೆಯ ಎಡಬದಿಗೆ ರಕ್ತಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತದೆ ಎಂಬುದಾಗಿ ಧನಂಜಯ ಕುಮಾರ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 336/2012 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹುಡುಗಿ ಕಾಣೆ ಪ್ರಕರಣ

ಪಣಂಬೂರು ಠಾಣೆ

  • ಶ್ರೀಮತಿ ಮೀನಾಕ್ಷಿ 32 ವರ್ಷ ಗಂಡ: ದಿ: ವೆಂಕಟೇಶ ನಾಗಿನ ಮೆಟ್ಟಿಲು ಹಾವೇರಿ ತಾಲೂಕು & ಜಿಲ್ಲೆ  ಹಾಲಿ:ಬ್ರೈಟ್ ಮೊಸಾಯಿಲ್ ಇಂಡಸ್ಟ್ರೀಯಲ್ ರೂಮ್ ಬೈಕಂಪಾಡಿ ಕೈಗಾರಿಕಾ ಪ್ರದೇಶ ಬೈಕಂಪಾಡಿ ಮಂಗಳೂರು ರವರ ಮಗಳು ಕು: ಜ್ಯೋತಿ 14 ಎಂಬಾಕೆಯು ದಿನಾಂಕ: 17-12-12 ರಂದು ಬೆಳಿಗ್ಗೆ ಪಣಂಬೂರು ಎನ್ ಎಮ್ ಪಿ ಟಿ ಶಾಲೆಗೆಂದು ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಆಕೆಯನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ  ಪತ್ತೆ ಹಚ್ಚಿಕೊಡಬೇಕಾಗಿ  ನೀಡಿದ ಲಿಖಿತ ಪಿಯರ್ಾದಿಯಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:  ಪ್ರಾಯ 14 , ವಿದ್ಯಾಭ್ಯಾಸ: 7ನೇ ತರಗತಿ; ಎತ್ತರ: 4ಳಿ ಅಡಿ ; ಬಿಳಿ ಮೈಬಣ್ಣ; ಬಟ್ಟೆಬರೆಗಳು: ಶಾಲೆಯ ಸಮವಸ್ತ್ರ : ಕಡು ನೀಲಿ ಬಣ್ಣದ ಲಂಗ , ಆಕಾಶ ನೀಲಿ ಬಣ್ಣದ ಅಂಗಿ, ; ಕಿವಿಯಲ್ಲಿ ಬಂಗಾರದ ಬೆಂಡೋಲೆ ಇರುತ್ತದೆ. ; ಮಾತನಾಡುವ ಬಾಷೆ: ಕನ್ನಡ , ಜಾತಿ : ಹಿಂದು ಎಂಬುದಾಗಿ ಮೀನಾಕ್ಷಿ ಯವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ. 222/12 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಬಜಪೆ ಪೊಲೀಸ್ ಠಾಣೆ

  • ದಿನಾಂಕ 19/12/2012 ರಂದು ಸಂಜೆ ಸುಮಾರು 4.00 ಗಂಟೆಗೆ ವಿಶ್ವನಾಥ ಎನ್ , ಪ್ರಾಯ 35 ವರ್ಷ, ತಂದೆ: ನಾರಾಯಣ ಪೂಜಾರಿ ವಾಸ: ಬೊಗರಿದಡಿ ಮನೆ, ಕರಂಬಾರು ಶಾಲೆಯ  ಹತ್ತಿರ  ಕೆಂಜಾರು ಗ್ರಾಮ ಮಂಗಳೂರು ತಾಲೂಕು ರವರ ತಾಯಿ ಶ್ರೀಮತಿ ಪುಷ್ಪಾ 62 ವರ್ಷ ಎಂಬವರು ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಬೊಗರಿದಡಿ ಮನೆ ಎಂಬಲ್ಲಿ ತನ್ನ ಮನೆಯ ಬಚ್ಚಲಿನ ಒಲೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವಾಗ ಬೆಂಕಿಯು ಒಮ್ಮೆಲೆ ಪ್ರಜ್ವಲಿಸಿ ಪುಷ್ಪಾರವರ ಸಿರೆಗೆ ತಗಲಿದ್ದರಿಂದ ಸೀರೆ ಉರಿದು ಸುಟ್ಟ ಗಾಯವಾದವರನ್ನು ಪಿಯರ್ಾದಿದಾರರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನ ರಾತ್ರಿ 10.00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ವಿಶ್ವನಾಥ ಎನ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ.53/2012 ಕಲಂ 174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.



ಇತರೆ ಪ್ರಕರಣಗಳು

ಉತ್ತರ ಠಾಣೆ:

  • ದಿನಾಂಕ 12.12.2012 ರಂದು ಲೈಟ್ ಹೌಸ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ನಲ್ಲಿ ರೂ 1,000 ಮುಖ ಬೆಲೆಯ 4 ಖೋಟಾ ನೋಟುಗಳು ಹಾಗೂ ರೂ 500 ಮುಖ ಬೆಲೆಯ 1 ಖೋಟಾ ನೋಟು ಸಿಕ್ಕಿದ್ದು, ಈ ನೋಟುಗಳನ್ನು ಯಾರೋ ಅಪರಿಚಿತರು ಬ್ಯಾಂಕಿನ ವ್ಯವಹಾರದ ಸಮಯದಲ್ಲಿ ಚಲಾವಣೆ ಮಾಡಿರುವುದಾಗಿದ್ದು, ಈ ಬಗ್ಗೆ ಶ್ರೀ ಎಂ. ಐತಾ, ಸೀನಿಯರ್ ಮ್ಯಾನೇಜರ್, ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್, ಬಲ್ಮಠ ರಸ್ತೆ, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು ರವರು ನೀಡಿದ ದೂರಿನಂತೆ ಉತ್ತರ ಠಾಣಾ ಅ.ಕ್ರ.202/2012 ಕಲಂ 489(ಎ)&(ಬಿ) ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Thursday, December 20, 2012

Daily crime Incidents for Dec 20, 2012


ಕಳವು ಪ್ರಕರಣ:

ಮಂಗಳೂರು ಪೂರ್ವ ಠಾಣೆ;

  • ದಿನಾಂಕ 18-12-2012 ರಂದು 20-30 ಗಂಟೆಯಿಂದ ದಿನಾಂಕ 19-12-2012 ರಂದು ಬೆಳಿಗ್ಗೆ 09-30 ಗಂಟೆಯ ಮದ್ಯೆ ಯಾರೋ ಕಳ್ಳರು ಪಿರ್ಯದಿದಾರರ ಬಾಬ್ತು ಮಂಗಳೂರು ನಗರದ ಬಿಕರ್ಣಕಟ್ಟೆಯಲ್ಲಿರುವ ಕಾಸ್ಮೊ ಪೊಲಿಟನ್ ಡೆಂಟಲ್ ಕ್ಲಿನಿಕ್ ಎಂಬ ಹೆಸರಿನ ಶಾಫ್ನ ಶಟರ್ ಬಾಗಿಲಿನ ಬೀಗ ತೆರೆದು ಒಳ ಪ್ರವೇಶಿಸಿ ಸಾಮ್ಸಂಗ್ ಕಂಪನಿಯ ಟಿವಿ-2, ತೊಸಿಬಾ ಕಂಪನಿಯ ಟಿವಿ-1, ಲ್ಯಾಪ್ಟಾಪ್-1, ರಿಮೋಟ್ ಸಹಿತ ಡಿವಿಡಿ ಪ್ಲೇಯರ್-1, ಆಪ್ಲಿಪೈಯರ್-1, ಡಿಜಿಜಟಲ್ ಕ್ಲಾಕ್-1, ಕ್ಲಾಕ್-1, ಡೆಕೊರೆಟಿವ್ ಲೈಟ್-2, ಚಾಚರ್್ ಲೈಟ್-2, ಟಾಟಾ ಸ್ಕೈ ರಿಮೋಟ್-1, ಪೇನ್ಗಳು-8, ನಗದು ಹಣ 8000/- ಹೀಗೆ ಒಟ್ಟು 167300/-ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಡಾ.ಮಂಜು ಗೋಪ ಕುಮಾರ್(39), ತಂದೆ: ಡಾ.ಗೋಪ ಕುಮಾರ್ ವಾಸ:ಎ-302, ಕಾಸಗ್ರಾಂಡ್ ಅಪಾಟರ್್ಮೆಂಟ್, ಅತ್ತಾವರ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಪ್ರಕರಣ 184/2012 ಕಲಂ: 454,457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Wednesday, December 19, 2012

Daily Crime Incidents for Dec 19, 2012


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;


  • ದಿನಾಂಕ 17-12-2012 ರಂದು ಸಮಯ ಸುಮಾರು ಸಂಜೆ 16-30 ಗಂಟೆಗೆ ಪಿರ್ಯಾದುದಾರರು ತನ್ನ ಪತ್ನಿ ಆಯಿಷಾ ಹಾಗೂ ಮಗುವಿನೊಂದಿಗೆ ರೈಲ್ವೇ ಸ್ಟೇಶನ್ ಬಳಿ ಇರುವ ನೂರ್ ಮಸೀದಿ ಸಮೀಪದ ಕೈರಾಳಿ ಹೋಟೆಲ್ ಎದುರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಿಲಾಗ್ರೀಸ್ ಕಡೆಯಿಂದ ಕಾರು ನಂಬ್ರ ಏಐ-14 ಉ 5594ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಪತ್ನಿ ಆಯಿಷಾರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಮತ್ತು ಕೈಗಳಿಗೆ ತರಚಿದ ಗಾಯವಾಗಿ ಇಂದಿರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಹಮ್ಮದ್ ಆಲಿ  (42 ವರ್ಷ) ತಂದೆ- ದಿ.ಮೊದಿನ್ ವಾಸ: ಕೋಳಿಕಾಡ್ ಹೌಸ್, ಪರ್ಪ ಪೋಸ್ಟ್, ಕಾಂಜ್ಞಗಾಡ್, ಕಾಸರಗೋಡು 184/2012 279 , 338 ಐ.ಪಿ.ಸಿ, ರಂತೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಹುಡುಗಿ ಕಾಣೆ:

ದಕ್ಷಿಣ ಠಾಣೆ 


  • ದಿನಾಂಕ  09-12-12 ರಂದು ಬೆ 10-30 ಗಂಟೆಗೆ ಫಿರ್ಯಾದಿದಾರರ ಮನೆಯಲ್ಲಿ ಕೆಲಸಕ್ಕಿದ ಶಿವಮೊಗ್ಗ ನಿವಾಸಿ ನೂರ್ಜಹಾನ್, ಪ್ರಾಯ ಸುಮಾರು 20 ವರ್ಷ ಇವರು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ವಾಪಸ್ಸು ಬಂದಿರುವುದಿಲ್ಲ. ಈ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಶ್ರೀಮತಿ ಆಯಿಷ (37), ಗಂಡ: ಅಶ್ರಫ್ ಎಸ್.ಬಿ, ವಾಸ:  ವೆಸ್ಟ್ ಗೇಟ್ ಪ್ರೈಡ್, ಭಾರತ್ ಪೆಟ್ರೋಲ್ ಪಂಪ್ ಎದುರುಗಡೆ, ಫಳ್ನೀರ್ ಮಂಗಳೂರು ನೀಡಿದ ದೂರಿನಂತೆ ದಕ್ಷಿಣ ಠಾಣೆಯ ಅಪರಾದ ಕ್ರಮಾಂಕ 221/12 ಕಲಂ ಹುಡುಗಿ ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉವರ್ಾ ಠಾಣೆ;


  • ದಿನಾಂಕ 17-12-2012 ರಂದು ಸಂಜೆ 7:00 ಗಂಟೆಗೆ ಪಿಯರ್ಾದಿದಾರರ ಮಗಳಾದ ಕುಮಾರಿ ಕೋಮಲ್ ಗಜಾಕೋಶ್(15) ಎಂಬವಳು ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು, ಶಾಲೆಯಲ್ಲಿ ಪ್ರೊಜೆಕ್ಟ್ ವಕರ್್ ಇದೆಯೆಂದು ಮನೆಯಿಂದ ಹೊರಗೆ ಹೋದವಳು ವಾಪಾಸು ಮನೆಗೆ ಬಾರದೇ ಇದ್ದು, ಈ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೃಷಿಕೇಶ ಎಂಬವನೊಂದಿಗೆ ಹೋಗಿರಬಹುದು ಎಂಬುದಾಗಿ ತಿಳಿಸಿದ್ದು, ಕಾಣೆಯಾದ ಕುಮಾರಿ ಕೋಮಲ್ನನ್ನು ಪತ್ತೆ ಮಾಡಬೇಕೆಂಬುದಾಗಿ ಶ್ರೀಮತಿ ಹರ್ಷ ಗಜಾಕೋಶ್, ಗಂಡ: ಶಶಿಧರ್ ಗಜಾಕೋಶ್, ವಾಸ: ಫ್ಲಾಟ್ ನಂಬ್ರ 205, ಬಿ-2, ಅಶೋಕ ಎಕ್ಸಲೆನ್ಸಿ, ಉವರ್ಾ ಮಾರಿಗುಡಿ ಬಳಿ, ಉವರ್ಾ, ಮಂಗಳೂರು ರವರು ನೀಡಿದ ದೂರಿನಂತ ಉವರ್ಾ ಠಾಣೆ ಅಪರಾದ ಕ್ರಮಾಂಕ  62/2012 ಕಲಂ ಹುಡುಗಿ ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮನುಷ್ಯ ಕಾಣೆ:

ಮಂಗಳೂರು ಪೂರ್ವ ಠಾಣೆ


  • ದಿನಾಂಕ: 15-12-2012 ಪಿರ್ಯಾದಿದಾರರ ತಂದೆ: ಬೇಬಿ ಪೂಜಾರಿ ಎಂಬವರು ಮಂಗಳೂರಿನ ಅಳಕೆ ಎಂಬಲ್ಲಿರುವ ಹೋಟೆಲ್ ಪ್ರಕಾಶ್ ಎಂಬಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ತನ್ನ ತಂಗಿಯಾದ ಸುಚಿತ್ರಾಳಿಗೆ ನಿಶ್ಚಿತಾರ್ಥವಿದ್ದು ಆ ಕಾರ್ಯಕ್ರಮಕ್ಕೆ ಬರಬೇಕಾದವರು ಬಾರದೇ  ಇದ್ದುದರಿಂದ ಪಿರ್ಯಾದಿದಾರ ತಂದೆಯವರು ಕೆಲಸ ಮಾಡುತ್ತಿರುವ ಹೋಟೆಲ್ ಪ್ರಕಾಶ್ ಎಂಬಲ್ಲಿಗೆ ಬಂದು ಅದರ ಮಾಲೀಕರಲ್ಲಿ ವಿಚಾರಿಸಿದಲ್ಲಿ ಕಾಣೆಯಾದ  ದಿನಾಂಕದಿಂದ ಹೋಟೆಲಿನಿಂದ  ಮನೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ ಹೋಟೆಲಿನಿಂದ ಹೋದವರು ಮನಗೆ ಬಾರದೇ ವಾಪಾಸ್ಸು ಹೋಟೆಲಿಗೆ ಹೋಗದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಶ್ರೀ.ಸಚಿನ್(20), ತಂದೆ:ಬೇಬಿ ಪೂಜಾರಿ, ವಾಸ:ಕಂರ್ಬಡ್ಕ ದಖರ್ಾಸು ಮನೆ, ಬಡಗ ಕಜೆಕಾರು ಗ್ರಾಮ, ಪಾಂಡವರ ಕಲ್ಲು, ಬಂಟ್ವಾಳ ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 182/2012 ಕಲಂ: ಮನುಷ್ಯ ಕಾಣೆ ಪ್ರಕರಣ  ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Tuesday, December 18, 2012

Daily Crime Incidents for Dec 18, 2012


ಅಸ್ವಾಭಾವಿಕ ಮರಣ ಪ್ರಕರಣ

ಬಜಪೆ ಠಾಣೆ :

  • ದಿನಾಂಕ 17/12/2012 ರಂದು ಬೆಳಿಗ್ಗೆ ಸುಮಾರು 09.00 ಗಂಟೆಗೆ ಪಿಯರ್ಾದಿದಾರರು ಮಂಗಳೂರು ತಾಲೂಕು ಮುಳೂರು ಗ್ರಾಮದ ದೋಣಿಂಜೆ ನದಿ ತೀರದಲ್ಲಿ ಮರುಳು ತುಂಬಿಸುವ ಕೆಲಸಗಾರರೊಂದಿಗೆ ಬಂದು ನೋಡಿದಾಗ ಸುಮಾರು 30 ವರ್ಷದ ಒಂದು ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಈತನ 2 ದಿನಗಳ ಹಿಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೃತ ಶರೀರವು ನದಿ ನೀರಿನಲ್ಲಿ ಕವುಚಿ ತೇಲಾಡುತ್ತಿರುವುದು ಎಂಬುದಾಗಿ ಶ್ರೀ ರೋಹಿತಾಕ್ಷ ಶೆಟ್ಟಿ, @ ಅಣ್ಣು,  ವಾಸ: ಮರಂಕರಿಯ ಮನೆ, ಗುರುಪುರ ಅಂಚೆ, ಮುಳೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅಪರಾಧ ಕ್ರಮಾಂಕ 51/2012 ಕಲಂ 174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ದಕ್ಷಿಣ ಠಾಣೆ :

  • ದಿನಾಂಕ 16-12-2012 ರಂದು ಶ್ರೀ ಮಂಜುನಾಥ ಮೂಕಿ ಪಿ.ಸಿ 1019, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ರವರು ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಯ ಹೊರಠಾಣೆಯಲ್ಲಿ  ಕರ್ತವ್ಯದಲ್ಲಿರುವಾಗ,  ಸಮಯ ಸುಮಾರು 17-30 ಗಂಟೆಗೆ ನಗರ ನಿಯಂತ್ರಣ ಕೊಠಡಿಯಿಂದ, ಮಂಗಳೂರು ರೈಲ್ವೇ ನಿಲ್ದಾಣದ ಬಳಿ ಒರ್ವ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರು ಸದ್ರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸುಮಾರು 55 ವರ್ಷ ಪ್ರಾಯ ಒಬ್ಬ ಅಪರಿಚಿತ ಗಂಡಸು ಮಲಗಿದಲ್ಲಿಯೇ ಮೃತಪಟ್ಟಿದ್ದು, ಈತನು ಬಿಕ್ಷುಕನಂತೆ ಕಂಡು ಬರುತ್ತಿದ್ದು, ಈತನು ಯಾವುದೋ ಖಾಯಿಲೆಯಿಂದ ಅಥವಾ ಸ್ವಾಭಾವಿಕವಾಗಿ ಮೃತಪಟ್ಟಿರಬಹುದಾಗಿದ್ದು, ಎಂಬುದಾಗಿ ಶ್ರೀ ಮಂಜುನಾಥ ಮೂಕಿ ಪಿ.ಸಿ 1019, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 91/2012 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಉಳ್ಳಾಲ ಠಾಣೆ :


  • ದಿನಾಂಕ 13.12.2012 ರಂದು ಆನಂದ ಶೆಟ್ಟಿ (56) ತಂದೆ- ವಾಮಯ್ಯ ಶೆಟ್ಟಿ, ವಾಸ- ಪಡ್ಯಾರ ಗುತ್ತಿನ ಮನೆ, ಆಂಬ್ಲಮೊಗ್ರು ಗ್ರಾಮ, ರವರು ಬೆಳಿಗ್ಗೆ ಮನೆಯಿಂದ ಹೊರಟು ತೊಕ್ಕೊಟ್ಟುಚೆಂಬುಗುಡ್ಡೆಗೆ ಬಂದಿದ್ದು ಚೆಂಬುಗುಡ್ಡೆಯಲ್ಲಿ ಬಸ್ಸಿನಿಂದ ಇಳಿದು ರಸ್ತೆಯ ಬಲ ಬದಿಯಲ್ಲಿ ತೊಕ್ಕೊಟ್ಟು ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆನಂದ ಶೆಟ್ಟಿ ಯವರ ಹಿಂದಿನಿಂದ ಝೆನ್ ಕಾರೊಂದನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಗೆ ಒಮ್ಮೆಲೇ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯ ಬಲ ಕೈಗೆ ಗುದ್ದಿದ ನೋವಾಗಿದ್ದು ಪಿರ್ಯಾದಿಯು ಆ ಕೂಡಲೇ ಸ್ಮ್ರತಿ ತಪ್ಪಿ ಬಿದಿದ್ದವರನ್ನು ಅಲ್ಲಿ ಸೇರಿದ್ದ ಯಾರೋ ಒಬ್ಬರು ಸಹರಾ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಪಿರ್ಯಾದಿಗೆ ಡಿಕ್ಕಿ ಹೊಡೆದ ಕಾರು ನಂಬ್ರ ಕೆಎ19 ಎಂಬಿ 0951 ಅಂತ ತಿಳಿದಿದ್ದು ಚಾಲಕನ ಹೆಸರು ನವೀನ್ ಎಂಬುದಾಗಿದ್ದು ಚಾಲಕ ಪಿರ್ಯಾದಿಯ ಚಿಕಿತ್ಸೆಯ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು ನಂತರ ಕಾರು ಚಾಲಕನು ಚಿಕಿತ್ಸೆಯ ವೆಚ್ಚ ಹೆಚ್ಚಾಗಿರುವುದರಿಂದ  ಭರಿಸಲಾಗದೇ ಈ ಬಗ್ಗೆ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆನಂದ ಶೆಟ್ಟಿ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅಪರಾಧ ಕ್ರಮಾಂಕ 329/2012 279, 338 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸಂಚಾರ ಪೂರ್ವ ಠಾಣೆ :


  • ದಿನಾಂಕ 16-12-2012 ರಂದು ಸಮಯ ಸಂಜೆ ಸುಮಾರು 06.00 ಗಂಟೆಗೆ ಕಾರು ನಂಬ್ರ ಕೆಎ 19 ಎಂಬಿ 3784ನ್ನು ಅದರ ಚಾಲಕರು ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಶಕ್ತಿನಗರ ಕ್ರಾಸ್ ಬಳಿಯ ಇಂಚರ ಬಾರ್ & ರೆಸ್ಟೊರೆಂಟ್ ಎದುರು ತಲುಪುವಾಗ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಶ್ರೀಮತಿ ನಾಗಿಣಿ ಎಂಬವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಶ್ರೀಮತಿ ನಾಗಿಣಿ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತ ಗಾಯ ಉಂಟಾದವರನ್ನು ಪಿರ್ಯಾದುದಾರರು ಅಲ್ಲೆ ಸೇರಿದ ಜನರ ಸಹಾಯದಿಂದ ಉಪಚರಿಸಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ವೆಂಕಪ್ಪ ಮೂಲ್ಯ  (45 ವರ್ಷ) ತಂದೆ- ಕಿಟ್ಟು ಮೂಲ್ಯ, ವಾಸ:ಎದುರು ಪದವು ವಾಮಾಂಜೂರು. ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅಪರಾಧ ಕ್ರಮಾಂಕ 183/2012 279 , 337 ಐ.ಪಿ.ಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಇತರೆ ಪ್ರಕರಣ

ಮುಲ್ಕಿ ಠಾಣೆ : 

  • ದಿನಾಂಕ 17.12.2012 ರಂದು ರಾತ್ರಿ 00.45 ಗಂಟೆಗೆ  ಯಾರೋ ದುಷ್ಕಮರ್ಿಗಳು ಮಂಗಳೂರು ತಾಲೂಕು ಕಾನರ್ಾಡು ಗ್ರಾಮದ  ಕಾನರ್ಾಡು ಎಂಬಲ್ಲಿರುವ  ಮಸ್ಜಿದ್ ನೂರ್ ಮಸೀದಿಗೆ  ಕಲ್ಲು ತೂರಾಟ ಮಾಡಿ ಮಸೀದಿಯ ಕಿಟಕಿ ಗಾಜುಗಳನ್ನು ಪುಡಿಗೈದು ಹಾನಿಪಡಿಸಿ ಕೋಮು ಪ್ರಚೋದನಾ ಕೃತ್ತಯ ಎಸಗಿರುತ್ತಾರೆ ಎಂಬುದಾಗಿ ಇಕ್ಬಾಲ್ ಅಹ್ಮದ್ ಮೂಲ್ಕಿ  ಪ್ರಾಯ:39 ವರ್ಷ ತಂದೆ:ಹಾಜಿ ಅಹ್ಮದ್ ಇಬ್ರಾಹಿಂ ವಾಸ:ನಿಶಿಬಾಣ್  ಜ್ಯೂನಿಯರ್ ಕಾಲೇಜ್ ಹತ್ತಿರ, ಕಾನರ್ಾಡು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ  ಅಪರಾಧ ಕ್ರಮಾಂಕ 158/2012 ಕಲಂ:427 ,153(ಎ),427,2(ಎ) ಕೆ.ಪಿ.ಡಿ.ಎಲ್.ಪಿ ಆಠ್ಟಿ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, December 17, 2012

Daily Crime Incidents for Dec 17, 2012


ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಉತ್ತರಠಾಣೆ;

  • ದಿನಾಂಕ 15-12-2012 ರಂದು ಕೇಂದ್ರ ಮಾರುಕಟ್ಟೆಗೆ ಸಂಜೆ ಸುಮಾರು 5:00 ಗಂಟೆಗೆ ಬೀಬಿ ಅಲಾಬಿ ರಸ್ರೆಯಲ್ಲಿ ಹೋಗುತ್ತಿರುವಾಗ ಬೀಬಿ ಅಲಾಬಿ ರಸ್ತೆಯಲ್ಲಿ ಸಿಪಿಸಿ ಕಂಪೌಂಡು ಬಳಿ ಇರುವ ಹಿತೇಂದ್ರ ರವರಿಗೆ ಸಂಬಂಧಿಸಿದ ಕಟ್ಟಡದ ಜಗುಲಿಯಲ್ಲಿ ಒಬ್ಬ ವ್ಯಕ್ತಿಯು ಮಲಗಿದ್ದನ್ನು ಕಂಡಿದ್ದು, ಆತನು ಮೃತ ಪಟ್ಟಂತೆ ಕಂಡುಬಂದುದರಿಂದ ಪೊಲೀಸರಿಗೆ ಫೋನ್ ಮುಖಾಂತರ ತಿಳಿಸಿ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮೃತಪಟ್ಟಿರುವುದು ಕಂಡುಬಂದಿದ್ದು, ನಂತರ ಖಾಸಗಿ ಅಂಬುಲೆನ್ಸನ್ನು ಸ್ಥಳಕ್ಕೆ ತರಿಸಿ ಶವಾಗಾರದಲ್ಲಿ ಇರಿಸಲಾಗಿದೆ. ಸದ್ರಿ ಅಪರಿಚಿತ ಗಂಡಸಿನ ದೇಹವನ್ನು ಪರಿಶೀಲಿಸಲಾಗಿ ಅಂದಾಜು ಸುಮಾರು 45 ರಿಂದ 50 ವರ್ಷ ಪ್ರಾಯದವನಾಗಿದ್ದು, ಸುಮಾರು 5' 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಬಲಕೈಯಲ್ಲಿ ಶಿಲುಬೆ ಗುರುತು ಇರುತ್ತದೆ. ಗಿಡ್ಡ ಕಪ್ಪು ಬಿಳಿ ತಲೆಕೂದಲು ಹೊಂದಿದ್ದು,. ಮೃತನು ಸಪೂರ ಶರೀರ ಹೊಂದಿದ್ದು, ಸದ್ರಿ ಅಪರಿಚಿತ ಗಂಡಸು ಬಿಳಿ ಬಣ್ಣದ ಒಳಚಡ್ಡಿ, ಬಿಳಿ ಗೆರೆ ಚೌಕುಳಿ ಅಂಗಿ ಧರಿಸಿರುತ್ತಾನೆ. ಕಾಲಿನಲ್ಲಿ ಹುಣ್ಣು ಇರುತ್ತದೆ. ಎಂಬುದಾಗಿ ಅಬ್ದುಲ್ಲಾ ತಂದೆ: ಖಾಸೀಂ ವಾಸ : ಮಾಕರ್ೆಟ್ ರೋಡ್, ಬಂದರು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 33/2012, ಕಲಂ 174 ಸಿಆರ್ ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆೆ ಕೈಗೊಳ್ಳಲಾಗಿದೆ.

Sunday, December 16, 2012

Daily Crime Incidents for Dec 16, 2012


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ:

  • ದಿನಾಂಕ 15-12-2012 ರಂದು ಸಮಯ ಬೆಳಿಗ್ಗೆ ಸುಮಾರು 09.30 ಗಂಟೆಗೆ ಪಿರ್ಯಾದುದಾರರಾದ ಸ್ಟೀವನ್ ವಿಲ್ಸನ್ ಗೋವಿಯಸ್  (22 ವರ್ಷ) ತಂದೆ- ಪೆಟ್ರಿಕ್ ಗೋವಿಯಸ್, ಸ್ಟೀವ್ ರೋಸ್, ಬೊಂದೇಲ್ ಚಚರ್್ ಹಿಂದುಗಡೆ, ಪಚ್ಚನಾಡಿ ಗ್ರಾಮ. ಮಂಗಳೂರು ರವರು ಮೊ,ಸೈಕಲ್ ನಂಬ್ರ ಏಂ-19-ಙ-9383 ರಲ್ಲಿ ತನ್ನ ತಾಯಿ ಶ್ರೀಮತಿ ತೆರೇಸಾ ಗೋವಿಯಸ್ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಲ್ಮಠ ಕಡೆಯಿಂದ ಬೆಂದೂರ್ವೆಲ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಂಗಳೂರು ನಸರ್ಿಂಗ್ ಹೊಂ ಗೇಟಿನ ಬಳಿ  ತಲುಪುವಾಗ ವಾಸ್ಲೇನ್ ಕಡೆಯಿಂದ ನ್ಯಾನೊ ಕಾರು ನಂಬ್ರ ಏಐ-05-ಂಃ-7515 ನ್ನು ಅದರ ಚಾಲಕರು ಮುಖ್ಯ ರಸ್ತೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ವಿಭಾಜಕ ತೆರವು ಇರುವ ಸ್ಥಳದಲ್ಲಿ ಒಮ್ಮೆಲೆ ಬಲಕ್ಕೆ ತಿರುಗಿಸಿ ಬೆಂದೂರ್ವೆಲ್ ಕಡೆಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರ ಮೊ,ಸೈಕಲ್ಗೆ ಕಾರು ಡಿಕ್ಕಿಯಾಗಿ ಪಿರ್ಯಾದುದಾರರು ಮತ್ತು ಶ್ರೀಮತಿ ತೆರೇಸಾ ಗೋವಿಯಸ್ರವರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಶ್ರೀಮತಿ ತೆರೇಸಾ ಗೋವಿಯಸ್ರವರ ಕಾಲಿಗೆ ಗುದ್ದಿದ ಗಾಯ ಉಂಟಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ  ಸ್ಟೀವನ್ ವಿಲ್ಸನ್ ಗೋವಿಯಸ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಯಲ್ಲಿ ಅಪರಾಧ ಕ್ರಮಾಂಕ:182/2012 279 , 337 ಐ.ಪಿ.ಸಿ, ಯಂತೆ ಪ್ರಕರಣ ದಾಖಲಾಗಿರುತ್ತದೆ.



ಜೀವ ಬೆದರಿಕೆ ಪ್ರಕರಣ

ಉಳ್ಳಾಲ ಠಾಣೆ :

  • ದಿನಾಂಕ. 01-12-2012 ರಂದು ಮದ್ಯಾಹ್ನ ಸುಮಾರು 2-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ತೊಕ್ಕೊಟು ಎಂಬಲ್ಲಿ ಫಿರ್ಯಾದಿದಾರರಾದ ವಿನಯ ಕುಮಾರ್ ವಾಸ: ಮುನ್ನೂರು ಗ್ರಾಮ ಕುತ್ತಾರ್ ಪದವು ಅಂಚೆ ಮಂಗಳೂರು ತಾಲೂಕು ಇವರು ತರಕಾರಿ ಇತ್ಯಾದಿ ಕೊಂಡು ಹೋಗಲು ಬಂದಿದ್ದಾಗ ಆರೋಪಿ ಉದಯ ಗೌಡ (35) ವಾಸ: ಕಾಯರ್ತಡ್ಕ ಅಂಚೆ, ಕಳಿಂಜೆ ಗ್ರಾಮ, ಬೆಳ್ತಂಗಡಿ ತಾಲೂಕು ಫಿರ್ಯಾದಿದಾರರನ್ನು ಸಂಧಿಸಿ ಫಿರ್ಯಾದಿದಾರರ ಲಗ್ನದ ವಿಚಾರದಲ್ಲಿ ಮುಖಾಮುಖಿಯಾಗಿ ಮಾತಿಗೆ ಮಾತು ಬೆಳೆದು ಅವಾಚ್ಯಶಬ್ದಗಳಿಂದ ಫಿರ್ಯಾದಿದಾರರಿಗೆ ಬೈದು ಅವರನ್ನು ಉದ್ದೇಶಿಸಿ ನೀನು ನಮ್ಮ ಊರಿಗೆ ಬಂದರೆ ನಿನ್ನ ಕೈಕಾಲು ಮುರಿಯುವುದಲ್ಲದೆ ನಿನ್ನನ್ನು ಕೊಂದು ಎಡ್ರೆಸ್ ಇಲ್ಲದಂತೆ ಮಾಡುವುದಲ್ಲದೆ ನಿನ್ನ ಮನೆಯವರನ್ನು ಸಹ ವಿಚಾರಿಸಿಕೊಳ್ಳುವುದಾಗಿ ಫಿರ್ಯಾದಿದಾರರಿಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರಾದ ವಿನಯ ಕುಮಾರ್ ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 328/2012 ಕಲಂ 504,506 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.





Saturday, December 15, 2012

Daily Crime Incidents for December 15, 2012


ಅಪಘಾತ ಪ್ರಕರಣ

ಉಳ್ಳಾಲ ಠಾಣೆ ;


  • ದಿನಾಂಕ 14.12.2012 ರಂದು ಪಿರ್ಯಾದಿದಾರರಾದ ರಾಜೇಶ್ ಕೆ (25) ತಂದೆ: ಶೀನ ಮೂಲ್ಯ, ಕನಂದಕಟ್ಟೆ ಮನೆ, ಪಾವೋರು ಅಂಚೆ, ಮಂಜೇಶ್ವರರವರು  ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 19 ಇಸಿ 7172ನೇಯದರಲ್ಲಿ ಸಹಸವಾರನನ್ನಾಗಿ ಕಿಶೋರ್ ಎಂಬವರನ್ನು ಕುಳ್ಳಿರಿಸಿಕೊಂಡು ಕುಂಪಲ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ಬಳಿ ತಲುಪಿದಾಗ ತೊಕ್ಕೊಟ್ಟು ಕಡೆಯಿಂದ ಟೆಂಪೋ ನಂಬ್ರ ಕೆಎ 13 6407ನೇಯದನ್ನು ಅದರ ಚಾಲಕ  ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಉಳ್ಳಾಲದ ಕಡೆ ತಿರುಗಿಸಿ ನನ್ನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಮತ್ತು ಸಹಸವಾರ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿ ಮತ್ತು ಸಹ ಸವಾರನಿಗೆ ರಕ್ತ ಗಾಯವಾಗಿರುವುದು ಎಂಬುದಾಗಿ ರಾಜೇಶ್ ಕೆ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣಾ ಅ.ಕ್ರ. 327/2012. ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ ;


  • ದಿನಾಂಕ 07-12-2012 ರಂದು ಸಮಯ ಸುಮಾರು 12.15 ಗಂಟೆಗೆ ಲಾರಿ ನಂಬ್ರ ಏಂ-19 ಆ-2867 ನ್ನು ಅದರ ಚಾಲಕರು ಬಿಜೈ ನ್ಯೂ ರೋಡ್ನ ಎಮ್ಸಿಎಫ್ ಕಾಲೋನಿ ಬಳಿ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿದ್ದ ಮೆಸ್ಕಾಂನ ವಿದ್ಯುತ್ ಕಂಬಕ್ಕೆ ಡಿಕ್ಕಿಯುಂಟು ಮಾಡಿ ಜಖಂಗೊಳಿಸಿರುವುದಾಗಿದೆ ಎಂಬುದಾಗಿ ಕೆ. ಶಶಿಂದ್ರ  (58 ವರ್ಷ) ತಂದೆ-ಕೆ. ಲಕ್ಷ್ಮಣ. ಮೆಸ್ಕಾಮ್ , ಎಸ್- 4, ಬಿಜೈ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣಾ ಅ.ಕ್ರ. 181/2012 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Friday, December 14, 2012

Bejai Raj Murder Case: Four Arrested

 

¢£ÁAPÀ: 01-12-2012 gÀAzÀÄ gÁwæ 10-00 UÀAmÉ ¸ÀĪÀiÁjUÉ ªÀÄAUÀ¼ÀÆgÀÄ £ÀUÀgÀzÀ ¥sÀ½ßÃgï gÀ¸ÉÛAiÀÄ AiÀÄĤn D¸ÀàvÉæ JzÀÄj£À ªÉ¸ïÖUÉÃmï l«Äð£À¸ï JA§ PÀlÖqÀzÀ £É®ªÀĺÀrAiÀÄ°è PÁ¬Ä£ï¥sÉÆãï£À°è ªÀiÁvÀ£ÁqÀÄwÛzÀÝ gËr ©eÉÊ gÁeÁ @ ±ÉʯÉñïgÁeï @ ±ÉʯÉñïPÀĪÀiÁgï JA¨ÁvÀ£À£ÀÄß vÀ®ªÁj¤AzÀ PÀrzÀÄ PÉÆ¯É £ÀqɹzÀ DgÉÆæUÀ¼À ¥ÉÊQ £Á®ÄÌ ªÀÄA¢AiÀÄ£ÀÄß zÀ¸ÀÛVj ªÀiÁqÀĪÀ°è PÀ¢æ ¥ÉưøÀgÀÄ AiÀıÀ¹éAiÀiÁVgÀÄvÁÛgÉ.

 

     

¢£ÁAPÀ: 13-12-2012 gÀAzÀÄ ªÀÄzÁåºÀß ©eÉÊ gÁeÁ£À PÉÆ¯É ¥ÀæPÀgÀtzÀ°è ¨sÁVAiÀiÁzÀ 4 ªÀÄA¢ DgÉÆæUÀ¼À£ÀÄß ªÀÄAUÀ¼ÀÆgÀÄ £ÀUÀgÀzÀ PÉJ¸ïDgïn¹ §¸ï¸ÁÖAqï §½¬ÄAzÀ ªÀ±ÀPÉÌ vÉUÉzÀÄPÉÆAqÀÄ ¥ÀæPÀgÀtªÀ£ÀÄß ¨sÉâ¸À¯ÁVzÉ.  zÀ¸ÀÛVj ªÀiÁrzÀ DgÉÆæUÀ¼À «ªÀgÀ F PɼÀV£ÀAwzÉ.

 

1.    C«£Á±ï @ C«, ¥ÁæAiÀÄ(22), vÀAzÉ: ªÀiÁgÀÄw, ªÁ¸À: "PÉ.¦ ZÀAzÀÄPÀÄnÖ", GgÀÄAqÁrUÀÄqÉØ zsÀ£Àĵï UËæAqï §½, ¥ÀAfªÉÆUÀgÀÄ CAZÉ, PÁªÀÇgÀÄ, ªÀÄAUÀ¼ÀÆgÀÄ.

 

2.   eÉʸÀ£ï r ¸ÉÆÃeÁ, ¥ÁæAiÀÄ(22), vÀAzÉ: eÁ£ï r ¸ÉÆÃeÁ, ªÁ¸À: eÉ»¯ï PÀA¥ËAqï, PÁªÀÇgÀÄ ¸ÀgÀPÁj ±Á¯É gÀ¸ÉÛ, «zÁå£ÀUÀgÀ, ¥ÀAfªÉÆUÀgÀÄ CAZÉ, PÀƼÀÆgÀÄ, ªÀÄAUÀ¼ÀÆgÀÄ.

 

3.   ¢ÃQëvï AiÀÄÄ zÉêÁrUÀ, ¥ÁæAiÀÄ(23), vÀAzÉ: ªÁ¸ÀÄzÉêÀ zÉêÁrUÀ, ªÁ¸À: " ªÀ¸ÀÄAzÀgÁ ", Pɦn »A¨sÁUÀ, GzÀAiÀÄ£ÀUÀgÀ 1 £Éà PÁæ¸ï, AiÉÄAiÀiÁår CAZÉ, ªÀÄAUÀ¼ÀÆgÀÄ.

 

4.   ¤vÉñï PÀĪÀiÁgï @ ªÀiÁzÀ @ ®Æ¸ï ªÀiÁzÀ, ¥ÁæAiÀÄ(22), vÀAzÉ: ¢: ¥ÀgÀªÉÄñÀégÀ, ªÁ¸À: ªÁPÀªÀÄä PÀA¥ËAqï, £ÁUÀ§æºÀä ZÁªÀr §½, PÉÆÃrPÀ¯ï, ªÀÄAUÀ¼ÀÆgÀÄ.

 

DgÉÆæUÀ¼À£ÀÄß PÉÆ¯É ¥ÀæPÀgÀtPÉÌ ¸ÀA§AzsÀ¥ÀlÖAvÉ PÀÆ®APÀıÀªÁV «ZÁgÀuÉ £Àqɹ ©eÉÊ gÁeÁ£À PÉƯÉUÉ ¸ÉÌZï gÀƦ¹zÀ PÉÆmÁÖgÀ C§âPÀÌ £ÀUÀgÀ §½¬ÄgÀĪÀ SÁ° eÁUÀzÀ §UÉÎ ªÀiÁ»w PÀ¯É ºÁQzÀÄÝ,  ºÁUÀÆ ©eÉÊ gÁeÁ£À ZÀ®£ÀªÀ®£ÀzÀ §UÉÎ ¤UÁ¬ÄqÀ®Ä G¥ÀAiÉÆÃV¹zÀ PÉJ-19-Er- 5465 MAzÀÄ AiÀĪÀĺÁ ¨ÉÊPï J¸ïJ¸ï 125 ¨ÉÊPï, PÉJ-19-E©-3745 »ÃgÉÆà ºÉÆAqÁ ¥ÉèÃgÀhÄgï ¸ÀÆÌlgï, MAzÀÄ vÀ®ªÁgÀÄ, 9 ªÉƨÉÊ¯ï ¥sÉÆãïUÀ¼ÀÄ, gÀÆ 900/- £ÀUÀzÀÄ £ÀÄß ¸Áé¢üãÀ¥Àr¹PÉƼÀî¯ÁVzÉ.

 

F ¥ÀæPÀgÀtzÀ°è E£ÀÄß ºÉaÑ£À DgÉÆæUÀ¼ÀÄ ¨sÁVAiÀiÁVzÀÄÝ, vÀ¯ÉªÀÄgɹPÉÆArgÀĪÀ DgÉÆæUÀ¼À §UÉÎ ªÀiÁ»w ¸ÀAUÀ滸À¯ÁVzÀÄÝ, ²ÃWÀæªÉà §A¢ü¸À¯ÁUÀĪÀÅzÀÄ.

Daily Crime Incidents for December 14, 2012


ವಾಹನ ಕಳವು ಪ್ರಕರಣ :

ಪಣಂಬೂರು ಠಾಣೆ ;

  • ಪಿರ್ಯಾದಿದಾರರು ಅವರ ಮಾಲಕತ್ವದ  ಕೆಎ-03/ಬಿ-9481ನೇ ಟಾಟಾ ಸುಮೋ ವಾಹನವನ್ನು ರಿಪೇರಿ ಬಗ್ಗೆ ಸುಮಾರು 3 ತಿಂಗಳ ಹಿಂದೆ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ಬಳಿ ಇರುವ ಸಂಶು ಎಂಬವರ ಗ್ಯಾರೇಜಿನಲ್ಲಿ ಇರಿಸಿದ್ದು, ದಿನಂಪ್ರತಿ ಗ್ಯಾರೇಜಿಗೆ ಹೋಗಿ ವಾಹನವನ್ನು ನೋಡಿ ಬರುತ್ತಿದ್ದು ದಿನಾಂಕ 30-11-2012ರಂದು ಬೆಳಿಗ್ಗೆ ನೋಡಿ ಬಂದಿದ್ದು ದಿನಾಂಕ 01-12-2012ರಂದು ಬೆಳಿಗ್ಗೆ ಹೋಗಿ ನೋಡಲಾಗಿ ವಾಹನವು ಇಲ್ಲದೇ ಇದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಸದ್ರಿ ವಾಹನವನ್ನು ಯಾರೋ ಕಳ್ಳರು ದಿನಾಂಕ 30-11-2012ರ ರಾತ್ರಿ ಸಮಯ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸುಮೋ ವಾಹನದ ಮೊತ್ತ 2 ಲಕ್ಷ ರೂಪಾಯಿ ಆಗಬಹುದು ಎಂಬುದಾಗಿ ರಜಾಕ್ ಪ್ರಾಯ 35 ವರ್ಷ ತಂದೆ: ದಿ: ಮೂಸಬ್ಬ ವಾಸ: ಕಿಲರಿಯಾ ಮಸೀದಿಯ ಹತ್ತಿರ ತಣ್ಣೀರುಬಾವಿ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣಾ ಅ.ಕ್ರ ಃ 218/12 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಜುಗಾರಿ ಆಡುತ್ತಿದ್ದವರ ಬಂಧನ :

ಕಾವೂರು ಠಾಣೆ ;

  •  ದಿನಾಂಕ: 12-12-2012 ರಂದು ರಾತ್ರಿ ಮಂಗಳೂರು ತಾಲೂಕು ಮರಕಡ ಗ್ರಾಮದ ಮರಕಡ ಗುಡ್ಡೆ ಎಂಬಲ್ಲಿ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಪಿಎಸ್ಐ ಉಮೇಶ್ ಕುಮಾರ್ ಎಂ.ಎನ್. ಆದ ನಾನು ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಸದ್ರಿ ಸ್ಥಳಕ್ಕೆ ತೆರಳಿ ರಾತ್ರಿ 22-00 ಗಂಟೆಗೆ ಧಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಆರೋಪಿಗಳಾದ ಯೋಗೀಶ, ಚರಣ್ ಮತ್ತು ಹೇಮಚಂದ್ರ ಎಂಬವರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿದ್ದ ಒಟ್ಟು ರೂಪಾಯಿ 1715/-,  ಇಸ್ಪೀಟ್, ಕ್ಲೆವರ್, ಡೈಮಂಡ್ ಆಟೀನ್ ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು, ನೋಕಿಯಾ ಕಂಪೆನಿಯ ಕಪ್ಪುಬಣ್ಣದ ಮೂರು ಮೊಬೈಲ್ ಫೋನ್ಗಳನ್ನು, ಪ್ಲಾಸ್ಟಿಕ್, ಅರ್ಧ ಉರಿದ ಮೇಣದ ಬತ್ತಿಗಳನ್ನು ಮುಂದಿನ ಕ್ರಮದ ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿರುವುದಾಗಿದೆ, ಆರೋಪಿಗಳ ಪೈಕಿ  2-3 ಮಂದಿ ಓಡಿ ತಪ್ಪಿಸಿಕೊಂಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾವೂರು ಪೊಲೀಸು ಠಾಣಾ ಅ.ಕ್ರ. 187/2012 ಕಲಂ: 87 ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ :

ಬಜಪೆ ಠಾಣೆ ;

  • ದಿನಾಂಕ: 12/12/2012 ರಂದು 15-00 ಗಂಟೆ ಸಮಯಕ್ಕೆ,ಪಿರ್ಯಾದಿದಾರರು ತನ್ನ ಪರಿಚಯದ ರಮೇಶ್ ಎಂಬವರ ಆಟೋ ರಿಕ್ಷಾ ನಂಬ್ರ: ಕೆಎ 19 ಸಿ 3771 ನೇದರಲ್ಲಿ ಗುರುಪುರಕ್ಕೆ ಹೋಗುವರೇ ತನ್ನ ಸ್ನೇಹಿತರಾದ ಯೋಗೀಶ್ ಮತ್ತು ಆನಂದ ಎಂಬವರೊಂದಿಗೆ ಪ್ರಯಾಣಿಸುತ್ತಾ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಅಣೆಬಳಿ ತಲುಪುವಾಗ ಸದ್ರಿ ರಿಕ್ಷಾ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಮಗುಚಿ ಬಿದ್ದು, ಪ್ರಯಾಣಿಕರಾದ ಯೋಗೀಶ್ ಮತ್ತು ಆನಂದ ಎಂಬವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ ಎಂಬುದಾಗಿ ಪುಷ್ಪರಾಜ್ 23 ವರ್ಷ, ತಂದೆ: ಕೃಷ್ಣ ಜೋಗಿ, ಮಳಲಿ ಮಟ್ಟಿ, ಬಡಗ ಉಳಿಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 246/2012, ಕಲಂ: 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Thursday, December 13, 2012

Daily Crime Incidents for December 13, 2012


ಅಪಘಾತ ಪ್ರಕರಣ;

ಕಾವೂರು ಠಾಣೆ; 

  1. ದಿನಾಂಕ 12-12-2012 ರಂದು ಪಿರ್ಯಾದಿದಾರರಾರು ತನ್ನ ಮನೆಯಿಂದ ಎ.ಜೆ.ಆಸ್ಪತ್ರೆಯ ಕಡೆ ತನ್ನ ಬಾಬ್ತು ಕಾರು ನಂಬ್ರ. ಕೆಎ-19-ಎಂ.ಬಿ-3125ನೇದರಲ್ಲಿ ಹೋಗುತ್ತಿದ್ದು, ಕೊಟ್ಟಾರ ಚೌಕಿಯ ಕನರ್ಾಟಕ ಏಜೆನ್ಸಿಯ ಎದುರು, ಎನ್.ಹೆಚ್. 66 ರಲ್ಲಿ ಸಂಜೆ 4-15 ಗಂಟೆಗೆ ತಲುಪಿದಾಗ ಫಿರ್ಯಾಧುದಾರರ ಕಾರಿನ ಹಿಂದುಗಡೆಯಿಂದ ಕೆಎ-12-8593ನೇ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಕಾರನ್ನು ಜಖಂಗೊಳಿಸಿ ನಿಲ್ಲಿಸದೆ ಪರಾರಿಯಾಗಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ  ಡಾ. ಪ್ರದೀಪ್ ಗಾಣಿಗ (38) ತಂದೆ: ಸುಬ್ಬಣ್ಣ ಗಾಣಿಗ, ವಾಸ: ಶ್ರೀ ಅಯ್ಯಪ್ಪ ಗುಡಿಯ ಬಳಿ, ಮಾಲೆಮಾರ್ ದೇರೆಬೈಲ್,  ಮಂಗಳೂರುರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಪ್ರಕರಣ 186/2012 ಕಲಂ: 279 ಐಪಿಸಿ & 134 (ಎ) (ಬಿ) ಐ.ಎಂ.ವಿ. ಆಕ್ಟ್ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ;


  • ದಿನಾಂಕ 05-12-2012 ರಂದು ಸಮಯ ಮದ್ಯಾನ್ಹ ಸುಮಾರು 13.00 ಗಂಟೆಗೆ ಪಿರ್ಯಾದುದಾರರು ಮೊ,ಸೈಕಲ್ ನಂಬ್ರ ಏಂ-19-ಕ-6418 ನ್ನು ಬಿಜೈ ಜಂಕ್ಷನ್ ಕಡೆಯಿಂದ ಕೆಎಸ್ಆರ್ಟಿಸಿ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಎಸ್ಎಸ್ಬಿ ಕ್ರಾಸ್ ಬಳಿ  ತಲುಪುವಾಗ ಕೆಎಸ್ಆರ್ಟಿಸಿ ಜಂಕ್ಷನ್ ಕಡೆಯಿಂದ ತತ್ಕಾಲಿಕ ನೊಂದಣಿ ಸಂಖ್ಯೆಯ ಹೊಸ ಕಾರು ಏಂ-19 ಓಖಿ/ಖಿಅಖ/15081/12-13 ನ್ನು ಅದರ ಚಾಲಕರು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ವಿಭಾಜಕ ತೆರವು ಇರುವ ಸ್ಥಳದಲ್ಲಿ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಪಿಂಟೊ ಬೇಕರಿ ಕಡೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮೊ,ಸೈಕಲ್ಗೆ ಕಾರು ಡಿಕ್ಕಿಯಾಗಿ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಸಾಮಾನ್ಯ ಸ್ವರೂಪದ ಗಾಯ ಉಂಟಾಗಿ ಅಥೇನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು ಪಿರ್ಯಾದಿದಾರರಾದ ಮಂಜುನಾಥ  (29ವರ್ಷ) ತಂದೆ-ಪುಟ್ಟಸ್ವಾಮಿ.ಪಿಲಾರು, ದರಂಗಾಬಾಗಿಲು, ಸೋಮೆಶ್ವರ, ಕೋಟೆಕಾರ್,  ಮಂಗಳೂರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಪ್ರಕರಣ 178/2012 279, 337 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅತ್ಯಾಚಾರ ಪ್ರಕರಣ:

ಬಜಪೆ ಠಾಣೆ;


  • ಪಿಯರ್ಾದಿದಾರರು  ಮತ್ತು ಆರೋಪಿ ನಾಗರಾಜನು ಕಳೆದ 3-4  ವರ್ಷಗಳಿಂದ ಪ್ರೀತಿಸುತ್ತಿದ್ದು, ದಿನಾಂಕ 18/02/2011 ರಂದು ಆರೋಪಿಯು ಪಿಯರ್ಾದಿದಾರಳನ್ನು ಕಟೀಲು ದೇವಸ್ಥಾನಕ್ಕೆ ಕರೆದುಕೊಂಡು ಹೋದವನು ತನ್ನ ಮನೆಯವರಿಗೆ ಪರಿಚಯ ಮಾಡಿಕೊಡುತ್ತೇನೆಂದು ಆತನ ಮನೆಯಾದ ಮಂಗಳೂರು ತಾಲೂಕು ಕರಂಬಾರಿನ ಸರಕಾರಿ ಶಾಲೆಯ ಬಳಿಯಲ್ಲಿರುವ ಮನೆಗೆ ಕರೆದುಕೊಂಡು ಹೋದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಪಿಯರ್ಾದಿ ತನ್ನ ಮನೆಗೆ ಹೋಗುವುದಾಗಿ ಹೇಳಿದಾಗ " ನಿನ್ನನ್ನು ಕೂಡಲೇ ಮದುವೆಯಾಗುತ್ತೇನೆ, ನೀನು ನನಗೆ ಬೇಕು " ಎಂದು ಹೇಳಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿರುವುದಲ್ಲದೇ ಆ ಬಳಿಕ ಕೂಡಾ ಹಲವಾರು ಬಾರಿ ದೇಹ ಸಂಪರ್ಕ ಮಾಡಿ, ಮದುವೆಯಾಗಲು ನಿರಾಕರಿಸಿದ್ದು, ಮಾತ್ರವಲ್ಲದೇ " ನಿನ್ನ ಮುಗೇರ ಜಾತಿ ಕೀಳು ಮಟ್ಟದ ಜಾತಿ, ನಿನ್ನನ್ನು ನನ್ನ ಕುಟುಂಬಕ್ಕೆ ಸೇರಿಸಲು ಸಾಧ್ಯವಿಲ್ಲ " ಎಂದು ಹೇಳೀದ್ದಲ್ಲದೇ ದಿನಾಂಕ 10/12/2012 ರಂದು ಬೆಳಿಗ್ಗೆ 10.00 ಗಂಟೆಗೆ ಪಿಯರ್ಾದಿದಾರರ ಮೊಬೈಲಿಗೆ ದೂರವಾಣಿ ಕರೆ ಮಾಡಿ " ಮುಗೇರ ದಿಕ್ಕಲೆನ್ ಮದುಮೆ ಆಪುಜಿ " ಎಂದು ಹೇಳಿದ್ದಲ್ಲದೇ, ಅದೇ ದಿನ ತನ್ನ ಊರಿನ ಮುಖಂಡ ವಿಶ್ವನಾಥ ಶೆಟ್ಟಿಯವರಿಂದ ಕೂಡಾ ಮದುವೆಗೆ ಒತ್ತಾಯ ಮಾಡದಂತೆ ಬೆದರಿಸಿ, ವಿಶ್ವನಾಥ ಶೆಟಿ ಕೂಡಾ " ಕಾಡ ದಿಕ್ಕಲೆನ್ ಮದುಮೆ ಆಪಾ, ಮುಗೇರ ದಿಕ್ಕಲೆನ್ ಮದ್ಮೆ ಆಪುಜಿ " ಎಂದು ಜಾತಿ ನಿಂದನೆ ಮಾಡಿರುತ್ತಾರೆ ಎಂಬುದಾಗಿ ಪಿಯರ್ಾದಿದಾರಳಾದ ಕುಮಾರಿ ಕುಮುದಾ, 25 ವರ್ಷ, ತಂದೆ: ಕೆ. ರಾಮ, ವಾಸ: ಕೊಡಂಗೆ ಮನೆ, ತಿರುವೈಲು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 245/2012 ಕಲಂ: 376 ಐಪಿಸಿ ಮತ್ತು ಕಲಂ:3(1)(ಥ) ಎಸ್.ಸಿ/ಎಸ್.ಟಿ ಕಾಯ್ದೆ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮುಲ್ಕಿ ಠಾಣೆ;


  • ದಿನಾಂಕ 10/12/2012 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 11/12/2012 ರಂದು ಬೆಳಿಗ್ಗೆ 05:00 ಗಂಟೆಯ  ಮಧ್ಯಾವದಿಯಲ್ಲಿ ಮಂಗಳೂರು ತಾಲೂಕು ಮಾನಂಪಾಡಿ ಗ್ರಾಮದ ಗಾಂದಾಡಿ ಮನೆ ಎಂಬ ಪಿರ್ಯಾದಿದಾರರ ಮನೆಗೆ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಚಿಲಕವನ್ನು ತೆಗೆದು ಒಳಪ್ರವೇಶಿಸಿ, ಪ್ಯಾಂಟಿನ ಜೇಬಿನಲ್ಲಿ ಇರಿಸಿದ್ದ ರೂ 5,200/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಸತೀಶ್ ಶೆಟ್ಟಿ (32), ತಂದೆ: ಕೆ ರಾಘು ಶೆಟ್ಟಿ, ವಾಸ: ಗಾಂದಾಡಿ ಮನೆ, ಮಾನಂಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ 155/2012 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ: 

ದಕ್ಷಿಣ ಠಾಣೆ;


  • ದಿನಾಂಕ 11-12-2012 ರಂದು ರಾತ್ರಿ ವೇಳೆ ಯಾರೋ ಕಳ್ಳರು ಮಂಗಳೂರು ಜಪ್ಪಿನ ಮೊಗರು ಗ್ರಾಮದ ಜಪ್ಪು ಕುಡುಪಾಡಿ ರೈಲ್ವೆ ಟ್ರ್ಯಾಕ್ ಬಳಿ ಇರುವ ಖಾಲಿ ಮೈದಾನ ಪ್ರದೇಶದಲ್ಲಿ ಫಿರ್ಯಾದಿದಾರರು ಪಾಕರ್್ ಮಾಡಿದ್ದ ಅವರ ಬಾಬ್ತು ಸುಮಾರು ಬೆಲೆ ಬಾಳುವ 20,000/- ಆಟೋ ರಿಕ್ಷಾ ಕೆಎ 19 ಬಿ 453. ಮತ್ತು ಇದರ ಬದಿಯಲ್ಲಿ ನಿಲ್ಲಿಸಿದ್ದ ಜಪ್ಪು ಕುಡುಪಾಡಿ ವಾಸಿಗಳಾದ ರಾಜೇಶ್ ಕಿಲ್ಲೆರವರ ಬಾಬ್ತು ಕೆಎ 19 ಬಿ 1758 ರ ಆಟೋ ರಿಕ್ಷಾದ ಸುಮಾರು 22,000/- ರೂ ಮೌಲ್ಯದ ಇಂಜಿನ್ ಅಸೆಂಬ್ಲಿ, ಕುಮುದಾಕ್ಷರವರ ಆಟೋ ರಿಕ್ಷಾ ಕೆಎ 19 ಬಿ 1765 ನೇದರ ಗ್ಯಾಸ್ ಸಿಲಿಂಡರ್, ಗ್ಯಾಸ್ ಕಿಟ್, ಗಂಗಾಧರ ಕಿಲ್ಲೆರವರ ಬಾಬ್ತು ಆಟೋ ರಿಕ್ಷಾ ಕೆಎ 19 ಎ 4373 ರ ಹಾಗೂ ಗಣೇಶ್ ನಾಯ್ಕ್ರವರ ಆಟೋ ರಿಕ್ಷಾ ಕೆಎ 19 ಸಿ 4000 ನೇದರ ಹಿಂಬದಿಯ ಎಡ ಬದಿಯ ಡಿಸ್ಕ್ ಸಮೇತ ಟಯರ್ ಅಂದಾಜು ಬೆಲೆ 3,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಎಂಬುದಾಗಿ ಶ್ರೀ ಕಿಶೋರ್ ಕೊಟ್ಟಾರಿ (2), ತಂದೆ: ದಿ/ ನಾರಾಯಣ ಕೊಟ್ಟಾರಿ, ವಾಸ: ವರ್ಣಶ್ರೀ  ನಿಲಯ, ಜಪ್ಪು ಕುಡುಪಾಡಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ಮೊ.ನಂ.219/12 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ;

ಮಂಗಳೂರು ಪೂರ್ವ ಠಾಣೆ,


  • ದಿನಾಂಕ: 12-12-2012 ರಂದು ಪಿರ್ಯಾದಿದಾರರ ಗಂಡ ಶಿವಾನಂದ ಎಂಬವರು ಬೆಳಗ್ಗೆ 05-30ಗಂಟೆಗೆ ಸ್ನಾನ ಮಾಡುವರೇ ಬಾತ್ರೂಮ್ಗೆ ಹೋದಾಗ ನೀರಿನ ಹೀಟರಿನಿಂದ ವಿದ್ಯುತ್ ಸ್ಪರ್ಶವಾಗಿ ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿದಲ್ಲಿ  ಶಿವಾನಂದರವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಗೌರಮ್ಮ (25) ಗಂಡ: ಶಿವಾನಚಿದ ವಾಸ: ಡಾ.ಮುಳ್ಳಂಕೋಜಿ ಕಂಪಾಂಡ್ ಆರ್ಯ ಸಮಾಜ ರಸ್ತೆ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 36/2012 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.